ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2ನೇ ಡೋಸ್ ಪಡೆಯಲು ಅರ್ಹರಿರುವವರಿಗೆ ಮೊದಲ ಆದ್ಯತೆ ನೀಡಿ ಲಸಿಕೆಹಾಕಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿತಹಶೀಲ್ದಾರ್, ಇಒ, ಟಿಎಚ್‌ಒ ಹಾಗೂ ನೋಡಲ್‌ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿ, ಈಗಾಗಲೇ ಮೊದಲ ಡೋಸ್‌ಪಡೆದಿರುವವರ ವಿವರ ತಮ್ಮ ಬಳಿ ಲಭ್ಯವಿದೆ. 2ನೇಡೋಸ್ ಪಡೆಯುವ ಅರ್ಹರನ್ನು ಸಂಪರ್ಕಿಸಬೇಕು,ಗ್ರಾಪಂ ಕೇಂದ್ರ, ನಗರಸಭೆ, ಪುರಸಭೆ, ಪಪಂಗಳಲ್ಲಿಆದ್ಯತೆ ಮೇಲೆ ಲಸಿಕೆ ಹಾಕಿಕೆಲವೇ ದಿನಗಳಲ್ಲಿ ನಿಗದಿತಗುರಿ ತಲುಪಬೇಕು ಎಂದು ವಿವರಿಸಿದರು.
18 ರಿಂದ 44 ವರ್ಷದವರ ಮೊದಲ ಡೋಸ್‌ಲಸಿಕಿಕರಣಕ್ಕಾಗಿ ಸರ್ಕಾರ ಗುರುತಿಸಿರುವ22ಆದ್ಯತಾಗುಂಪು ಮತ್ತು ಬಾಕಿ ಇರುವ ಆರೋಗ್ಯಕಾರ್ಯಕರ್ತೆಯರು, ಕೊರೊನಾ ಮುಂಚೂಣಿಕಾರ್ಯಕರ್ತರಿಗೆಹಾಗೂ45ವರ್ಷಮೇಲ್ಪಟ್ಟಎಲ್ಲರಿಗೂಆದ್ಯತೆ ಮೇಲೆ ಲಸಿಕೆ ಹಾಕಲು ಸರ್ಕಾರ ಸೂಚಿಸಿದೆಎಂದು ಹೇಳಿದರು.
ಆದ್ಯತಾ ವಲಯಕ್ಕೆ ಶೇ.100 ಲಸಿಕೆ: ಅದರಂತೆಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ ಗುಂಪಿನವರಲಸಿಕಿಕರಣಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕಮಾಡಲಾಗಿದ್ದು, ತಮ್ಮ ಅಧೀನ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಮರ್ಪಕ ಯೋಜನೆ ರೂಪಿಸಿಕೊಂಡುಲಸಿಕೆ ಪಡೆಯುವವರ ಪಟ್ಟಿಯನ್ನು ಆರೋಗ್ಯಇಲಾಖೆಗೆ ಸಲ್ಲಿಸಿ, ಅವರ ಸಮನ್ವಯದೊಂದಿಗೆ ಲಸಿಕೆಹಾಕುವ ಸ್ಥಳ ಮತ್ತು ದಿನಾಂಕವನ್ನು ನಿಗಪಡಿಸಿ, ನಿಮ್ಮಗುಂಪಿನ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಲಸಿಕೆಹಾಕಿಸುವ ಮೂಲಕ ಮುಂದಿನ 4 ದಿನದಲ್ಲಿ ಆದ್ಯತಾವಲಯಕ್ಕೆ ಶೇ.100 ಲಸಿಕೆ ಹಾಕಿಸಬೇಕು ಎಂದುಅಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ದಿನವೇ ಪ್ರಚಾರ ಮಾಡಿ: 22 ಆದ್ಯತಾಗುಂಪಿನಲ್ಲಿರುವವರಿಗೆ ಜಿಲ್ಲೆಯ ಎಲ್ಲಾ ಗ್ರಾಪಂನಲ್ಲಿಆಯ್ದ ದಿನ, ನಗರಸಭೆ, ಪುರಸಭೆ, ಪಟ್ಟಣಪಂಚಾಯ್ತಿಕಚೇರಿಗಳಲ್ಲಿ ಪ್ರತಿ ದಿನ ಲಸಿಕಿಕರಣಕ್ಕೆ ವ್ಯವಸ್ಥೆಮಾಡಲಾಗಿದೆ. ಈ ಗುಂಪಿನಲ್ಲಿರುವ ಎಲ್ಲರೂ ಮತ್ತುಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿಕಾರ್ಯಕರ್ತರು, 45 ವರ್ಷ ಮೇಲ್ಪಟ್ಟವರು ತಮಗೆಗುರ್ತಿಸಿರುವ ಲಸಿಕಾ ಕೇಂದ್ರ ಅಥವಾ ತಮ್ಮ ವಾಸವ್ಯಾಪ್ತಿಯ ಗ್ರಾಪಂ ಕೇಂದ್ರಗಳಲ್ಲಿ ಲಸಿಕೆ ಹಾಕುವನಿಗದಿತ ದಿನದಂದು ಗುರುತಿನಪತ್ರ ತೋರಿಸಿ ಲಸಿಕೆಹಾಕಿಸಿಕೊಳ್ಳಬೇಕು ಎಂದು ವಿವರಿಸಿದರು.
ಶೇ.100 ಲಸಿಕೆ ಗುರಿ ಸಾಧಿಸಿ: ಫಲಾನುಭವಿಗಳಿಗೆಲಸಿಕೆ ಹಾಕುವ ದಿನ, ಸ್ಥಳವನ್ನು ಹಿಂದಿನ ದಿನವೇತಿಳಿಸಬೇಕು. ಹಳ್ಳಿಗಳಲ್ಲಿ ಈ ಬಗ್ಗೆ ಡಂಗೂರ ಹಾಕಿಸಬೇಕು. ಈ ನಿಟ್ಟಿನಲ್ಲಿ ಆಯಾ ತಾಲೂಕು ಇಒ ಸಭೆನಡೆಸಿ ಪಿಡಿಒಗಳಿಗೆ ಮಾಹಿತಿ ನೀಡಬೇಕು. ಈಲಸಿಕಿಕರಣದಲ್ಲಿ ತಹಶೀಲ್ದಾರ್, ಇಒ, ಟಿಎಚ್‌ಒ,ಪೌರಾಯುಕ್ತರ ಪಾತ್ರ ಪ್ರಮುಖವಾಗಿದೆ. ಶೇ.100ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಸೂಚನೆನೀಡಿದರು. ವಿಡಿಯೋ ಸಂವಾದದಲ್ಲಿ ಜಿಪಂ ಸಿಇಒಪಿ.ಶಿವಶಂಕರ್, ಎಡೀಸಿ ಎಚ್.ಅಮರೇಶ್, ಎಸಿಎ.ಎನ್.ರಘುನಂದನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾಆರ್.ಕಬಾಡೆ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಯಲ್ಲಾರಮೇಶ್ ಬಾಬು, ಸಂತಾನೋತ್ಪತ್ತಿ ಮತ್ತು ಮಕ್ಕಳಸಂರಕ್ಷಣಾಧಿಕಾರಿ ಚನ್ನಕೇಶವರೆಡ್ಡಿ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.