Advertisement

ಪಾಲಿಕೆ ಕೈಗೊಂಡ ಹಲವು ಕ್ರಮಗಳಿಂದ ಸೋಂಕಿನ ಸಂಖ್ಯೆ ಇಳಿಮುಖ

08:08 PM May 27, 2021 | Team Udayavani |

ಕೋವಿಡ್ ಸೋಂಕಿತರಿಗೆ ಆಕ್ಸಿಜನ್‌ ಹಾಸಿಗೆ ಇಲ್ಲಎಂದು ಜನ ಪರಿತಪ್ಪಿಸುತ್ತಿದ್ದ ವೇಳೆಯಲ್ಲಿ ಜಿಲ್ಲಾಡಳಿತಮತ್ತು ತುಮಕೂರು ಮಹಾನಗರ ಪಾಲಿಕೆಮೇಯರ್‌, ಉಪಮೇಯರ್‌, ಪಾಲಿಕೆ ಸದಸ್ಯರು,ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಮತ್ತು ಮಾಜಿ ಸಚಿವರು, ಮಾಜಿ ಶಾಸಕರು,ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ವೇಗವಾಗಿ ಹರಡುತ್ತಿದ್ದ ಕೊರೊನಾವನ್ನು ಕಟ್ಟಿಹಾಕುವ ಪ್ರಯತ್ನ ತುಮಕೂರಿನಲ್ಲಿ ನಡೆದಿದ್ದು, ಜನ ಲಾಕ್‌ಡೌನ್‌ನಿಂದ ಹೊರ ಬರದೇಇದ್ದದ್ದು, ಪಾಲಿಕೆ ತೆಗೆದು ಕೊಂಡಿರುವ ಕ್ರಮದಿಂದ ಕೊರೊನಾ ಹಂತ – ಹಂತವಾಗಿ ಕಡಿಮೆ ಯಾಗಲು ಕಾರಣವಾಗಿದೆ.„

Advertisement

 ತುಮಕೂರು ನಗರದಲ್ಲಿ ಸೋಂಕು ವೇಗವಾಗಿಹರಡಲು ಕಾರಣವೇನು?

ತುಮಕೂರು ನಗರ 18 ಜಿಲ್ಲೆ ಸಂಪರ್ಕ ಕಲ್ಪಿಸುವಪ್ರಮುಖ ಜಿಲ್ಲಾ ಕೇಂದ್ರ. ಇಲ್ಲಿಗೆ ಎಲ್ಲ ಕಡೆಯಿಂದಜನ ಬರುತ್ತಾರೆ. ಜನ ಸಂದಣಿ ಹೆಚ್ಚಿದ್ದರಿಂದಬೆಂಗಳೂರಿನಲ್ಲಿ ಸೋಂಕು ಹೆಚ್ಚು ತಗಲಿದ್ದು, ದಿನವೂಸಾವಿರಾರು ಜನ ಬೆಂಗಳೂರಿಗೆ ಹೋಗಿಬರುತ್ತಿದ್ದರಿಂದ ನಗರದಲ್ಲಿ ಸೋಂಕು ಹೆಚ್ಚುವೇಗವಾಗಿ ಹರಡಲು ಕಾರಣವಾಗಿತ್ತು.

ಕೊರೊನಾ ನಿಯಂತ್ರಣಕ್ಕೆ ನಗರದಲ್ಲಿ ಏನೆಲ್ಲಕ್ರಮ ಕೈಗೊಂಡಿದ್ದೀರಾ?

ಕೊರೊನಾ ಸೋಂಕು ನಗರದಲ್ಲಿ ನಿಯಂತ್ರಣಕ್ಕೆಬರಲು ಸರ್ಕಾರ ಲಾಕ್‌ಡೌನ್‌ ಮಾಡಿದ್ದು, ಬಹಳಪರಿಣಾಮ ಬೀರಿತು. ಜನರು ಕೊರೊನಾ ನಿಯಮತಪ್ಪದೇ ಪಾಲಿಸಿದರು. ಮಹಾನಗರ ಪಾಲಿಕೆಯಿಂದಹಲವು ಕ್ರಮ ಕೈಗೊಂಡ ಪರಿಣಾಮ ನಿಯಂತ್ರಣವಾಗುತ್ತಿದೆ ಎಂದರೆ ಆಗುವುದಿಲ್ಲ. ನಮ್ಮಲ್ಲಿ ಜಾಗೃತಿಇರಲೇ ಬೇಕು.

Advertisement

ಕೊರೊನಾ 3ನೇ ಅಲೆ ಬರುತ್ತದೆ ಎಂದು ಈಗಾಗಲೇ ತಜ್ಞರು ಹೇಳುತ್ತಿದ್ದಾರೆ. ಅದರ ನಿಯಂತ್ರಣಕ್ಕೆ ಏನು ಕ್ರಮ ಆಗಿದೆ?

ಕೋವಿಡ್‌ ಮೊದಲ ಅಲೆ ಆಯಿತು.2ನೇ ಅಲೆ ಈಗ ಜನರನ್ನು ಭೀತಿಗೊಳಿಸುತ್ತಿದೆ. ಮುಂದೆ 3ನೇ ಅಲೆ ಬರುತ್ತದೆ ಎಂದುತಜ್ಞರು ಹೇಳುತ್ತಿದ್ದಾರೆ. ಅದರ ನಿಯಂತ್ರಣಕ್ಕೆಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ನಾವುಪಾಲಿಕೆ ವ್ಯಾಪ್ತಿಯಲ್ಲಿ ಮುಂದೆ ಬರುವ ವೇಗತಡೆಯಲು ಕ್ರಮ ಕೈಗೊಂಡಿದ್ದೇವೆ. ಕೊರೊನಾನಿಯಂತ್ರಿಸಲು ಪ್ರತಿಯೊಬ್ಬರೂ ಲಸಿಕೆಪಡೆಯಬೇಕು.

ಜನರನ್ನು ತೀವ್ರವಾಗಿ ಕಾಡುತ್ತಿರುವ ಕೊರೊನಾ ಸೋಂಕಿನ ವೇಳೆ ನಿಮ್ಮ ಜನ ಸೇವೆ ಹೇಗಿದೆ?

ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಜನರೇಹಲವಾರು ಕ್ರಮ ಕೈಗೊಂಡಿದ್ದಾರೆ. ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಸ್ವಯಂ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಕೆಲವು ಕಡೆಕೋವಿಡ್‌ ಕೇರ್‌ ಸೆಂಟರ್‌ ತೆರೆದು ಸೇವೆಮಾಡುತ್ತಿದ್ದಾರೆ. ನಾವು ಜನರಿಗೆ ನಮ್ಮ ಕೈಲಾದ ಎಲ್ಲನೆರವು ನೀಡುತ್ತಿದ್ದೇವೆ. ನಗರದಲ್ಲಿರುವ ಅನೇಕರುತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಇಂತಹಸಂದರ್ಭದಲ್ಲಿ ಸರ್ಕಾರವೇ ಎಲ್ಲವನ್ನು ಮಾಡಲುಸಾಧ್ಯವಿಲ್ಲ. ತಮ್ಮ ಕೈಲಿ ಸಹಾಯ ಮಾಡಲು ಸಾಧ್ಯಇರುವವರು ಸಂಕಷ್ಟದಲ್ಲಿ ಇರುವವರಿಗೆ ಸಹಾಯಮಾಡಿ ಎನ್ನುವುದು ನನ್ನ ಮನವಿ

ನಿಯಂತ್ರಿಸಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ?

ಮಹಾನಗರ ಪಾಲಿಕೆಯಿಂದ ಕೊರೊನಾ ಉನಗರ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತಸೂಚಿಸಿದ ಮಾರ್ಗದರ್ಶನದಂತೆ ತುಮಕೂರು ಮಹಾನಗರಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಂಡಿದೆ. ನಗರದಲ್ಲಿ ಆಶಾಕಾರ್ಯಕರ್ತರು ಕಡಿಮೆ ಇರುವುದರಿಂದ ಸ್ವಯಂ ಸೇವಕರ ನೆರವುಪಡೆದು ಹೋಂ ಐಸೋಲೇಷನ್‌ ಇದ್ದವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವಪ್ರಯತ್ನ ನಡೆದಿದೆ. ವಾರ್ಡ್‌ಗಳಲ್ಲಿ ಸ್ಯಾನಟೈಸ್‌ ಮಾಡಲಾಗಿದೆ.ಕೊರೊನಾ ಪರೀಕ್ಷೆ ಹೆಚ್ಚಿಸಲಾಗಿದೆ.\

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next