Advertisement

ಹುಣಸೂರಿನಲ್ಲಿ 68 ಸಾವಿರ ಮಂದಿಗೆ ಲಸಿಕೆ

06:57 PM Jun 23, 2021 | Team Udayavani |

ಹುಣಸೂರು: ತಾಲೂಕಿನಲ್ಲಿ ಲಸಿಕಾ ಅಭಿಯಾನದಲ್ಲಿ 2ನೇದಿನವೂ ಜನರು ಮುಂದೆ ಬಂದು ಲಸಿಕೆ ಪಡೆದರು.ಗ್ರಾಮಾಂತರದ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ1401 ಮಂದಿ ಹಾಗೂ ನಗರದ ಅಂಬೇಡ್ಕರ್ ಭವನ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ 1205 ಮಂದಿ ಸೇರಿದಂತೆ 2,426 ಮಂದಿ ಲಸಿಕೆ ಪಡೆದರು.

Advertisement

ಈವರೆಗೆ67,900ಮೊದಲ ಡೋಸ್‌, 10,664 ಎರಡನೇ ಡೋಸ್‌ ಲಸಿಕೆಪಡೆದಿದ್ದಾರೆಂದು ತಾಪಂ ಇಒ ಗಿರೀಶ್‌ ತಿಳಿಸಿದ್ದಾರೆ.ನಗರದ ಶಿಕ್ಷಕರ ಭವನದಲ್ಲಿ ವಾರಿಯರ್ಸ್‌ಗಳಾದ ಗ್ರಾಪಂಸಿಬ್ಬಂದಿ, ಶಿಕ್ಷಕರು, ಸಾರಿಗೆ ಸಂಸ್ಥೆ ಚಾಲಕರಿಗೆ ಮೊದಲ ಹಂತದಲಸಿಕೆ ನೀಡಲಾಯಿತು. ಅಭಿಯಾನದಲ್ಲಿ 434 ಮಂದಿ ಲಸಿಕೆಪಡೆದರು.

ಅಂಬೇಡ್ಕರ್‌ ಭವನದ 5 ಕೌಂಟರ್‌ಗಳಲ್ಲಿ, ತಾಲೂಕುಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ತಾಲೂಕಿನ ಎಲ್ಲಾ 23ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುವುದು ಎಂದು ತಹಶೀಲ್ದಾರ್‌ ಬಸವರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next