Advertisement
ಕೆಲ ಜನಪ್ರತಿನಿಧಿಗಳುಸೋಂಕಿತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿನೆರವು ನೀಡುತ್ತಿದ್ದಾರೆ. ನೇರ, ನಿಷ್ಠುರನುಡಿಗಳಿಂದ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಗುರ್ತಿಸಿಕೊಂಡಿರುವ ಅರಸೀಕೆರೆ ಕ್ಷೇತ್ರದಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರುಕೊರೊನಾ ಪ್ರಕರಣವರದಿಯಾಗಲಾರಂಭಿಸಿದಒಂದು ವರ್ಷದಿಂದಲೂ ತಮ್ಮ ಕ್ಷೇತ್ರದ ಜನರಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.
Related Articles
Advertisement
ಸೋಂಕಿತರಿಗೆ ಚಿಕಿತ್ಸೆ, ನಿಮ್ಮ ಸಹಕಾರಹೇಗಿದೆ?
ಅರಸೀಕೆರೆ ಕ್ಷೇತ್ರದಲ್ಲಿ ಹೋಬಳಿವಾರು 5 ಕೊರೊನಾಕೇರ್ ಕೇಂದ್ರ ಆರಂಭಿಸಿದ್ದೇವೆ. ಈಗಾಗಲೇ 800 ಮಂದಿಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆಅರಸೀಕೆರೆ ಜೆ.ಸಿ.ಆಸ್ಪತ್ರೆಯನ್ನು ನವೀಕರಿಸುವ ಮೂಲಕ150 ಹಾಸಿಗೆಯ ಹೈಟೆಕ್ ಆಸ್ಪತ್ರೆಯನ್ನಾಗಿಮೇಲ್ದರ್ಜೆಗೇರಿಸಲಾಗಿದೆ. 60 ಮಂದಿ ಸೋಂಕಿತರಿಗೆಹಾಸಿಗೆಗಳನ್ನು ಕಾಯ್ದಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕೊರೊನಾ ರೋಗ ಲಕ್ಷಣಗಳಿರುವವರ ಪರೀಕ್ಷೆಗೆ ಪ್ರತ್ಯೇಕಕೇಂದ್ರ, ಲಸಿಕೆ ಪಡೆಯುವವರಿಗೆ ಪ್ರತ್ಯೇಕ ಕೇಂದ್ರದಮಾದರಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ 6ವೆಂಟಿಲೇಟರ್‌ಗಳ ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ.
ಚಿಕಿತ್ಸಾ ವ್ಯವಸ್ಥೆಗೆ ಜಿಲ್ಲಾಡಳಿತ, ಸರ್ಕಾರದಸಹಕಾರ ಹೇಗಿದೆ ?
ಕೊರೊನಾದಿಂದ ಜನರು ಸಂಕಷ್ಟ ಅನುಭವಿಸುತ್ತಿರುವಈ ಸಂದರ್ಭದಲ್ಲಿ ರಾಜಕಾರಣ ಮಾಡಲು ನಾನುಬಯಸುವುದಿಲ್ಲ. ಪಕ್ಷಾತೀತವಾಗಿ ಜನರಿಗೆ ನೆರವುಸಿಗಬೇಕು. ಕ್ಷೇತ್ರದ ಜನತೆ ಜಾತಿ, ಮತ , ಧರ್ಮಗಳಭೇದ ಇಲ್ಲದೆ ಸತತ ಮೂರು ಬಾರಿಗೆ ಶಾಸಕನಾಗಿ ಆಯ್ಕೆಮಾಡಿದ್ದಾರೆ. ಅವರ ಋಣ ತೀರಿಸುವ ನಿಟ್ಟಿನಲ್ಲಿ ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿದ್ದೇನೆ. ತಾಲೂಕು ಮತ್ತುಜಿಲ್ಲಾಡಳಿತದೊಂದಿಗೆ ಸಹಕರಿಸಿ ಸರ್ಕಾರದಿಂದಸಾಧ್ಯವಾದಷ್ಟೂ ನೆರವು ಪಡೆಯಲು ಪ್ರಯತ್ನನಡೆಸುತ್ತಿದ್ದೇನೆ. ಅದರ ಪರಿಣಾಮ ಅರಸೀಕೆರೆ ತಾಲೂಕುಆಸ್ಪತ್ರೆ ಮೇಲ್ದರ್ಜೆಗೇರಿದೆ. ನಿಮಿಷಕ್ಕೆ 393 ಲೀ. ಆಕ್ಸಿಜನ್‌ಉತ್ಪಾದನಾ ಪ್ಲಾಂಟ್ ಆಸ್ಪತ್ರೆ ಆವರಣದಲ್ಲಿನಿರ್ಮಾಣವಾಗುತ್ತಿದೆ. ನನ್ನ ಬೇಡಿಕೆಗಳಿಗೆ ಸ್ಪಂದಿಸುತ್ತಿರುವಮುಖ್ಯಮಂತ್ರಿವವರು, ಸಚಿವರು ಹಾಗೂ ಸಂಬಂಧಿಸಿದಅಧಿಕಾರ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವೆ.
ಸೋಂಕಿತರ ಸಂಕಷ್ಟಕ್ಕೆ ನಿಮ್ಮ ವೈಯಕ್ತಿಕಕೊಡುಗೆ ಏನು ?
ಜನರು ಸಂಕಷ್ಟಕ್ಕೆ ಸಿಲುಕಿದಾಗ ಜವಾಬ್ದಾರಿಯುತಶಾಸಕನಾಗಿ ಸ್ಪಂದಿಸುವ ಹೊಣೆಗಾರಿಕೆ ನನ್ನದು. ಅದನ್ನುಹೇಳಿಕೊಂಡು ಪ್ರಚಾರ ಪಡೆಯುವ ಉದ್ದೇಶ ನನ್ನದಲ್ಲ.ಆದರೆ ಚಿಕಿತ್ಸಾ ವ್ಯವಸ್ಥೆಯನ್ನು ಬಳಸಿಕೊಳ್ಳುಬೇಕು ಎಂಬದೃಷ್ಟಿಯಿಂದ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಯಸುತ್ತೇನೆ.ಕೊರೊನಾ ಸೋಂಕಿತರ ಅಗತ್ಯ ಸೇವೆಗಾಗಿ 5 ಉಚಿತಆ್ಯಂಬುಲೆನ್ಸ್ ಸೇವೆ ಒದಗಿಸಿದ್ದೇನೆ. ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದು ಹಣ ಕಟ್ಟಲು ಸಾದ್ಯವಾಗದೆ ಮೃತರ ಶವಪಡೆಯಲೂ ಸಾಧ್ಯವಾಗದೇ ಪರದಾಡುತ್ತಿದ್ದವರನೆರವಿಗೆ ಧಾವಿಸಿ ಖಾಸಗಿ ಆಸ್ಪತ್ರೆಯ ಶುಲ್ಕವನ್ನುವೈಯಕ್ತಿಕವಾಗಿ ಪಾವತಿಸಿ ಶವಗಳನ್ನು ಕೊಡಿಸುವ ಕೆಲಸಮಾಡಿದ್ದೇನೆ. ಆದರೆ ಎಡಗೈಲಿ ಕೊಟ್ಟಿದ್ದು ಬಲಗೈಗೆಗೊತ್ತಾಗಬಾರದು. ಹಾಗಾಗಿ ಹೆಚ್ಚು ಹೇಳಲುಇಚ್ಛಿಸುವುದಲ್ಲ. ಪ್ರಥಮ ಹಂತದ ಅಲೆಯಲ್ಲಿ ಬಡವರುಹಾಗೂ ಕೂಲಿ ಕಾರ್ಮಿಕರಿಗೆ 65 ಸಾವಿರ ಆಹಾರದ ಕಿಟ್‌ವಿತರಣೆ ಮಾಡಿದ್ದೆವು. ತೀವ್ರ ತೊಂದರೆಯಲ್ಲಿ ಸಿಲುಕಿರುವಕುಟುಂಬಗಳಿಗೆ ಆರ್ಥಿಕ ನೇರವು ನೀಡಲು ಬದ್ಧನಿದ್ದೇನೆ,ಇದು ಬೇರೆಯವರಿಗೂ ಪ್ರೇರಣೆಯಾಗಿ ಜನರ ಸಂಕಷ್ಟಕ್ಕೆಸ್ಪಂದಿಸಲು ಎಂದು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ ಅಷ್ಟೇ.
ಸೋಂಕು ತಡೆಗೆ ಸರ್ಕಾರಕ್ಕೆ ಏನು ಸಲಹೆಕೊಡ ಬಯಸುತ್ತೀರಿ ?
ನನಗೆ ಕೊರೊನಾ ಸೋಂಕಿತರ ನೋವು ಏನೆಂದುಗೊತ್ತಿದೆ. ನನಗೆ ಹಾಗೂ ತಮ್ಮ ಪತ್ನಿಗೂ ಸೋಂಕುತಗುಲಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ.ಇಂತಹ ಸಮಯದಲ್ಲಿ ಕೈ ಕಟ್ಟಿ ಮನೆಯಲ್ಲಿ ಕುಳಿತರೇಪರಮಾತ್ಮ ಮೆಚ್ಚುವುದಿಲ್ಲ ಎಂಬುವುದನ್ನು ಮನಗಂಡುಕಳೆದ 2 ತಿಂಗಳಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ.ಈಗ ಕೊರೊನಾ ತಡೆಗೆ ಲಸಿಕೆಯೊಂದೇ ಪರಿಹಾರ. ಈಗನೀಡುತ್ತಿರುವ ಲಸಿಕೆಯ ವೇಗ ಸಾಲದು. ವೇಗವನ್ನುಹೆಚ್ಚಿಸಿ 3 ನೇ ಅಲೆ ಆರಂಭವಾಗುವುದರೊಳಗೆ ಎಲ್ಲರಿಗೂಲಸಿಕೆ ನೀಡಬೇಕು.. ಕೊರೊನಾ ಮುಕ್ತ ಸಮಾಜನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯವಾದಎಲ್ಲ ಕ್ರಮಗಳನ್ನೂ ಕೈಗೊಳ್ಳಲಿ ಎಂದು ಹೇಳಬಯಸುತ್ತೇನೆ. ಜನರೂ ಸಹಕಾರ ನೀಡಬೇಕು ಎಂದುಅಶಿಸುತ್ತೇನೆ.
ರಾಮಚಂದ್ರ