Advertisement
ಗ್ರಾಮೀಣ ಭಾಗದ ತಾಲೂಕು ಆಸ್ಪತ್ರೆ ಸೇರಿನಗರದಲ್ಲಿದ್ದ ಪ್ರಮುಖ ಆಸ್ಪತ್ರೆಗಳಲ್ಲಿ ಇದ್ದ ಬೆರಳೆಣಿಕೆಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್‌ಕೋವಿಡ್‌ನಂತರ ಎರಡಂಕಿ ದಾಟಿದೆ. ಜತೆಗೆ ಆಸ್ಪತ್ರೆಆವರಣಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಿ,ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ವ್ಯವಸ್ಥೆಕಲ್ಪಿಸುವ ಮೂಲಕ ವೈದ್ಯಕೀಯಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆಕೊರೊನಾ ಸೋಂಕುಕಾರಣವಾಗಿದೆ.ಜಿಲ್ಲಾಸ್ಪತ್ರೆಯಲ್ಲಿದೆ ಎಲ್ಲಾ ಸೌಲಭ್ಯ:2 ವರ್ಷಗಳಹಿಂದೆ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯ ಸರ್ಕಾರದಿಂದ319ಎಲ್‌ಪಿಎಂ ಸಾಮರ್ಥ್ಯದ ಹಾಗೂ ಕೇಂದ್ರಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ1ಸಾವಿರ ಎಲ್‌ಪಿಎಂ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್‌ಜನರೇಷನ್ ಪ್ಲಾಂಟ್ ನಿರ್ಮಾಣವಾಗಿದ್ದು,ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗದಂತೆಮಾಡಲಾಗಿದೆ. ಜತೆಗೆ49 ವೆಂಟಿಲೇಟರ್ ಹಾಸಿಗೆಸೌಲಭ್ಯ, 310 ಆಕ್ಸಿಜನ್ ಹಾಸಿಗೆ ಸೌಲಭ್ಯವನ್ನುಜಿಲ್ಲಾಸ್ಪತ್ರೆಒಳಗೊಂಡಿದೆ.
Related Articles
Advertisement
ಮೈಸೂರು ಸೇರಿ ಪಕ್ಕದ ಮಂಡ್ಯ, ಚಾ.ನಗರ, ಹಾಸನ, ಕೊಡುಗುಜಿಲ್ಲೆಯ ಜನರಿಗೆ ಸಂಜೀವಿನಿಯಾಗಿದ್ದ ಹಾಗೂ ಮಹಾರಾಜರಿಂದನಿರ್ಮಾಣಗೊಂಡಿದ್ದ ಕೃಷ್ಣರಾಜ ಆಸ್ಪತ್ರೆ ಹಲವು ವರ್ಷಗಳಿಂದ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿಂದ ಬಳಲಿತ್ತು. ಆದರೆಒಂದೂವರೆ ವರ್ಷದ ಹಿಂದೆ ಕಾಣಿಸಿಕೊಂಡ ಕೊರೊನಾ ಕಾಯಿಲೆಯಿಂದ ಇಡೀ ಆಸ್ಪತ್ರೆ ಹಣೆಬರಹವೇ ಬದಲಾಗಿದೆ.
ಈ ಹಿಂದೆ 30ರಷ್ಟಿದ್ದ ವೆಂಟಿಲೇಟರ್‌ಗಳು ಇಂದು ನೂರರ ಗಡಿ ದಾಟಿದೆ. ಜತೆಗೆ 250 ಆಕ್ಸಿಜನ್ ಹಾಸಿಗೆಯಿಂದ 900ಕ್ಕೆ ಏರಿಕೆಯಾಗಿರುವುದು ವಿಶೇಷ. ಶತಮಾನ ಪೂರೈಸಿದದೊಡ್ಡಾಸ್ಪತ್ರೆಯಲ್ಲಿ ಈ ಹಿಂದೆ ಒಂದೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಿರಲಿಲ್ಲ. ಕೊರೊನಾ ಬಂದ ಬಳಿಕ ಸದ್ಯಕ್ಕೆ 13 ಕೆ.ಎಲ್.ಸಾಮರ್ಥ್ಯದ 2ಪ್ಲಾಂಟ್ ನಿರ್ಮಾಣವಾಗಿದ್ದರೆ, ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್‌ಉತ್ಪಾದಿಸುವ ಆಕ್ಸಿಜನ್ ಜನರೇಟರ್ ಅಳವಡಿಸಲಾಗಿದೆ.
ಹಾಗೆಯೇ ಮೈಸೂರು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಒಳಪಡುವ ಪಿಕೆಟಿಬಿ, ಟ್ರಾಮಾಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ, ಚೆಲುವಾಂಬ ಆಸ್ಪತ್ರೆಗಳಲ್ಲಿಆಕ್ಸಿಜನ್ ಪ್ಲಾಂಟ್ ಮತ್ತು ಜನರೇಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸತೀಶ್ ದೇಪುರ