Advertisement
ಎಚ್.ಡಿ.ಕೋಟೆ: ಕೊರೊನಾ ಹಾಗೂ ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವಪರಿಸ್ಥಿತಿಯಲ್ಲಿ ವಾರದಲ್ಲಿ ಸತತ 4 ದಿನ ಅಂಗಡಿಗಳನ್ನು ಮುಚ್ಚುವ ತೀರ್ಮಾನ ಕೈಗೊಂಡಿರುವುದುಸರಿಯಲ್ಲ. ಇದರಿಂದ ಅಂದಿನ ದುಡಿಮೆಯಲ್ಲೇಅಂದಿನ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುವಕೂಲಿ ಕಾರ್ಮಿಕರಿಗೆ ಹೊಡೆತ ಬೀಳಲಿದೆ.ಮತ್ತೂಂದಡೆ 4 ದಿನ ಬಿಟ್ಟು ಅಂಗಡಿಗಳನ್ನುತೆರೆದಾಗ ಒಮ್ಮೆಲೆ ಜನರು ಮುಗಿ ಬೀಳುವುದರಿಂದ ಜನಜಂಗುಳಿ ನಿರ್ಮಾಣವಾಗಿ ಸೋಂಕು ಹರಡುವ ಸಾಧ್ಯತೆ ಇದೆ.
Related Articles
Advertisement
ಆದ್ದರಿಂದಗ್ರಾಹಕರು ಮಂಗಳವಾರ ವಸ್ತುಗಳನ್ನು ಕೊಳ್ಳಲುಅಂಗಡಿ, ಮಳಿಗೆಗಳು ಮುಂದೆ ಸಾಲಗಟ್ಟಿ ನಿಂತಿದ್ದರು. ಜನಜಂಗುಳಿ ನಿರ್ಮಾಣವಾಗಿತ್ತು. ಸಾಮಾಜಿಕ ಅಂತರ ಮಾಯವಾಗಿದ್ದು, ಬೇಕಾಬಿಟ್ಟಿಯಾಗಿಮಾಸ್ಕ್ ಧರಿಸಲಾಗಿತ್ತು. ಜೊತೆಗೆ ವಾಹನಗಳಸಂಚಾರಕೂಡ ಅಧಿಕವಾಗಿತ್ತು.
ಗುಂಪುಗೂಡಲು ಸಹಕಾರಿ: ವಾರದಲ್ಲಿ3ದಿನಮಾತ್ರ ವ್ಯಾಪಾರ ನಡೆಸಿ 4 ದಿನ ಬಂದ್ ಮಾಡುವುದರಿಂದ ಭಾನುವಾರ ಅಂಗಡಿಗಳು ಬಾಗಿಲು ತೆರೆಯುತ್ತಿದ್ದಂತೆಯೇ ಅಗತ್ಯ ವಸ್ತುಗಳ ಖರೀದಿಗೆ ಜನಮುಗಿ ಬೀಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.ಒಮ್ಮೆಲೆ ದಿನಸಿ, ತರಕಾರಿ ಖರೀದಿಗೆ ಜನರುದುಂಬಾಲು ಬೀಳುತ್ತಾರೆ. ಅದರಲ್ಲೂ ಬೆಳಗ್ಗೆ ಮಾತ್ರಅವಕಾಶ ನೀಡಿರುವುದರಿಂದ ಈ ಅವಧಿಯಲ್ಲಿಜನರು ಗುಂಪುಗೂಡುತ್ತಾರೆ. ಜನದಟ್ಟಣೆಉಂಟಾಗುತ್ತದೆ. ಈ ವೇಳೆ ಸೋಂಕು ಹರಡುವಸಾಧ್ಯತೆ ಇರುತ್ತದೆ. ಈ ಹೊಸ ನಿಯಮಅಷ್ಟೊಂದು ಸಮಂಜಸವಾಗಿಲ್ಲ ಎಂಬ ಮಾತುಗಳುಸಾರ್ವಜನಿಕ ವಲಯದಲ್ಲಿಕೇಳಿ ಬರುತ್ತಿವೆ.