ಮೈಸೂರು: ಮುಂಬರುವ ಕೋವಿಡ್‌ನ ಮೂರನೇಅಲೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದಕಾರ್ಯಕರ್ತರು ಸೈನಿಕರ ರೀತಿ ಕೆಲಸ ಮಾಡಬೇಕುಎಂದು ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷ ಜೋಗಿ ಮಂಜು ಮನವಿ ಮಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಆಡಳಿತದಲ್ಲಿ, ಹಿಂದುಳಿದ ವರ್ಗದ 27 ಜನಮಂತ್ರಿಯಾಗಿರುವುದು, ಇಬ್ಬರು ರಾಜ್ಯಪಾಲರುಆಗಿರುವುದನ್ನು ವಿರೋಧಪಕ್ಷ ಕಾಂಗ್ರೆಸ್‌ಸಹಿಸಿಕೊಳ್ಳಲುಆಗುತ್ತಿಲ್ಲ,ಕಾಂಗ್ರೆಸ್‌ಪಕ್ಷ ಹಿಂದುಳಿದವರ್ಗಗಳ ವಿರೋಧಿ ಎಂದು ಟೀಕಿಸಿದರು.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕರ್ನಾಟಕರಾಜ್ಯದಲ್ಲಿ ಶೇ.52 ಹಿಂದುಳಿದ ವರ್ಗದ ಜನಸಾಮಾನ್ಯರು ಬಿಜೆಪಿ ಪರ ಇರುವುದು ಸಂತೋಷದವಿಚಾರ, ಹಿಂದುಳಿದ ವರ್ಗದ ಬಿಜೆಪಿ ಕಾರ್ಯಕರ್ತರು ಮುಂಬರುವ ಕೋವಿಡ್‌ನ ಮೂರನೇಅಲೆಯಲ್ಲಿ ದೇಶದ ಗಡಿಕಾಯುವ ಸೈನಿಕ ರೀತಿ ಕೆಲಸಮಾಡಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಬಿಜೆಪಿ ನಗರಾಧ್ಯಕ್ಷಟಿ.ಎಸ್.ಶ್ರೀವತ್ಸ, ಕೋವಿಡ್ ಸಂದರ್ಭದಲ್ಲಿಸಾರ್ವಜನಿಕರಿಗೆ ಬಿಜೆಪಿ ಕಾರ್ಯಕರ್ತರು ಸಹಾಯಹಸ್ತ ಮಾಡಿದ್ದು ನಿಜಕ್ಕೂ ಶ್ಲಾಘನೀಯ, ಹಿಂದುಳಿದವರ್ಗದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರನೀಡುವ ಸವಲತ್ತುಗಳನ್ನು ನೇರ ಜನಸಾಮಾನ್ಯರಿಗೆತಲುಪಿಸಬೇಕಾದು ಕಾರ್ಯಕರ್ತರ ಕರ್ತವ್ಯ.ಅಸಂಘಟಿತ ವಲಯದಲ್ಲಿ ಇರುವ ಜನಸಾಮಾನ್ಯರು ನೋಂದಣಿ ಮಾಡಿಸಬೇಕು ಹಾಗೂಸಾಮನ್ಯ ಜನರಿಗೆ ಲಸಿಕೆ ಹಾಕಿಸುವ ಮೂಲಕಕಾರ್ಯಕರ್ತರು ಕೆಲಸ ಮಾಡಬೇಕು ಎಂದುಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಗಿರೀಧರ್, ರಾಜ್ಯಬಿಜೆಪಿ ಓ.ಬಿ.ಸಿ.ಮೋರ್ಚಾದ ಕಾರ್ಯದರ್ಶಿಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್,ಮಣಿರತ್ನಂ ನಗರ ಉಸ್ತುವಾರಿ ಹರ್ಷ,ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮಂಡಲಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.