ಬೆಂಗಳೂರು: ರಾಜ್ಯದಲ್ಲಿ ಕೋವಿಡ್ “ಅನ್‌ಲಾಕ್’ನಿರ್ಬಂಧಗಳು ದಿನೇ ದಿನೆ ಸಡಿಲವಾಗುತ್ತಿದೆ. ಆದರೆ,ಕೋವಿಡ್ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿಶೇ.20ರಿಂದ25ರಷ್ಟು ಕೈಗಾರಿಕೆಗಳು ಇನ್ನೂ ಬಾಗಿಲುತೆರೆದಿಲ್ಲ. ಬಾಗಿಲು ತೆರೆಯುವ ಆಲೋಚನೆ ಕೂಡಸದ್ಯಕ್ಕೆಕಾಣುತ್ತಿಲ್ಲ.
ಕೋವಿಡ್ ಸೋಂಕಿನ 2ನೇ ಅಲೆ ನಿಯಂತ್ರಣಕ್ಕೆಬರುತ್ತಿದ್ದ ಹಾಗೆಯೇ ಸರ್ಕಾರ ಜನತಾ ಕರ್ಫ್ಯೂಸಡಿಲಿಕೆ ಮಾಡಿ ಕೈಗಾರಿಕಾ ವಲಯಕ್ಕೆ ವಿನಾಯ್ತಿನೀಡಿತು. ಹೀಗಾಗಿ ಈವರೆಗೂ ಶೇ.75ರಿಂದ 80ಕೈಗಾರಿಕೆಗಳು ಮಾತ್ರ ಕಾರ್ಯಾರಂಭ ಮಾಡಿವೆ.ಆದರೆ ಎಂಜಿನಿಯರಿಂಗ್, ಸಿದ್ಧ ಉಡುಪುಗಳ ಕ್ಷೇತ್ರ,ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ವಲಯ, ಮೌಲ್ಡಿಂಗ್‌ವಲಯ ಸೇರಿದಂತೆ ಇನ್ನೂ ಕೆಲವು ಕೈಗಾರಿಕೆಗೆಳುಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದುಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಜ್ಞರು ಕೋವಿಡ್ 3ನೇ ಅಲೆಯ ಬಗ್ಗೆ ಎಚ್ಚರಿಕೆನೀಡಿದ್ದಾರೆ. ಹೀಗಾಗಿ ಮುಂದೆ ಸಂಭವಿಸಬಹುದಾದಆರ್ಥಿಕ ನಷ್ಟವನ್ನು ಅರಿತು ಕೆಲವುಕೈಗಾರಿಕೋದ್ಯಮಿಗಳು ತಮ್ಮ ಉದ್ಯಮಗಳಆರಂಭದತ್ತ ಗಮನ ನೀಡುತ್ತಿಲ್ಲ. ಆರ್ಥಿಕ ನಷ್ಟಉಂಟುಮಾಡಿ ಕೊಂಡು ಕೈ ಸುಟ್ಟು ಕೊಳ್ಳುವುದು ಏಕೆಎಂಬ ಭಾವನೆಯೂ ಅವರಲ್ಲಿದೆ.
ಊರು ಬಿಟ್ಟುಬಾರದ ಕಾರ್ಮಿಕರು: ಕೋವಿಡ್2ನೇ ಅಲೆಯ ಭಯದಿಂದಾಗಿ ಈ ಹಿಂದೆಕಾರ್ಮಿಕರು ಬೆಂಗಳೂರು ಬಿಟ್ಟು ತವರುಸೇರಿಕೊಂಡಿದ್ದಾರೆ. ಅದರಲ್ಲಿ ಶೇ.20 ಕಾರ್ಮಿಕರುಇನ್ನೂ ತವರು ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿಲ್ಲ.ಹೀಗಾಗಿ ಕೈಗಾರಿಕಾ ವಲಯಕ್ಕೆ ಈಗ ಕಾರ್ಮಿಕರಸಮಸ್ಯೆಯೂ ಎದುರಾಗಿದೆ ಎಂದು ಎಫ್ಕೆಸಿಸಿಐಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿದ್ದಾರೆ.
ಕೈಗಾರಿಕಾ ವಲಯದಲ್ಲಿ ಉತ್ತರ ಭಾರತದ ಹಲವುರಾಜ್ಯಗಳ ಕಾರ್ಮಿಕರು ತೊಡಗಿಸಿಕೊಂಡಿದ್ದರು.ಆದರೆ ಕೊರೊನಾ ಹಿನ್ನೆಲೆಯಲ್ಲಿ ಹೊರ ರಾಜ್ಯದಕಾರ್ಮಿಕರು ಬೆಂಗಳೂರಿಗೆ ಮರಳಿ ಬರುತ್ತಿಲ್ಲ.ಕಾರ್ಮಿಕರಿಗೆ ಕರೆ ಮಾಡಿದರೂ ಸ್ಪಲ್ಪ ದಿನದ ಬಳಿಕಬರುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಕೋವಿಡ್2ನೇ ಅಲೆಯ ನಂತರ ಉದ್ಯಮ ವಲಯ ಇದೀಗನಿಧನವಾಗಿ ಚೇತರಿಕೆ ಕಂಡುಕೊಳ್ಳುತ್ತಿದೆ. ಈವರೆಗೂಶೇ.40-45ರಷ್ಟು ಸುಧಾರಿಸಿಕೊಂಡಿದೆ ಎಂದುಹೇಳಿದ್ದಾರೆ.
ದೇವೇಶ ಸೂರಗುಪ್ಪ