ಚಿತ್ರದುರ್ಗ: ಸಂಭಾವ್ಯ ಕೋವಿಡ್-19 ಮೂರನೇಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಪಾಲಿಸಬೇಕು ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ ಅ ಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ಹಮ್ಮಿಕೊಂಡಿದ್ದ ಕೋವಿಡ್-19ಸಂಭಾವ್ಯ ಮೂರನೇ ಅಲೆ ಕುರಿತು ಜಿಲ್ಲಾ ಮಟ್ಟದಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.
ಮೂರನೇ ಅಲೆ ತಡೆಗಟ್ಟುವಉದ್ದೇಶದಿಂದ ಬೆಡ್ ವ್ಯವಸ್ಥೆ, ಇದಕ್ಕೆ ಬೇಕಾದಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನುಕೈಗೊಳ್ಳುವಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಮುಖ್ಯಸ್ಥರಿಗೆ ತಾಕೀತು ಮಾಡಿದರು.ಎರಡನೇ ಅಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆಸಾಕಷ್ಟು ಶ್ರಮಿಸಲಾಗಿದೆ. ನಗರ ಮಟ್ಟದಿಂದ ಗ್ರಾಮಮಟ್ಟದವರೆಗೂ ಸರ್ವೇಲೆನ್ಸ್ ಚಟುವಟಿಕೆಗಳನ್ನುನಿರಂತರವಾಗಿ ನಡೆಯಬೇಕು.
ವಿದೇಶ, ಹೊರರಾಜ್ಯ, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವರಕುರಿತು ನಿಗಾ ವಹಿಸಬೇಕು. ಇದಕ್ಕಾಗಿ ಕಂದಾಯ,ಪೊಲೀಸ್, ಆರೋಗ್ಯ ಇಲಾಖೆಯಿಂದ ತಂಡರಚಿಸಲಾಗುತ್ತದೆ ಎಂದರು.ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲುಸ್ಥಳ ನಿಗ ದಿ ಮಾಡಿಕೊಳ್ಳಬೇಕು. ಡಾಬಾ,ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸಂಬಂ ಧಿಸಿದಮಾಲೀಕರು ಥರ್ಮಲ್ ಸ್ಕಾÂನರ್ ಮೂಲಕತಪಾಸಣೆಗೆ ಒಳಪಡಿಸಬೇಕು.ಆಯುಷ್ಮಾನ್ ಭಾರತ್ ಯೋಜನೆಯಡಿಕೋವಿಡ್ ಚಿಕಿತ್ಸೆಗೆ ಸಂಬಂಧಿ ಸಿದಂತೆ ಎಲ್ಲಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಇದಕ್ಕಾಗಿಆನ್‌ಲೈನ್ ಬೆಡ್ ಮ್ಯಾನೇಜ್‌ಮೆಂಟ್ ಸಿದ್ಧತೆಮಾಡಿಕೊಂಡಿರಬೇಕು. ಖಾಸಗಿ ಆಸ್ಪತ್ರೆಗಳುಇದಕ್ಕಾಗಿ ಮೀಸಲಿರುವ ಬೆಡ್‌ಗಳ ವಿವರನೀಡಬೇಕು.
ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಬೆಡ್‌ಗಳನ್ನು ಹೊಂದಿರುವ 16 ಖಾಸಗಿ ಆಸ್ಪತ್ರೆಗಳುಇದ್ದು, ಈ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್‌ಗಾಗಿಬೆಡ್‌ಗಳನ್ನು ಮೀಸಲಿಡಬೇಕು. ಜೊತೆಗೆ ಆಕ್ಸಿಜನ್‌ಉತ್ಪದನಾ ಘಟಕಗಳನ್ನು ಹೊಂದಿರಬೇಕು.ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ತಾಲ್ಲೂಕುಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಟ್ಟು 8 ಕಡೆ ಆಕ್ಸಿಜನ್‌ಘಟಕಗಳಿದ್ದು, ಈಗಾಗಲೇ 6 ಘಟಕಗಳುಕಾರ್ಯಾರಂಭಗೊಂಡಿದ್ದು, ಹೊಸದುರ್ಗ ಮತ್ತುಹೊಳಲ್ಕೆರೆ ಕಾರ್ಯಾರಂಭ ಮಾಡಬೇಕಿದೆ ಎಂದುತಿಳಿಸಿದರು.