Advertisement
ಈ ಮೂಲಕ ಕೇವಲ ಒಂದೂವರೆ ತಿಂಗಳಲ್ಲಿಯೇಕೊರೊನಾ ಮಹಾಮಾರಿ ಹತೋಟಿಯಲ್ಲಿ ರಾಜ್ಯ ಸರ್ಕಾರಯಶಸ್ವಿಯಾಗಿದೆ.ಮೇ ಮೊದಲ ವಾರ ಬರೋಬ್ಬರಿ 50 ಸಾವಿರಕ್ಕೆ ಹೆಚ್ಚಳವಾಗಿದ್ದಕೊರೊನಾ ಸೋಂಕು ಪ್ರಕರಣಗಳು ಐದು ಸಾವಿರದ ಆಸುಪಾಸಿಗೆಇಳಿಕೆಯಾಗಿವೆ. ಸೋಂಕು ಪರೀಕ್ಷೆ ಪಾಸಿಟಿವಿಟಿ ದರ ಗರಿಷ್ಠಶೇ.36ರಿಂದ ಶೇ 3ಕ್ಕೆ ತಗ್ಗಿದೆ. à ರೀತಿ ಕೊರೊನಾ ಕೊರೊನಾಮಹಾಮಾರಿ ನಿಯಂತ್ರಣದಲ್ಲಿ ಕರ್ಫ್ಯೂ, ನಿರ್ಬಂಧಗಳು ಅತ್ಯಂತಪ್ರಮುಖ ಪಾತ್ರವಹಿಸಿವೆ.
Related Articles
Advertisement
ಇದರಿಂದ 59ಸಾವಿರ ಜನರಿಗೆ ನೆರವಾಗಲಿದೆ.ಅದೇ ರೀತಿಚಿತ್ರೋದ್ಯಮದ ಅಸಂಘಟಿತ ಕಾರ್ಮಿಕರುಕಲಾವಿದರಿಗೆ 3 ಸಾವಿರ ರೂ. ನೀಡಿದ್ದು 22 ಸಾವಿರಮಂದಿಗೆ ಅನುಕೂಲವಾಗಲಿದೆ.ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರು,ಅಡುಗೆ ಕೆಲಸಗಾರರು, ಸಿಬ್ಬಂದಿ ಮತ್ತುಮಸೀದಿಗಳಲ್ಲಿ ಕೆಲಸ ಮಾಡುವ ಮೌಜ್ವಾನ್‌ಹಾಗೂ ಇಮಾಮ್‌ಗಳಿಗೂ ನೆರವು ವಿಸ್ತರಿಸಿದ್ದುಸಂಕಷ್ಟದಲ್ಲಿರುವ 36 ಸಾವಿರ ಮಂದಿಗೆ ನೆರವಾಗಿದೆ.ಆಶಾ ಕಾರ್ಯಕರ್ತೆಯರು ಹಾಗೂಅಂಗನವಾಡಿ ಕಾರ್ಯಕರ್ತೆಯರ ಬಗ್ಗೆಯೂಕಾಳಜಿ ತೋರಿ ಆಶಾ ಕಾರ್ಯಕರ್ತೆಯರಿಗೆ ತಲಾ3 ಸಾವಿರ ರೂ.ನಂತೆ 42,574 ಮಂದಿಗೆ,ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆತಲಾ 2 ಸಾವಿರ ರೂ. ನಂತರೆ 64,423ಮಂದಿಗೆ ನೆರವು ನೀಡಿತು.
ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5ಸಾವಿರ ರೂ. ಅದೇ ರೀತಿ ವಕೀಲರ ಸಂಘದಬೇಡಿಕೆಗೆ ಸ್ಪಂದಿಸಿ ಕಲ್ಯಾಣ ನಿಧಿಗೆ 5ಕೋಟಿರೂ. ಒದಗಿಸಿತು. ಈ ಮೂಲಕ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಎಲ್ಲ ವರ್ಗಕ್ಕೂಅನುಕೂಲ ಕಲ್ಪಿಸಲಾಯಿತು.
3 ಕೋಟಿ ಪರೀಕ್ಷೆ
ಪರೀಕ್ಷೆ ಹೆಚ್ಚಿಸುವ ನಿಟ್ಟಿನಲ್ಲಿ 200ಕ್ಕೂ ಅಧಿಕಪ್ರಯೋಗಾಲಯಗಳು ಕಾರ್ಯಾಚರಣೆಆರಂಭಿಸಲಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿಆರಂಭವಾದ ಕೊರೊನಾ ಪರೀಕ್ಷೆಗಳು ನ. 21ರಂದು ಒಂದು ಕೋಟಿಗೆ, ಮಾರ್ಚ್ 17ರಂದು ಎರಡು ಕೋಟಿ ಹೆಚ್ಚಿದ್ದವು. ಎರಡನೇಅಲೆ ತೀವ್ರವಾದ ಹಿನ್ನೆಲೆ ನಿತ್ಯ ಸರಾಸರಿ1.3 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ.ಈ ಹಿನ್ನೆಲೆ ಕೇವಲ ಮೂರುತಿಂಗಳಲ್ಲಿಯೇ (77 ದಿನ) 1.2ಕೋಟಿಗೂ ಅಧಿಕ ಪರೀಕ್ಷೆನಡೆಸಲಾಗಿದೆ.
ಅರಕಲಗೂಡು ವೈದ್ಯಾಧಿಕಾರಿ ಡಾ.ದೀಪಕ್‌ಗೆ ಪ್ರಶಂಸೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೊರೊನಾನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡಿರುವ ರಾಜ್ಯದ ಆಯ್ದಕೆಲವು ವೈದ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿಪ್ರಶಂಸಿಸಿದರು. ಅಂತಹ ಪ್ರಶಂಸೆಗೆ ಪಾತ್ರರಾದ ವೈದ್ಯರ ಪೈಕಿಅರಕಲಗೂಡು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್‌ಅವರೂ ಕೂಡ ಒಬ್ಬರು ಎಂಬುದು ಜಿಲ್ಲೆಯ ಹೆಮ್ಮೆಯಾಗಿದೆ.ಕೊರೊನಾ ನಿಯಂತ್ರಣ ಕ್ರಮವಾಗಿ ಮುಖ್ಯಮಂತ್ರಿಯವರುಜಿಲ್ಲಾಧಿಕಾರಿಯವರು, ತಜ್ಞರೊಂದಿಗೆ ವೀಡಿಯೋ ಸಂವಾದನಡೆಸುವುದ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳೊಂದಿಗೂವೀಡೀಯೋ ಸಂವಾದ ನಡೆಸಿದರು.
ಕಳೆದ ಮೇ.15 ರಂದುವೈದ್ಯಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿಪಾಲ್ಗೊಂಡಿದ್ದ ಡಾ.ದೀಪಕ್ ಅವರು ಅರಕಲಗೂಡು ತಾಲೂಕುಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿದ್ದ ಕ್ರಮಗಳನ್ನುವಿವರಿಸಿ ಮುಖ್ಯಮಂತ್ರಿಯವರ ಪ್ರಶಂಸೆಗೆ ಪಾತ್ರರಾದರು.ಅತ್ಯಂತ ಕಡಿಮೆ ಸಂಖ್ಯೆಯ ವೈದ್ಯರು ಹಾಗೂ ಸೌಲಭ್ಯವನ್ನುಹೊಂದಿದ್ದರೂ ಗರಿಷ್ಠ ಗುಣಮಟ್ಟದಲ್ಲಿ ಸೋಂಕಿತರಿಗೆ ಚಿಕಿತ್ಸೆನೀಡುತ್ತಿರುವುದರೊಂದಿಗೆ ಪರಿಣಾನಕಾರಿ ಚಿಕಿತ್ಸೆಯೊಂದಿಗೆ ಸಾವಿನಸಂಖ್ಯೆಯನ್ನೂ ನಿಯಂತ್ರಿಸಿದ ಕ್ರಮಕ್ಕೆ ಅರಕಲಗೂಡು ತಾಲೂಕುಆಸ್ಪತ್ರೆಯ ಸಾಧನೆಯನ್ನು ಮೆಚ್ಚಿದ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರು ವೈದ್ಯಾಧಿಕಾರಿ ಡಾ.ದೀಪಕ್ ಅವರನ್ನುಅಭಿನಂದಿಸಿದರು. ಮುಂದೆಯೂ ಇಂತಹದ್ದೆ ಸೇವೆಯೊಂದಿಗೆ ಇತರತಾಲೂಕು ಆಸ್ಪತ್ರೆಗಳಿಗೆ ಪ್ರೇರಣೆಯಾಗಬೇಕು ಎಂದುಮುಖ್ಯಮಂತ್ರಿಯವರು ಆಶಿಸಿದ್ದಾರೆ.