ನವದೆಹಲಿ: ವಿದೇಶಗಳಲ್ಲಿ ಕೋವಿಡ್ ನ ರೂಪಾಂತರ ತಳಿ ಬಿಎಫ್ 7 ಪ್ರಕರಣಗಳ ಹೆಚ್ಚಳದ ನಡುವೆ ಭಾರತದಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ ದರ ನಿಗದಿಪಡಿಸಿದೆ.
ಇದನ್ನೂ ಓದಿ:ಹಾಸನದಲ್ಲಿ ಕೊರಿಯರ್ ಮಿಕ್ಸಿ ಬ್ಲಾಸ್ಟ್ ಭಯೋತ್ಪಾದನೆಯ ಒಂದು ಭಾಗ: ಪ್ರಮೋದ್ ಮುತಾಲಿಕ್
ಖಾಸಗಿ ಆಸ್ಪತ್ರೆಗಳಲ್ಲಿ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ 800 ರೂಪಾಯಿ ಹಾಗೂ ತೆರಿಗೆ ವೆಚ್ಚ ಪ್ರತ್ಯೇಕ. ಈ ನಿಟ್ಟಿನಲ್ಲಿ ಲಸಿಕೆಗಾಗಿ ಕೋವಿನ್ ಪೋರ್ಟಲ್ ನಲ್ಲಿ ಸ್ಲಾಟ್ಸ್ ಬುಕ್ ಮಾಡಬಹುದಾಗಿದೆ ಎಂದು ಭಾರತ್ ಬಯೋಟೆಕ್ ಮಂಗಳವಾರ (ಡಿಸೆಂಬರ್ 27) ತಿಳಿಸಿದೆ.
ನಾಸಲ್ ವ್ಯಾಕ್ಸಿನ್ iNCOVACC ಅನ್ನು ಜನವರಿ ನಾಲ್ಕನೇ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಭಾರತ್ ಬಯೋಟೆಕ್ ಹೇಳಿದೆ. ಖಾಸಗಿ ಆಸ್ಪತ್ರೆಯಲ್ಲಿ 800 ರೂ. ಪ್ಲಸ್ ತೆರಿಗೆ, ಸರ್ಕಾರಿ ಆಸ್ಪತ್ರೆಯಲ್ಲಿ iNCOVACC ಪ್ರತಿ ಲಸಿಕೆಗೆ 325 ರೂಪಾಯಿ ದರ ನಿಗದಿಪಡಿಸಿದೆ.
ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತಿದ್ದು, 18 ವರ್ಷ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾಗಿದೆ. ಕೋವಿಡ್ ನಾಸಲ್ ಜಗತ್ತಿನ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.