Advertisement

ಇಂದಿನಿಂದ ಕಲ್ಯಾಣ ಮಂಟಪ ಪ್ರಾರಂಭಕ್ಕೆ ಗ್ರೀನ್‌ ಸಿಗ್ನಲ್‌

05:32 PM Jun 28, 2021 | Team Udayavani |

ಬೆಂಗಳೂರು: ನಗರದಲ್ಲಿ ಕಲ್ಯಾಣ ಮಂಟಪಗಳನ್ನು ಪ್ರಾರಂಭಿಸುವುದಕ್ಕೆ ಪಾಲಿಕೆಯಿಂದ ಷರತ್ತು ಬದ್ಧ ಅನುಮತಿ ಪಡೆಯುವುದು ಕಡ್ಡಾಯವಾಗಿದೆಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾಕಾರಣಕ್ಕೆ ಕಲ್ಯಾಣ ಮಂಟಪ ಆರಂಭಿಸಲು ಅವಕಾಶ ಇರಲಿಲ್ಲ. ಸೋಮವಾರದಿಂದ 40 ಮಂದಿಗೆ ಮಿತಿಗೊಳಿಸಿ ಕಲ್ಯಾಣ ಮಂಟಪ, ಹೋಟೆಲ್‌ ಸಭಾಂಗಣ ಮತ್ತು ರೆಸಾರ್ಟ್‌ಗಳಲ್ಲಿ ಮದುವೆಸಮಾರಂಭಗಳನ್ನು ನಡೆಸಲು ಸರ್ಕಾರ, ಅನುಮತಿ ನೀಡಿದೆ ಎಂದು ಹೇಳಿದರು.

ಮದುವೆ ಸಮಾರಂಭ ಆಯೋಜಿಸುವವರುಪಾಲಿಕೆ ವ್ಯಾಪ್ತಿಯ ಆಯಾ ವಲಯಗಳಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ, ಷರತ್ತು ಬದ್ಧ ಅನುಮತಿ ಪಡೆಯಬೇಕು. ಅಲ್ಲದೆ, ಕಲ್ಯಾಣಮಂಟಪದಲ್ಲಿ ಮದುವೆ ಕಾರ್ಯಕ್ರಮದಲ್ಲಿಭಾಗಿಯಾಗುವ ಜನರ ಪಟ್ಟಿ ನೀಡಬೇಕು.ಮಾರ್ಗಸೂಚಿ ಕಾಪಾಡಲು ಮಾರ್ಷಲ್‌ಗ‌ಳನ್ನುನೇಮಕ ಮಾಡಲಾಗುತ್ತೆ ಎಂದು ತಿಳಿಸಿದರು.ಮೂರನೇ ಅಲೆ ಸಲುವಾಗಿ ನಗರದಲ್ಲಿ ಲಸಿಕೆ ನೀಡಲಾಗುತ್ತಿದೆ.

ಕಳೆದೆರಡು ದಿನಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಜನರುಯಾವುದೇ ಕಾರಣಕ್ಕೂ ಲಸಿಕೆ ಹಾಕಿಸಿಕೊಳ್ಳುವಕುರಿತು ನಿರ್ಲಕ್ಷ್ಯ ವಹಿಸಿದರೆ, ಸೋಂಕು ತಗುಲುವ ಅಪಾಯವಿದೆ. ಡೆಲ್ಟಾ ಪ್ಲಸ್‌, ಅಲ್ಫಾ, ಕೋವಿಡ್‌ಸೇರಿದಂತೆ ಯಾವುದೇ ಸೋಂಕನ್ನು ತಡೆಗಟ್ಟಲು ಲಸಿಕೆ ಅತ್ಯಗತ್ಯವಾಗಿದೆ. ಒಂದು ವೇಳೆ ಇದನ್ನು ನಿರ್ಲಕ್ಷ್ಯ ವಹಿಸಿದರೆ, ಅಪಾಯ ಉಂಟಾಗಲಿದೆ.ಲಸಿಕೆ ಹಾಕಿಸಿಕೊಂಡರೆ, ಸೋಂಕಿನ ತೀವ್ರತೆಯೂ ಕಡಿಮೆಯಾಗಲಿದೆ ಎಂದರು.

ಈಗಾಗಲೇ,ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಲ್ಲದೇ ಕೆಲಸದ ಜಾಗದಲ್ಲೂ ವ್ಯಾಕ್ಸಿನೇಷನ್‌ಕ್ಯಾಂಪ್‌ಮಾಡಲಾಗುತ್ತಿದೆ.ಲಸಿಕೆ ಲಭ್ಯತೆ ಆಧಾರದಲ್ಲಿ ಇನ್ನಷ್ಟು ವಿಸ್ತರಣೆಮಾಡಲಾಗುವುದು. ಮುಂದಿನ ದಿನಗಳಲ್ಲಿ ಡೋರ್‌ಟು ಡೋರ್‌ ಲಸಿಕಾ ಕಾರ್ಯಕ್ರಮ ಆಯೋಜನೆಮಾಡುತ್ತೇವೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕುಎಂದು ಮನವಿ ಮಾಡಿದರು.ತಜ್ಞರ ಸಲಹೆ ಆಧರಿಸಿ ಹೊಸ ಮಾರ್ಗಸೂಚಿ:ಪ್ರಸ್ತುತ ಡೆಲ್ಟಾ + ವೈರಸ್‌ ಹರಡದಂತೆ ತಡೆಯಲುಜನರು ಮಾಸ್ಕ್ ಧರಿಸಬೇಕು.

Advertisement

ಸಾಮಾಜಿಕ ಅಂತರಕಾಪಾಡುವುದು ಸೇರಿದಂತೆ ಇತರೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಅನುಸರಿಸಬೇಕಿದೆ. ರೂಪಾಂತರ ತಳಿಯ ಬಗ್ಗೆ ಆರೋಗ್ಯ ತಜ್ಞರು ಆಳವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಅವರ ಸಲಹೆ ಆಧರಿಸಿ ಅಗತ್ಯಬಿದ್ದರೆಸಾರ್ವಜನಿಕರು ಪಾಲಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಪಾಲಿಕೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜುಲೈನಲ್ಲಿ ಶೇ.70ರಷ್ಟು ಮಂದಿಗೆ ಲಸಿಕೆ:ಕೋವಿಡ್‌ ಲಸಿಕಾ ಅಭಿಯಾನವನ್ನು ಪಾಲಿಕೆಮತ್ತಷ್ಟು ಚುರುಕುಗೊಳಿಸಲು ಮುಂದಾಗಿದೆಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next