Advertisement
ಲಸಿಕೆಗಳು ಲಭ್ಯವಿಲ್ಲದ ಕಾರಣ ಕಳೆದ ಒಂದು ತಿಂಗಳಿನಿಂದ ಬಿಎಂಸಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ತೀವ್ರವಾಗಿ ಕಡಿಮೆಯಾಗಿದೆ. ಮುಂಬಯಿಯಲ್ಲಿ ಮೇ 1ರ ವರೆಗೆ ಬಿಎಂಸಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಶೇ. 74ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 25ರಷ್ಟು ವ್ಯಾಕ್ಸಿನೇಶನ್ ನಡೆದಿದೆ. ಬಿಎಂಸಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಜೂ. 9ರ ವರೆಗೆ ಶೇ. 10ರಷ್ಟು ಕಡಿಮೆಯಾಗಿದೆ.
Related Articles
Advertisement
ಬಿಎಂಸಿ 340 ವ್ಯಾಕ್ಸಿನೇಶನ್ ಕೇಂದ್ರಗಳನ್ನು ಹೊಂದಿದ್ದು, ಪ್ರತೀದಿನ ಸುಮಾರು 1 ಲಕ್ಷ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ವ್ಯಾಕ್ಸಿನೇಶನ್ ಸಂಪೂರ್ಣವಾಗಿ ಕೇಂದ್ರದಿಂದ ಲಭ್ಯವಿರುವ ಸ್ಟಾಕ್ ಅನ್ನು ಅವಲಂಬಿಸಿರುತ್ತದೆ. ಶೀಘ್ರವಾಗಿ ಲಸಿಕೆ ಹಾಕುವ ಗುರಿಯ ಹಿನ್ನೆಲೆ ಜೂನ್‌ನಲ್ಲಿ ಸುಮಾರು 12 ಲಕ್ಷ ಡೋಸ್‌ಗಳನ್ನು, ದಿನಕ್ಕೆ ಕನಿಷ್ಠ 50,000 ಡೋಸ್‌ಗಳನ್ನು ನೀಡುವಂತೆ ಸರಕಾರವನ್ನು ಕೋರಲಾಗಿದೆ ಎಂದು ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ತಿಳಿಸಿದ್ದಾರೆ.
ಕೇಂದ್ರ ಶೇ. 100ರಷ್ಟು ಲಸಿಕೆ ಖರೀದಿಸಬೇಕು
ವ್ಯಾಕ್ಸಿನೇಶನ್ ನೀತಿಯನ್ನು ಕೇಂದ್ರ ಸರಕಾರವು ತಿಂಗಳಲ್ಲಿ ಆರು ಬಾರಿ ಬದಲಾಯಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಸರಕಾರದ ವ್ಯಾಕ್ಸಿನೇಶನ್ ನೀತಿಯು ಖಾಸಗಿ ಆಸ್ಪತ್ರೆಗಳು ಮತ್ತು ತಯಾರಕರ ಲಾಭವನ್ನು ಬೆಂಬಲಿಸುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ 18 ವರ್ಷದವರಿಗೆ ಲಸಿಕೆ ನೀಡಲು ಅನುಮತಿಸಿ ನೀಡಿದ ಸರಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅದೇ ಸಮಯದಲ್ಲಿ ಶೇ. 25ರಷ್ಟು ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಮತಿ ನೀಡಿರುವ ನಿರ್ಧಾರವು ಮತ್ತೆ ಲಾಭದ ಆದ್ಯತೆಯಾಗಿದೆ. ಶೇ. 100ರಷ್ಟು ಲಸಿಕೆಗಳನ್ನು ಖರೀದಿಸಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ವಿತರಿಸಲು ಕೇಂದ್ರ ಸರಕಾರಕ್ಕೆ ಬೇಡಿಕೆ ಇಟ್ಟಿದೆ ಎಂದು ಫೋರಂ ಫಾರ್ ಮೆಡಿಕಲ್ ಎಥಿಕ್ಸ್ ಸೊಸೈಟಿಯ ಸುನೀತಾ ಬಂಡೇವಾರ್ ಹೇಳಿದ್ದಾರೆ.