ಮಂಡ್ಯ: ಕೊರೊನಾ ಮುಕ್ತ ಮಂಡ್ಯ ಮಾಡುವುದೇ ನಮ್ಮಗುರಿಯಾಗಿದ್ದು, ಈ ನಿಟ್ಟಿನಲ್ಲಿ ನಿರಂತರವಾಗಿ ಮಾಸ್ಕ್ವಿತರಣೆ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡಗಣಿಗ ರವಿಕುಮಾರ್ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಸಿಬ್ಬಂದಿಗಳಿಗೆಮಾಸ್ಕ್ ವಿತರಿಸಿ, ನಗರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಊಟ ವಿತರಿಸಿ ಮಾತನಾಡಿದ ಅವರು,ಈಗಾಗಲೇ ನಾವು ಮಂಡ್ಯದಲ್ಲಿ 50 ಸಾವಿರಕ್ಕೂ ಹೆಚ್ಚುಮಾಸ್ಕ್ ವಿತರಣೆಗೆ ಮುಂದಾಗಿದ್ದೇವೆ. ಆಟೋ ಚಾಲಕರು,ಸಾರ್ವಜನಿಕರಿಗೆ ಮಾಸ್ಕ್ಗಳನ್ನು ವಿತರಿಸುತ್ತಿದ್ದೇವೆ.
ಈಗನ್ಯಾಯಾಲಯದ ಸಿಬ್ಬಂದಿಗಳಿಗೂ ಮಾಸ್ಕ್ ವಿತರಣೆಮಾಡುತ್ತಿದ್ದೇವೆ ಎಂದು ಹೇಳಿದರು.ಮಂಡ್ಯ ನಗರ ಸ್ವತ್ಛವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕರೇ ಕಾರಣ. ಅವರನ್ನು ಯಾರೂಮರೆಯುವಂತಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲೆಡೆಲಾಕ್‌ಡೌನ್ ಇದ್ದರೂ ಪೌರ ಕಾರ್ಮಿಕರು ಮಾತ್ರ ನಿತ್ಯವೂ ಸ್ವತ್ಛತಾ ಕಾರ್ಯದಲ್ಲಿ ತಲ್ಲೀನರಾಗುತ್ತಾರೆ.
ಇದರಿಂದ ನಗರಸ್ವತ್ಛವಾಗಿರಲು ಸಾಧ್ಯವಾಗಿದೆ ಎಂದರು.ಇಂಥ ಶ್ರಮಿಕ ವರ್ಗದ ಪೌರ ಕಾರ್ಮಿಕರ ನೆರವಿಗೆ ಧಾವಿಸುವುದು ಈ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿದೆ. ನಾವು ಅವರಿಗೆ ಪ್ರತಿನಿತ್ಯ ಮಧ್ಯಾಹ್ನ ಗುಣಮಟ್ಟದ ಶುದ್ಧ ಆಹಾರವನ್ನು ನೀಡುವ ವ್ಯವಸ್ಥೆಮಾಡುತ್ತಿದ್ದೇವೆ ಎಂದು ಹೇಳಿದರು.
ಒಟ್ಟಾರೆ ಕೊರೊನಾ ಮುಕ್ತ ಮಂಡ್ಯ ಮಾಡಲು ಎಲ್ಲರೂಸಹಕಾರ ನೀಡಬೇಕು. ಸರ್ಕಾರದ ಮಾರ್ಗಸೂಚಿ ಪ್ರಕಾರಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು ಎಂದು ಸಲಹೆ ನೀಡಿದರು.
ಪೌರಾಯುಕ್ತ ಲೋಕೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷಸಿ.ಡಿ.ಗಂಗಾಧರ್, ವಕೀಲರ ಸಂಘದ ಅಧ್ಯಕ್ಷಶಿವಕುಮಾರ್, ವಕೀಲ ಟಿ.ಎಸ್.ಸತ್ಯಾನಂದ, ನಗರಸಭಾಸದಸ್ಯರಾದ ರಾಮಲಿಂಗಯ್ಯ, ನಯೀಂ, ಕಲ್ಲಹಳ್ಳಿಚಂದ್ರು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ,ಗೌರೀಶ್, ಸಾತನೂರು ಕೃಷ್ಣ ಸೇರಿದಂತೆ ಮತ್ತಿತರರಿದ್ದರು.