Advertisement

24 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

04:39 PM Dec 10, 2021 | Adarsha |

ಭದ್ರಾವತಿ: ಹಳೇನಗರದ ಖಾಸಗಿ ಆಸ್ಪತ್ರೆಯ 24 ಮಂದಿನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುದೃಢಪಟ್ಟಿರುವುದರಿಂದ ಆಸ್ಪತ್ರೆ ಮತ್ತು ನರ್ಸಿಂಗ್‌ಹಾಸ್ಟೆಲ್‌ ಅನ್ನು ಗುರುವಾರ ಬೆಳಗ್ಗೆ ಅ ಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ. ಸೋಕಿತರನ್ನು ಆಸ್ಪತ್ರೆ ಒಳಬಾಗದಲ್ಲಿಐಸೋಲೇಶನ್‌ನಲ್ಲಿರಿಸಲಾಗಿದೆ.

Advertisement

ಆಸ್ಪತ್ರೆ ಹೊರ ಭಾಗದಲ್ಲಿಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.ಕಳೆದ ವಾರ ಶಿವಮೊಗ್ಗದಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳಲ್ಲಿಕೊರೊನಾ ಸೋಂಕು ದೃಢಪಟ್ಟಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಡಳಿತಎಚ್ಚೆತ್ತುಕೊಂಡು ಖಾಸಗಿ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಪರೀಕ್ಷೆಬರೆದಿದ್ದ ಭದ್ರಾವತಿ ಖಾಸಗಿ ಆಸ್ಪತ್ರೆಯ ವಿದ್ಯಾರ್ಥಿಗಳನ್ನುಪರೀಕ್ಷೆಗೆ ಒಳಪಡಿಸಲಾಗಿದ್ದು ಓರ್ವ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡಿತ್ತು.

ನಂತರ 2 ನೇ ಹಂತದಲ್ಲಿ ಕೊರೊನಾ ಸೋಂಕು ಪರೀಕ್ಷೆಮಾಡಿದಾಗ 24 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಆದೇಶದಂತೆ ಹಾಗೂ ಡಿಎಚ್‌ಒ ಮಾರ್ಗದರ್ಶನದಲ್ಲಿಗುರುವಾರ ಬೆಳಗ್ಗೆ 9 ಗಂಟೆಗೆ ತಹಶೀಲ್ದಾರ್‌ ಆರ್‌. ಪ್ರದೀಪ್‌,ತಾಲೂಕು ಆರೋಗ್ಯಾ ಧಿಕಾರಿ ಡಾ| ಅಶೋಕ್‌, ನಗರಸಭಾಪೌರಾಯುಕ್ತ ಪರಮೇಶ್‌ ಮತ್ತು ಸಿಬ್ಬಂದಿ ಪೊಲೀಸ್‌ಬಂದೋಬಸ್ತ್ನೊಂದಿಗೆ ತೆರಳಿ ಆಸ್ಪತ್ರೆಯನ್ನು ಸೀಲ್‌ಡೌನ್‌ಮಾಡಿದ್ದಾರೆ.ಸೋಕಿತರೆಲ್ಲರನ್ನು ಆಸ್ಪತ್ರೆಯಲ್ಲಿ ಐಸೋಲೇಶನ್‌ಮಾಡಲಾಗಿದೆ.

ಆಸ್ಪತ್ರೆಯನ್ನು ಯಾರೂ ಒಳ ಪ್ರವೇಶಿಸದಂತೆಬಂದ್‌ ಮಾಡಲಾಗಿ ಸ್ಯಾನಿಟೈಸ್‌ ಮಾಡಲಾಗಿದೆ. ಆಸ್ಪತ್ರೆಯವೈದ್ಯರು ಮತ್ತು ಸಿಬ್ಬಂದಿಗಳನ್ನು ಪರೀಕ್ಷಿಸಲಾಗುತ್ತಿದೆ.ಒಳ ರೋಗಿಗಳ ಬಗ್ಗೆ ಎಚ್ಚರ ವಹಿಸಲಾಗಿದೆ. ಒಮಿಕ್ರಾನ್‌ಸೋಂಕಿನ ಪರೀಕ್ಷೆಗೂ ಕಳುಹಿಸಿಕೊಡಲಾಗಿದೆ ಎಂದುತಾಲೂಕು ಆರೋಗ್ಯಾ ಧಿಕಾರಿ ಡಾ|ಅಶೋಕ್‌ ತಿಳಿಸಿದರು.

ಉಪವಿಭಾಗಾ ಧಿಕಾರಿ ಡಾ| ಟಿ.ವಿ.ಪ್ರಕಾಶ್‌ ಸ್ಪಷ್ಟನೆ:ಶಿವಮೊಗ್ಗದ ಖಾಸಗಿ ಲೈಫ್‌ಕೇರ್‌ ಆಸ್ಪತ್ರೆಯಲ್ಲಿ 172ಮಂದಿ ನರ್ಸಿಂಗ್‌ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಅವರೆಲ್ಲರನ್ನೂ ಪರೀಕ್ಷಿಸಲಾಗಿದ್ದು ಓರ್ವ ವಿದ್ಯಾರ್ಥಿನಿಗೆಸೋಂಕು ಕಂಡು ಬಂದಿತ್ತು. 2 ನೇ ಬಾರಿ ಪರೀಕ್ಷಿಸಿದಾಗಯಾರಲ್ಲೂ ಸೋಂಕು ಕಂಡು ಬಂದಿಲ್ಲ. ನಂತರ 3 ಮತ್ತು 4ನೇ ಅವ ಧಿಯಲ್ಲಿ ಪರೀಕ್ಷಿಸಿದಾಗ 172 ಮಂದಿ ವಿದ್ಯಾರ್ಥಿಗಳಪೈಕಿ 24 ಮಂದಿಗೆ ಸೋಂಕಿರುವುದು ಕಂಡು ಬಂದಿದೆ.

Advertisement

ಇದರಿಂದಾಗಿ ನರ್ಸಿಂಗ್‌ ಕಾಲೇಜು, ಹಾಸ್ಟೆಲ್‌, ಆಸ್ಪತ್ರೆಯನ್ನುಸೀಲ್‌ಡೌನ್‌ ಮಾಡಲಾಗಿದೆ. ಆಸ್ಪತ್ರೆಯಲ್ಲಿ 165 ಮಂದಿ ಒಳರೋಗಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿಗಳನ್ನು ಸಹಪರೀಕ್ಷೆಗೆ ಒಳ ಪಡಿಸಲಾಗಿದೆ. 24 ಗಂಟೆಗಳ ಕಾಲ ಯಾರನ್ನುಒಳ ಹೋಗಲು ಬಿಡಲ್ಲ. ಇವರಲ್ಲಿ ಯಾರಿಗಾದರೂಪಾಸಿಟಿವ್‌ ಕಂಡು ಬಂದಲ್ಲಿ ಅವರೆಲ್ಲರ ಟ್ರಾವೆಲ್‌ ಹಿಸ್ಟರಿಪಡೆಯಲಾಗುತ್ತದೆ ಎಂದು ಉಪ ವಿಭಾಗಾಧಿ ಕಾರಿಡಾ| ಟಿ.ವಿ.ಪ್ರಕಾಶ್‌ ತಿಳಿಸಿದರು. ತಹಶೀಲ್ದಾರ್‌ಆರ್‌. ಪ್ರದೀಪ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next