ತಿಪಟೂರು: ಕೊರೊನಾ ಸೋಂಕು ರಾಜ್ಯದಲ್ಲಿಇಳಿಮುಖವಾಗಿದ್ದರೂ, ತಾಲೂಕಿನಲ್ಲಿ ಪ್ರತಿನಿತ್ಯ40 ಜನರಿಗೆ ಸೋಂಕು ತಗುಲುತ್ತಿದ್ದು, ಜನರು ಕೊರೋನಾ ಮುನ್ನೆಚ್ಚರಿಕಾ ನಿಯಮ ಪಾಲಿಸದೆ ನಿರ್ಲಕ್ಷಿಸಿದರೆ ಅಪಾಯಕಟ್ಟಿಟ್ಟ ಬುತ್ತಿ.
ತಾಲೂಕಿನಲ್ಲಿ ಕೊರೊನಾ2ನೇ ಅಲೆಗೆ ಸಾಕಷ್ಟುಸಾವು-ನೋವುಗಳು ಸಂಭವಿಸಿದ್ದು, ನೂರಾರುಸಂಖ್ಯೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.ಇನ್ನಾದರೂ ಜನತೆ ಸ್ವಯಂ ಅರಿವುಹೊಂದುವ ಮೂಲಕ ಸೋಂಕು ತಗುಲದಂತೆ ನಿಯಮಗಳನ್ನು ಕಡ್ಡಾಯವಾಗಿಎಚ್ಚರಿಕೆಯಿಂದ ವಹಿಸಬೇಕಿದೆ.
ಸಾಮಾಜಿಕ ಅಂತರ ಮಾಯ: ಲಾಕ್‌ಡೌನ್ ಇಲ್ಲದ ಪರಿಣಾಮ ನಗರದಲ್ಲಿ ಎಲ್ಲಿನೋಡಿದರೂ ಗುಂಪು ಜನರು ಸೇರುತ್ತಿದ್ದಾರೆ.ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆಬೇಕಾಬಿಟ್ಟಿ ಓಡಾಡುತ್ತಿರುವುದು ಸೋಂಕುಹರಡಲು ಕಾರಣವಾಗುತ್ತಿದೆ.
ಬ್ಯಾಂಕ್‌ಗಳು,ಎಟಿಎಂ ಸೇರಿದಂತೆ ಬಟ್ಟೆ ಅಂಗಡಿ, ದಿನಸಿಅಂಗಡಿ, ಬೇಕರಿಗಳು, ಹೋಟೆಲ್, ತರಕಾರಿಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದೆ, ಧರಿಸಿದ್ದರೂಸರಿಯಾಗಿ ಧರಿÓದೆ ಬೇಕಾಬಿಟ್ಟಿ ಧರಿಸಿಕೊಂಡುಸಾಮಾಜಿಕ ಅಂತರ ಕಾಯ್ದುಕೊÙÛದೆ ಗುಂಪುಸೇರುತಿದ ¤ ುª,ಈ ಬಗ್ಗೆ ತಾಲೂಕುಆಡಳಿತಕೂಡಲೇಎಚ್ಚೆತ್ತುಕೊಳ್ಳಬೇಕಾಗಿದೆ. ನಗರಸಭೆ ಹಾಗೂಪೊಲೀಸ್ ಇಲಾಖೆ ಮಾಹಿತಿ ನೀvಬೇ ಕಲ್ಲದೆ,ದಂಡ ವಿಧಿಸಬೇಕು. ಆಟೋ, ಲಗೇಜ್‌ಆಟೋಗಳಲ್ಲಂತೂ ಕೊರೊನಾ ಭಯವೇ ಇಲ್ಲದೆಕುರಿಗಳನ್ನು ತುಂಬಿದ ಹಾಗೆ ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಿದ್ದು, ಸಾಮಾಜಿಕ ಅಂತರಮಾಯವಾಗಿದೆ. ಸೋಂಕು ಹರಡಲೂಇದೂ ಸಹ ದೊಡ್ಡಮಟ್ಟದಲ್ಲಿಕಾರಣವೆನ್ನಬಹುದಾಗಿದೆ.
ಜಾಗೃತಿ ಅವಶ್ಯ: ಕೊರೊನಾ 2ನೇಅಲೆಯಲ್ಲಿ ಜನರು ಕೊರೊನಾಆರ್ಭಟವನ್ನು ಬಹಳ ಹತ್ತಿರದಿಂದಲೇ ನೋಡಿದ್ದು, ಮನೆಯವರು, ಸಂಬಂಧಿಕರು ಹಾಗೂ ಸ್ನೇಹಿತರನ್ನ ಕಳೆದುಕೊಂಡಿರುವ ದುಃಖಇನ್ನೂ ಮಾಸಿಲ್ಲ. ಯಾವಾಗ ಏನೋ ಎಂಬಆತಂಕ ಮನೆ ಮಾಡಿರುವ ಈ ಸಂಕಷ್ಟದಲ್ಲೂಜನರು ಸ್ವಯಂ ಜಾಗೃತಿ ವಹಿಸಿ ಮಾಸ್ಕ್ ಧರಿಸದೆ,ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಉದಾಸೀನಮಾಡಿದಲ್ಲಿ ತೊಂದರೆ ಅನುಭವಿಸುತ್ತಿರುವುದಲ್ಲದೆ ಅವರ ಕುಟುಂಬ ಹಾಗೂ ಸಮಾಜಕ್ಕೂ ಕಂಟಕತರುವ ಅಪಾಯವಿದ್ದು ಕೊರೊನಾ ಮಹಾಮಾರಿತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ.