Advertisement

ಮೂರನೇ ಅಲೆ ಬಗ್ಗೆ ಜಾಗೃತಿ ಅಗತ್ಯ: ಡಿಸಿಎಂ ಅಜಿತ್‌ ಪವಾರ್‌

02:53 PM Jun 21, 2021 | Team Udayavani |

ಬಾರಾಮತಿ: ಬಾರಾಮತಿ ನಗರ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾದ ಕಾರಣ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಕೊರೊನಾ ಮೂರನೇ ಅಲೆ ಬಗ್ಗೆ ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಆವಶ್ಯಕತೆಯಿದೆ. ಆಡಳಿತವು ಕಪ್ಪು ಶಿಲೀಂಧ್ರ ರೋಗಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಪಾಸಿಟಿವ್‌ ದರದ ಆಧಾರದ ಮೇಲೆ ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಅಜಿತ್‌ ಪವಾರ್‌ ಹೇಳಿದ್ದಾರೆ.

Advertisement

ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಸಭಾಂಗಣದಲ್ಲಿ ಕೋವಿಡ್‌ -19 ಪರಿಸ್ಥಿತಿ ಮತ್ತು ಕ್ರಮಗಳ ಪರಿಶೀಲನೆ ಸಭೆಯಲ್ಲಿ ಅವರು ಬಾರಾ‌ಮತಿ ನಗರ ಸಹಿತ ತಾಲೂಕಿನಲ್ಲಿ ಪ್ರಸ್ತುತ ಕೊರೊನಾ ವೈರಸ್‌ ಸ್ಥಿತಿ, ಕಪ್ಪು  ಶಿಲೀಂಧ್ರ ಪ್ರಸ್ತುತ ಸ್ಥಿತಿ, ಆಡಳಿತವು ಕೈಗೊಳ್ಳಬೇಕಾದ ಕ್ರಮಗಳು, ಮಕ್ಕಳಿಗೆ ವೈದ್ಯಕೀಯ ಸೌಲಭ್ಯಗಳು ಮತ್ತು ಲಸಿಕೆ, ಆಮ್ಲಜನಕದ ಲಭ್ಯತೆ, ಆರೋಗ್ಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಹೆಚ್ಚುವರಿ ಕೊರೊನಾ ರೋಗಿಗಳಿರುವ ಸ್ಥಳಗಳಲ್ಲಿ ಹಾಟ್‌ಸ್ಪಾಟ್‌ಗಳನ್ನು ಘೋಷಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಬೇಕು. ಆಮ್ಲಜನಕದ ಮಟ್ಟವು ಕಡಿಮೆಯಾಗಿದೆ ಎಂದು ಕಂಡುಬಂದಲ್ಲಿ ರೋಗಿಯನ್ನು ತತ್‌ಕ್ಷಣವೇ ಬೇರೆಡೆ ಸ್ಥಳಾಂತರಿಸುವ ವ್ಯವಸ್ಥೆ ಮಾಡ‌ಬೇಕು ಎಂದು ಅಜಿತ್‌ ಪವಾರ್‌ ಹೇಳಿದರು.

ಬಾರಾಮತಿ ತಾಲೂಕಿನಲ್ಲಿ ಎರಡನೇ ಅಲೆಯಲ್ಲಿ  ವಯೋಮಿತಿಯ ಆಧಾರದ ಮೇಲೆ ಎಷ್ಟು ಮಂದಿ ಸಾವನ್ನಪ್ಪಿದ್ದರು ಮತ್ತು ಅವರಲ್ಲಿ ಎಷ್ಟು ಜನರಿಗೆ ಇತರ ಕಾಯಿಲೆಗಳಿವೆ ಎಂಬ ಚಾರ್ಟ್‌ ಅನ್ನು ವೈದ್ಯಕೀಯ ಅಧಿಕಾರಿಗಳು ಸಿದ್ಧಪಡಿಸಬೇಕು. ಮೂರನೇ ಅಲೆ ಸಾಧ್ಯತೆ ಪರಿಗಣಿಸಿ ನಾಗರಿಕರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅಗತ್ಯ ನಿಯಮಗಳನ್ನು ಪಾಲಿಸಬೇಕು. ಮಕ್ಕಳಿಗೆ ಆಗುವ ಅಪಾಯವನ್ನು ಪರಿಗಣಿಸಿ, ಎÇÉಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪವಾರ್‌ ಹೇಳಿದರು.

ಸರಿಯಾದ ಯೋಜನೆ

Advertisement

ಜನಸಂದಣಿ ನಿಯಂತ್ರಿಸಲು ಪೊಲೀಸ್‌ ಆಡಳಿತವು ಕ್ರಮ ತೆಗೆದುಕೊಳ್ಳುವ ಆವಶ್ಯಕತೆ ಯಿದೆ. ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆ ಗಳನ್ನು ಒದಗಿಸುವುದನ್ನು ಖಾತ್ರಿಪಡಿಸಿಕೊಳ್ಳ ಬೇಕು. ಮೂರನೇ ಅಲೆಯ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಅವಶ್ಯಕತೆಯಿದೆ. ವ್ಯಾಕ್ಸಿನೇಶನ್‌ಗಳ ಸರಿಯಾದ ಯೋಜನೆ, ಕಪ್ಪು ಶಿಲೀಂಧ್ರದಿಂದ ಪೀಡಿತ ರೋಗಿಗೊಳ ಚಿಕಿತ್ಸೆಗೆ ಚುಚ್ಚುಮದ್ದಿನ ಸರಿಯಾದ ಯೋಜನೆ ಅತ್ಯಗತ್ಯ ಎಂದವರು ತಿಳಿಸಿದರು.

ಆಡಳಿತ ಮಂಡಳಿ ಕೈಗೊಳ್ಳುತ್ತಿರುವ ಕ್ರಮ ಗಳ ಬಗ್ಗೆ ಉಪ ವಿಭಾಗೀಯ ಅಧಿಕಾರಿ ದಾದಾಸಾಹೇಬ್‌ ಕಾಂಬ್ಳೆ ಮಾಹಿತಿ ನೀಡಿದರು. ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಂಭವನೀಯ 3ನೇ ಅಲೆ ಯನ್ನು  ಎದುರಿಸಲು ಸಿದ್ಧತೆಗಳು, ಆಮ್ಲಜನಕ ಮತ್ತು ಕಪ್ಪು  ಶಿಲೀಂಧ್ರ ರೋಗಿಗಳ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ  ಬಾರಾಮತಿ ಮುನ್ಸಿಪಲ್‌ ಕೌನ್ಸಿಲ್‌ ಮೇಯರ್‌ ಪೂರ್ಣಿಮಾ ತಾವಾರೆ, ಪಂ. ಸಮಿತಿ ಅಧ್ಯಕ್ಷೆ ನೀತಾ ಫರಾಂಡೆ, ಉಪ ಮೇಯರ್‌ ಅಭಿಜೀತ್‌ ಜಾಧವ್‌, ಪಂ. ಸಮಿತಿ ಉಪಾಧ್ಯಕ್ಷ ರೋಹಿತ್‌ ಕೊಕರೆ, ಉಪಮುಖ್ಯಮಂತ್ರಿ ಕಚೇರಿ ಯ ಉಪ ಕಾರ್ಯದರ್ಶಿ ನಂದಕುಮಾರ್‌ ಕಟ್ಕರ್‌ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next