Advertisement

ಲಸಿಕೆ ಪಡೆದವರಿಗೆ ಮಾತ್ರ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶ

02:27 PM Sep 07, 2021 | Team Udayavani |

ಕೊಪ್ಪಳ: ಜಿಲ್ಲೆಯ ನಾಗರಿಕರ ಆರೋಗ್ಯದಹಿತದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿಕೋವಿಡ್‌-19 ಲಸಿಕೆ ಪಡೆದುಕೊಳ್ಳುವ ನಿಟ್ಟಿನಲ್ಲಿವ್ಯಾಕ್ಸಿನ್‌ ಪಡೆದವರಿಗೆ ಮಾತ್ರ ಜಿಲ್ಲಾಡಳಿತ ಭವನಕ್ಕೆಪ್ರವೇಶವಿದೆ ಎಂದು ಡಿಸಿ ವಿಕಾಸ್‌ ಕಿಶೋರ್‌ಸುರಳ್ಕರ್‌ ಆದೇಶ ಹೊರಡಿಸಿದ್ದಾರೆ.

Advertisement

ಈ ಪ್ರಯುಕ್ತ ಸೋಮವಾರ ಜಿಲ್ಲಾಡಳಿತಭವನದ ಮುಖ್ಯಪ್ರವೇಶ ದ್ವಾರದಲ್ಲಿ ಆರೋಗ್ಯಇಲಾಖೆಯ ಲಸಿಕಾ ವಿತರಣೆ ತಂಡದಿಂದಜಿಲ್ಲಾಡಳಿತ ಭವನಕ್ಕೆ ಬರುವ ಸಾರ್ವಜನಿಕರು,ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೂ ಲಸಿಕೆ ನೀಡಲಾಯಿತು.

ಕೋವಿಡ್‌-19 ಮೂರನೇ ಅಲೆಯನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನುಜಾರಿಗೆ ತಂದಿರುವ ಡಿಸಿ ವಿಕಾಸ್‌ ಕಿಶೋರಸುರಳ್ಕರ್‌, ಕೋವಿಡ್‌ ಲಸಿಕೆ ಪಡೆಯದೇ ಇರುವಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿಮತ್ತು ಸಾರ್ವಜನಿಕರಿಗೆ ಜಿಲ್ಲಾಡಳಿತ ಭವನದಪ್ರವೇಶ ನಿರ್ಬಂಧಿಸಿ ಸೆ. 4ರಂದು ಆದೇಶಹೊರಡಿಸಿದ್ದಾರೆ. ಈ ಆದೇಶವನ್ನು ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಜಿಲ್ಲಾಡಳಿತಭವನಕ್ಕೆ ಬರುವ ಪ್ರತಿಯೊಬ್ಬರನ್ನೂ ವ್ಯಾಕ್ಸಿನ್‌ಪಡೆದಿರುವ ಕುರಿತು ಪರಿಶೀಲಿಸಿ, ಲಸಿಕೆ ಪ್ರಮಾಣಪತ್ರ ಹೊಂದಿರುವವರನ್ನು ಮಾತ್ರ ಜಿಲ್ಲಾಡಳಿತಭವನದೊಳಗೆ ಬಿಡಲಾಗುತ್ತಿದೆ.
ಸಾರ್ವಜನಿಕರಆರೋಗ್ಯದ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಈ  ಆದೇಶ ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಂತಿದೆ.

ಲಸಿಕೆಪಡೆಯದವರಿಗೆಜಿಲ್ಲಾಡಳಿತದಿಂದಲಸಿಕೆಹಾಕುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಭವನದಮುಖ್ಯ ದ್ವಾರದಲ್ಲಿಯೇ ವ್ಯವಸ್ಥೆ ಮಾಡಲಾಗಿದ್ದು,ಆರೋಗ್ಯ ಇಲಾಖೆಯ ಲಸಿಕಾ ವಿತರಣೆ ತಂಡಬೆಳಗ್ಗೆ 1೦ ರಿಂದಮಧ್ಯಾಹ್ನ2 ಗಂಟೆಗಳವರೆಗೆಲಸಿಕೆಹಾಕುತ್ತಿದ್ದು, ಸಾರ್ವಜನಿಕರು ಆಧಾರ್‌ ಕಾರ್ಡ್‌,ಚುನಾವಣಾ ಗುರುತಿನ ಚೀಟಿ, ಡ್ರೆçವಿಂಗ್‌ ಲೈಸೆನ್ಸ್‌,ಬ್ಯಾಂಕ್‌ ಖಾತೆಯ  ಪುಸ್ತಕಗಳಲ್ಲಿ‌ ಯಾವುದಾದರೂ ಒಂದನ್ನು ತೋರಿಸಿ ಲಸಿಕೆ ಪಡೆಯಬಹುದು.

ಜಿಲ್ಲಾಡಳಿತ ಭವನಕ್ಕೆ ಪ್ರತಿದಿನ ಅಧಿಕಾರಿ,ಸಿಬ್ಬಂದಿ ಮತ್ತು ಸಾÊìಜನಿ ‌ ಕರು ಸೇರಿದಂತೆಸುಮಾರು 500ರಿಂದ 1000 ಜನ ಬರುತ್ತಾರೆ.ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಬರಬೇಕು.

Advertisement

ಇಲ್ಲವಾದರೆ ಕೋವಿಡ್‌ಮಾರ್ಗಸೂಚಿ ಅನ್ವಯ ದಂಡವಿಧಿಸುವಂತೆಯೂಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಜಿಲ್ಲಾಡಳಿತಕ್ಕೆಬರುವ ಲಸಿಕೆ ಪಡೆದಿರದ ಪ್ರತಿಯೊಬ್ಬರಿಗೂ ಲಸಿಕೆಹಾಕಿಸಿಯೇ ಜಿಲ್ಲಾಡಳಿತದೊಳಗೆ ಬಿಡಲಾಗುತ್ತಿದೆ.ಲಸಿಕೆ ಪಡೆಯದ ಸಾರ್ವಜನಿಕರು ಕಡ್ಡಾಯವಾಗಿತಮ್ಮ ಹತ್ತಿರದ ಸರ್ಕಾರಿ ಆಸ ³ತ್ರೆಗೆ ಹೋಗಿ ಲಸಿಕೆಪಡೆಯುವಂತೆ ಡಿಸಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next