Advertisement

ದೊಡ್ಡ ಬಳ್ಳಾಪುರದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

05:14 PM Jun 15, 2021 | Team Udayavani |

ದೇವನಹಳ್ಳಿ: ಬೆಂ.ಗ್ರಾ. ಜಿಲ್ಲೆಯ ದೊಡ್ಡಬಳ್ಳಾಪುರತಾಲೂಕಿನಲ್ಲಿ ಕೋವಿಡ್‌ ಸೋಂಕಿನ ಪ್ರಮಾಣಹೆಚ್ಚಾಗಿದೆ. ಇದರಿಂದ ಸೋಂಕು ನಿಯಂತ್ರಿಸಲು ತಾಲೂಕಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನುಜಾರಿಗೊ ಳಿಸಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕುಎಂದು ಜಿÇÉಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದ್ದಾರೆ.

Advertisement

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎÇÉಾ ತರಹದಮಾಂಸದ ಅಂಗಡಿಗಳನ್ನು ಜೂ.21ರವರೆಗೆ ಸಂಪೂರ್ಣ ವಾಗಿ ಮುಚ್ಚಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಬೆಳಗ್ಗೆ 8 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶಕಲ್ಪಿಸಲಾಗಿದೆ. ಅಗತ್ಯ ಸೇವೆಗಳಲ್ಲದ ಅಂಗಡಿಗಳುಬೆಳಗ್ಗೆ 10 ಗಂಟೆ ನಂತರ ತೆರೆದಿದ್ದಲ್ಲಿ, ಆ ಅಂಗಡಿಗಳಿಗೆಪೊಲೀಸ್‌ ಹಾಗೂ ನಗರಸಭೆ ಅಧಿಕಾರಿಗಳಿಂದ ದಂಡ ವಿಧಿಸಲಾಗುವುದು. ಅಲ್ಲದೆ, ಮೆಕಾನಿಕ್‌ ಅಂಗಡಿಗಳು ಬೆಳಗ್ಗೆ 10 ಗಂಟೆ ನಂತರ ತೆಗೆದಿರುವುದು ಕಂಡುಬಂದಲ್ಲಿ ಪೊಲೀಸ್‌ ಹಾಗೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಅವರಿಗೆ ದಂಡವನ್ನುವಿಧಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಗತ್ಯ ಸಂಚಾರ ಮಾಡಿದರೆ ಕ್ರಮ: ದೊಡ್ಡಬಳ್ಳಾಪುರ ತಾಲೂಕಿನ ರಸ್ತೆಗಳಲ್ಲಿ ಪೊಲೀಸ್‌ ಇಲಾಖೆಅಧಿಕಾರಿಗಳು ನಾಕಾಬಂದಿಯನ್ನು ಹಾಕಲಿದ್ದು,ಅನಗತ್ಯವಾಗಿ ಸಂಚಾರ ಮಾಡುವ ವಾಹನಗಳನ್ನುವಶಕ್ಕೆ ಪಡೆದುಕೊಳ್ಳುವುದರ ಜೊತೆಯಲ್ಲಿ ಅವರಮೇಲೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೂ.14ರಿಂದ 21ರವರೆಗೆಇರುವ ಸಂತೆ, ಜಾತ್ರೆ, ಮೆರವಣಿಗೆ, ಸಮಾವೇಶ,ಸಮ್ಮೇಳನ, ಕ್ರೀಡಾಕೂಟ ಹಾಗೂ ಇತರೆ ಯಾವುದೇಧಾರ್ಮಿಕ ಸಮಾರಂಭಗಳು, ಬೇಸಿಗೆ ಶಿಬಿರ,ಪ್ರವಾಸ ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ,ನಾಟಕೋತ್ಸವ ವಿಚಾರಗೋಷ್ಠಿ ಮುಂತಾದವುಗಳಮೇಲಿರುವ ನಿಷೇಧಾಜ್ಞೆ, ದೊಡ್ಡಬಳ್ಳಾಪುರತಾಲೂಕಿನಲ್ಲೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next