Advertisement
ನಿಮ್ಮ ಕ್ಷೇತ್ರದಲ್ಲಿ ಕೊರೊನಾನಿರ್ವಹಣೆ ಹೇಗಿದೆ?
Related Articles
Advertisement
ಕೋವಿಡ್ ಸಂಕಷ್ಟದ ವೇಳೆ ಕ್ಷೇತ್ರದಲ್ಲಿನೆರವು ಹೇಗಿತ್ತು?
ಕ್ಷೇತ್ರದಲ್ಲಿ ಕೊಳೆಗೇರಿ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂಥವರಿಗಾಗಿಯೇ ಸುಮಾರು 1ಲಕ್ಷಕ್ಕೂ ಅಧಿಕ ಆಹಾರದ ಕಿಟ್ ವಿತರಣೆಮಾಡಲಾಗಿದೆ. ಹಾಗೇ ಆಟೋ,ಗೂಡ್ಸ್ ಚಾಲಕರಿಗೆ ಒಂದುತಿಂಗಳಿಗೆ ಸಾಕಾಗುವಷ್ಟು ದಿನಸಿಸಾಮಗ್ರಿಗಳನ್ನು ಕ್ಷೇತ್ರದ ಬ್ಲಾಕ್‌ಮತ್ತು ವಾರ್ಡ್ ಮಟ್ಟದಲ್ಲಿಹಂಚಿಕೆ ಮಾಡಲಾಗಿದೆ.
ಕ್ಷೇತ್ರದಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಹೇಗೆನಡೆಯುತ್ತಿದೆ?
ಈಗಾಗಲೇ ಸರ್ವಜ್ಞ ನಗರ ಹೆಲ್ತ್‌ಕೇರ್ ಟ್ರಸ್ಟ್‌ಮೂಲಕ ಕಡು ಬಡವರಿಗೆ , ಕಾರ್ಮಿಕರಿಗೆಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕೋವಿಡ್ ಸೋಂಕಿತರ ಜತೆಗೆಕೋವಿಡೇತರ ರೋಗಿಗಳ ಬಗ್ಗೆ ಕೂಡ ಕಾಳಜಿತೋರಲಾಗಿದೆ.
ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ಷೇತ್ರದಲ್ಲಿಯಾವ ರೀತಿ ಕೆಲಸಗಳು ಸಾಗಿವೆ?
ಕ್ಷೇತ್ರದಲ್ಲಿ ಸುಮಾರು 30 ಸಾವಿರ ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಹಾಗೆಯೇಸುಮಾರು 19 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ರೂಮ್ ತೆರೆಯಲಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ಕೌಶಲ್ಯಅಭಿವೃದ್ಧಿಕೇಂದ್ರ ಸ್ಥಾಪನೆ ಮಾಡಲಾಗಿದೆ.
ಖಾಸಗಿ ಆಸ್ಪತ್ರೆಗಳ ನೆರವು ಯಾವರೀತಿಯಲ್ಲಿ ಸಿಗುತ್ತಿದೆ?
ಕ್ಷೇತ್ರದಲ್ಲಿ ಅಂಬೇಡ್ಕರ್ ವೈದ್ಯಕೀಯ ಕಾಲೇಜುನಮಗೆ ಎಲ್ಲಾ ರೀತಿಯ ಸಹಕಾರ ನೀಡಿದೆ. ಸತತ24 ಗಂಟೆ ವೈದ್ಯಕೀಯ ಸೇವೆ ನೀಡುವ ಮೂಲಕವೈದ್ಯಕೀಯ ಸಿಬ್ಬಂದಿ ಉತ್ತಮವಾದ ಸಹಕಾರನೀಡಿದರು.3ನೇ ಅಲೆ ನಿಯಂತ್ರಣಕ್ಕೆ ಕ್ಷೇತ್ರವಾರುಸಿದ್ಧತೆ ಹೇಗಿದೆ?ಕೋವಿಡ್ ನಿಯಂತ್ರಣಕ್ಕಾಗಿ ರೂಪಿಸಲಾಗಿರುವಕೋವಿಡ್ ಸೆಂಟರ್‌ಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲುಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ದೇವೇಶ ಸೂರಗುಪ್ಪ