Advertisement

ಐವರು ಸಚಿವರಿಗೆ ನಿರ್ವಹಣೆ ಅಧಿಕಾರ

12:20 AM May 05, 2021 | Team Udayavani |

ಬೆಂಗಳೂರು: ಉಪ ಮುಖ್ಯಮಂತ್ರಿ ಸಹಿತ ಐವರು ಸಚಿವರಿಗೆ ಕೋವಿಡ್ನಿಭಾಯಿಸುವ ಹೊಣೆಗಾರಿಕೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

Advertisement

ರೆಮಿಡಿಸಿವಿರ್‌ ಮತ್ತಿತರ ಔಷಧ ಪೂರೈಕೆ ನಿಗಾ ವಹಿಸಲು ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಆಮ್ಲಜನಕ ಪೂರೈಕೆ ಕುರಿತು ಕೇಂದ್ರ ಸರಕಾರದ ಜತೆ ಸಮನ್ವಯ ಸಾಧಿಸಲು ಜಗದೀಶ್‌ ಶೆಟ್ಟರ್‌, ಹಾಸಿಗೆ ವ್ಯವಸ್ಥೆ ನೋಡಿಕೊಳ್ಳಲು ಬಸವರಾಜ ಬೊಮ್ಮಾಯಿ ಮತ್ತು ಆರ್‌. ಅಶೋಕ್‌ ಅವರನ್ನು ನೇಮಿಸಲಾಗಿದ್ದರೆ, ಕೋವಿಡ್‌ ವಾರ್‌ ರೂಂ ಮತ್ತು ಸಹಾಯವಾಣಿ ಉಸ್ತುವಾರಿಯನ್ನು ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಅಂತಿಮ ವರ್ಷದ ವೈದ್ಯ ಮತ್ತು ನರ್ಸಿಂಗ್‌ ವಿದ್ಯಾರ್ಥಿಗಳನ್ನು ಕೋವಿಡ್‌ ಸೇವೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಜಿಲ್ಲಾ ಉಸ್ತವಾರಿ ಸಚಿವರು ತತ್‌ಕ್ಷಣ ತಮ್ಮ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಸ್ಥಳೀಯವಾಗಿ ಸಮಸ್ಯೆ ನಿವಾರಿಸುವಂತೆ ಸಿಎಂ ಕಟ್ಟಪ್ಪಣೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ವೈಫ‌ಲ್ಯಗಳಿಗೆ ನೀವೇ ಹೊಣೆಗಾರರು ಎಂದು ಎಚ್ಚರಿಸಿದ್ದಾರೆ.

ಹೊಣೆಗಾರಿಕೆ ಹಂಚಿಕೆ :

Advertisement

ಕೋವಿಡ್  ನಿರ್ವಹಣೆಯ ಹೊಣೆಯನ್ನು ಐವರು ಸಚಿವರಿಗೆ ವಹಿಸಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸ್ವತಃ ಸಿಎಂ ವಿವರ ನೀಡಿದರು.

ಯಾರಿಗೆ ಯಾವ ಹೊಣೆ? :

ರೆಮಿಡಿಸಿವಿರ್‌- ಡಾ| ಸಿ.ಎನ್‌. ಅಶ್ವತ್ಥನಾರಾಯಣ

ಆಮ್ಲಜನಕ- ಜಗದೀಶ್‌ ಶೆಟ್ಟರ್‌

ಹಾಸಿಗೆ ನಿರ್ವಹಣೆ- ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌

ವಾರ್‌ರೂಂ, ಸಹಾಯವಾಣಿ- ಅರವಿಂದ ಲಿಂಬಾವಳಿ

ಕೇಂದ್ರದ ಜತೆ ಸಂಪರ್ಕ :

ರಾಜ್ಯದ ಆಮ್ಲಜನಕ ಸರಬರಾಜನ್ನು 350 ಟನ್‌ಗಳಿಂದ 850 ಟನ್‌ಗೆ ಹೆಚ್ಚಿಸಲಾಗಿದೆ. ಜಿಂದಾಲ್‌ನಿಂದ ಮಹಾರಾಷ್ಟ್ರಕ್ಕೆ ಹೋಗು ತ್ತಿದ್ದ ಆಮ್ಲಜನಕವನ್ನು ರಾಜ್ಯಕ್ಕೆ ನೀಡಲು ಕೇಂದ್ರ ಸಚಿವರ ಜತೆ ಮಾತನಾಡಿದ್ದು, ಒಪ್ಪಿ ದ್ದಾರೆ. 5 ಲಕ್ಷ ರೆಮಿಡಿಸಿವಿರ್‌ ಆಮದಿಗೆ ನಿರ್ಧರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯ ಲಾಗುವುದು ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next