ಶಿವಮೊಗ್ಗ: ಭಾರತ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಸಾರ್ವತ್ರಿಕ ಲಸಿಕಾಕರಣಕ್ಕೆಹೊಸದಾಗಿ ಸೇರ್ಪಡೆಯಾಗಿರುವ ‘ನ್ಯುಮೊಕಾಕಲ್‌ಕಾಂಜುಗೇಟ್ ಲಸಿಕೆ'(ಪಿಸಿವಿ) ಯನ್ನು ಎಲ್ಲ ಅರ್ಹಮಕ್ಕಳಿಗೆ ನೀಡುವ ಮೂಲಕ ಈ ಲಸಿಕಾಕರಣವನ್ನುಯಶಸ್ವಿಗೊಳಿಸಬೇಕೆಂದು ಜಿಲ್ಲಾ ಧಿಕಾರಿಕೆ.ಬಿ. ಶಿವಕುಮಾರ್ ನುಡಿದರು.
ತುಂಗಾನಗರ ನಗರ ಪ್ರಸೂತಿ ಆರೋಗ್ಯಕೇಂದ್ರದಲ್ಲಿ ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ(ಪಿಸಿವಿ) ನೀಡಿಕೆ ಕುರಿತು ಏರ್ಪಡಿಸಲಾಗಿದ್ದಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರುಮಾತನಾಡಿದರು.ನ್ಯುಮೋನಿಯಾದಂತಹ ಕಾಯಿಲೆಯಿಂದಮಕ್ಕಳನ್ನು ರಕ್ಷಿಸುವ ಪಿಸಿವಿ ಲಸಿಕೆಯನ್ನು ಎಲ್ಲ ಮಕ್ಕಳಿಗೆನೀಡುವ ಮೂಲಕ ಆರೋಗ್ಯವಂತ ದೇಶ ಮಾಡುವಲ್ಲಿಎಲ್ಲರೂ ಸಹಕರಿಸಬೇಕೆಂದರು.ಜಿಪಂ ಸಿಇಒ ಎಂ.ಎಲ್. ವೈಶಾಲಿ ಮಾತನಾಡಿ,ಪ್ರಸ್ತುತ ಸಂದರ್ಭದಲ್ಲಿ ಪಿಸಿವಿ ಒಂದುವರದಾನವಾಗಿ ಬಂದಿದೆ.
ಮಕ್ಕಳನ್ನು ಉಸಿರಾಟಸಂಬಂ ಕಾಯಿಲೆಯಿಂದ ರಕ್ಷಿಸುವ ಈ ಲಸಿಕೆ ದರಖಾಸಗಿಯಾಗಿ ದುಬಾರಿಯಾಗಿದ್ದು ಭಾರತ ಸರ್ಕಾರಇದೀಗ ಉಚಿತವಾಗಿ ಮೂರು ಡೋಸ್‌ಗಳಲ್ಲಿನೀಡುತ್ತಿದೆ. ಮೂರೂ ಡೋಸ್‌ಗಳನ್ನು ಪೋಷಕರುಸಕಾಲದಲ್ಲಿ ಮಕ್ಕಳಿಗೆ ಹಾಕಿಸುವ ಮೂಲಕ ಈಲಸಿಕಾಕರಣದ ಸದುಪಯೋಗ ಪಡೆಯಬೇಕೆಂದುಹೇಳಿದರು.ಡಬುÉ Âಎಚ್‌ಒ ಸಲಹೆಗಾರ ಡಾ| ಸತೀಶ್‌ಚಂದ್ರ ಮಾತನಾಡಿ, ಭಾರತ ಸರ್ಕಾರದ ಸಾರ್ವತ್ರಿಕಲಸಿಕೆಯಲ್ಲಿ ಇದು 12 ನೇ ಲಸಿಕೆಯಾಗಿಸೇರ್ಪಡೆಗೊಂಡಿದೆ.
ಇದು ಸ್ಟ್ರೆಪೊràಕೋಕಸ್‌ನ್ಯುಮೋನಿಯಾ(ನ್ಯುಮೊಕಾಕಲ್) ಎಂದುಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಉಂಟಾಗುವರೋಗಗಳ ಒಂದು ಗುಂಪು. ನ್ಯುಮೋಕಾಕಲ್‌ರೋಗಾಣು ಶರೀರದ ಬೇರೆ ಬೇರೆ ರೀತಿಯರೋಗಗಳಿಗೆ ಕಾರಣವಾಗಬಹುದಾಗಿದ್ದು ಐದುವರ್ಷದ ಒಳಗಿನ ಮಕ್ಕಳಲ್ಲಿ ಈ ಬ್ಯಾಕ್ಟೀರಿಯಾಗಳಿಂದಉಂಟಾಗುವ ನ್ಯೂಮೋನಿಯಾಗೆ ಸ್ಪ್ರೆಪೊràಕೋಕಸ್‌ನ್ಯೂನಿಯಾ ಪ್ರಮುಖ ಕಾರಣವಾಗಿದೆ ಎಂದರು.ಪಿಸಿವಿ ಲಸಿಕೆಯು ಚಿಕ್ಕ ಮಕ್ಕಳನ್ನುನ್ಯುಮೋನಿಯಾ ಕಾಯಿಲೆಯಿಂದ ರಕ್ಷಿಸುತ್ತದೆ.
ಈ ಲಸಿಕೆ ಸುರಕ್ಷಿತವಾಗಿದ್ದು ಈಗಾಗಲೇ ಜಗತ್ತಿನ 146ದೇಶಗಳಲ್ಲಿ ನೀಡಲಾಗುತ್ತಿದೆ ಎಂದರು.ಆರ್‌ಸಿಎಚ್‌ಒ ಡಾ| ನಾಗರಾಜ ನಾಯ್ಕಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2021-22 ನೇ ಸಾಲಿಗೆ ಒಟ್ಟು 24,284ಮಕ್ಕಳಿಗೆ ಸಾರ್ವತ್ರಿಕ ಲಸಿಕಾಕರಣದಲ್ಲಿ ಈ ಲಸಿಕೆನೀಡಲಾಗುವುದು ಎಂದರು.ತುಂಗಾನಗರ ನಗರ ಆರೋಗ್ಯ ಕೇಂದ್ರದಲ್ಲಿಮೊದಲನೇ ಡೋಸ್ ಪಿಸಿವಿ ಲಸಿಕೆಯನ್ನು ಮಕ್ಕಳಿಗೆನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾ ಧಿಕಾರಿ ಡಾ| ರಾಜೇಶ್ ಸುರಗಿಹಳ್ಳಿ,ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ಒ.ಮಲ್ಲಪ್ಪ,ತಾಲೂಕು ಆರೋಗ್ಯಾ ಧಿಕಾರಿ ಡಾ| ಚಂದ್ರಶೇಖರ್,ಡಾ| ಭೀಮಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎ.ಅಕ್ತರ್, ಆರೋಗ್ಯ ಶಿಕ್ಷಣಾ ಧಿಕಾರಿ ಪ್ರತಿಮಾ ಇತರರುಇದ್ದರು.