Advertisement

ದೇಶಾದ್ಯಂತ ಕೋವಿಡ್ ಅಣಕು ಕಾರ್ಯಾಚರಣೆ

01:33 AM Dec 28, 2022 | Team Udayavani |

ಹೊಸದಿಲ್ಲಿ/ಬೀಜಿಂಗ್‌: ಚೀನ ಸಹಿತ ಹಲವು ರಾಷ್ಟ್ರಗಳಲ್ಲಿ ಕೊರೊನಾ ಮತ್ತೂಮ್ಮೆ ಪ್ರಕೋಪ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಿತ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್‌ ನಡೆಸಲಾಯಿತು.

Advertisement

ಒಂದು ವೇಳೆ ಪರಿಸ್ಥಿತಿ ಕೈಮೀರಿ ಹೋದರೆ, ಸೋಂಕು ಪೀಡಿತರಿಗೆ ಲಭ್ಯವಾಗಲಿರುವ ಹಾಸಿಗೆಗಳು, ವೆಂಟಿಲೇಟರ್‌ಗಳು, ಔಷಧಗಳು, ಸೋಂಕು ಪೀಡಿತರಿಗೆ ಶುಶ್ರೂಷೆ ನೀಡಲು ತರಬೇತಿ ಪಡೆದಿರುವ ಸಿಬಂದಿ, ವಿಶೇಷ ವಾರ್ಡ್‌ಗಳು ಸಹಿತ ಹತ್ತು ಹಲವು ವ್ಯವಸ್ಥೆಗಳು ಕ್ರಮಬದ್ಧವಾಗಿ ಇವೆಯೇ ಎಂದು ಪರಿಶೀಲನೆ ನಡೆಸಲಾಯಿತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್‌ ಮಾಂಡವಿಯಾ ಹೊಸದಿಲ್ಲಿಯ ಸಫ‌ªರ್‌ಜಂಗ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾ ರಾಷ್ಟ್ರದಲ್ಲಿ ಕಳೆದ ಬಾರಿ ಸಮಸ್ಯೆ ತಲೆದೋರಿದ್ದರಿಂದ ಮುಂಬಯಿ ಸಹಿತ ಆ ರಾಜ್ಯಾದ್ಯಂತ ಔಷಧ, ಸಿಬಂದಿ ಸಹಿತ ಹಲವು ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಹೊಸ ಕೇಸು: ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ 157 ಹೊಸ ಪ್ರಕರಣಗಳು ದಾಖಲಾಗಿದೆ. ಸಕ್ರಿಯ ಸೋಂಕಿನ ಸಂಖ್ಯೆ 3, 421ಕ್ಕೆ ಏರಿಕೆಯಾಗಿದೆ.

ಕ್ವಾರಂಟೈನ್‌ ನಿಯಮಕ್ಕೆ ತೆರೆ
ಚೀನದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿರುವಂತೆಯೇ ಅಂತಾ ರಾಷ್ಟ್ರೀಯ ಪ್ರಯಾಣಿಕರಿಗಾಗಿ ಇರುವ ಕಡ್ಡಾಯ ಕ್ವಾರಂಟೈನ್‌ ನಿಯಮವನ್ನು ರದ್ದು ಮಾಡಿದೆ. ಈ ಮೂಲಕ ಮತ್ತೂಮ್ಮೆ ಕಠಿನ ನಿಯಮವನ್ನು ಸಡಿಲಿಸಿದೆ. ಜ.8 ರಿಂದ ಹೊಸ ನಿಯಮ ಅನ್ವಯ ವಾಗಲಿದೆ. ಇನ್ನೊಂದೆಡೆ ಚೀನ ದಿಂದ ಆಗಮಿಸುವವರಿಗೆ ಕಡ್ಡಾ ಯವಾಗಿ ಕೊರೊನಾ ಪರೀಕ್ಷೆ ನಡೆಸಲು ಜಪಾನ್‌ ನಿರ್ಧರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next