ಕೊರಟಗೆರೆ: ಕೋವಿಡ್ ಮಹಾಮಾರಿ ಹಿನ್ನೆಲೆಸರ್ಕಾರದ ಕಠಿಣ ನಿಯಮ ಜಾರಿಗೊಳಿಸಿದ್ದು,ಮದುವೆಯ ಸಂಭ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ.ಸರ್ಕಾರದ ನಿಯಮದ ಪ್ರಕಾರ ಮದುವೆಗೆ 50ಜನ ಮಾತ್ರ ಅವಕಾಶ ಕೊಟ್ಟಿದ್ದು, ವಧು,ವರ ಸೇರಿ ಇಡೀ ಕುಟುಂಬಕ್ಕೆ ಸ್ನೇಹಿತರಿಗೆ, ಬಂಧುಗಳಿಗೆಬೇಸರ ತರಿಸಿದೆ. ಕಳೆದ ವರ್ಷವೇ ಗೊತ್ತಾಗಿದ್ದ ಅದೆಷ್ಟೋಮದುವೆ ಕೊರೋನಾ ಇದೆ ಎಂಬ ಕಾರಣಕ್ಕೆಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದರು.
ಆದರೆ, ಈ ವರ್ಷವೂ ಮದುವೆ ಯೋಚನೆಯಲ್ಲಿದ್ದವರಿಗೆ ಕೊರೊನಾ ಎರಡನೇ ಅಲೆ ಮರ್ಮಾಘಾತ ನೀಡಿದೆ. ಕೊರೊನಾಮುಗಿಯಿತು ಇನ್ನೇನು ಸಮಸ್ಯೆಯಿಲ್ಲ. ಅದ್ಧೂರಿಯಾಗಿ ಮದುವೆ ಮಾಡೋಣ ಎಂದುಕೊಂಡಿದ್ದ ಕುಟುಂಬ ಏಪ್ರಿಲ್, ಮೇತಿಂಗಳಿಗೆ ಮದುವೆ ದಿನಾಂಕ ನಿಗದಿ ಮಾಡಿಕೊಂಡು ಲಗ್ನಪತ್ರಿಕೆ ಹಂಚಿವೆ.
ಅಡುಗೆ ಭಟ್ಟರಿಗೆ, ಫೋಟೊಗ್ರಾಪರ್ಸ್, ಕಲ್ಯಾಣ ಮಂಟಪ, ನಾದಸ್ವರ ಹೀಗೆ ಎಲ್ಲ ರೀತಿಯ ಸಿದ್ಧತೆ ಸಹ ಮಾಡಿಕೊಂಡಿದ್ದರು. ಆದರೆ, ಈಗಿನ ಸ್ಥಿತಿಯೇ ಬೇರೆಯಾಗಿದ್ದು, ಕಲ್ಯಾಣ ಮಂಟಪ ಬಿಟ್ಟು ಮನೆ ಅಥವಾ ದೇವಾಲಯದ ಮುಂದೆ ಸಿಂಪಲ್ ಆಗಿ ಒಲ್ಲದ ಮನಸ್ಸಿನಿಂದ ಮದುವೆಯ ಸಂಭ್ರಮದ ಕಾರ್ಯಕ್ರಮ ಸರಳವಾಗಿ ನಡೆಯುತ್ತಿವೆ. ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳೋಣ ಎಂದುಕೊಂಡಿದ್ದಂತಹ ನವ ವಧು-ವರರು ಫ್ರೀವೆಡ್ಡಿಂಗ್ ಶೂಟ್ ಮಾಡಿಸಿತ್ತು. ಮದುವೆಗೆ ಅದ್ಧೂರಿಸೆಟ್‌ನ ತಯಾರಿಯೂ ನಡೆದಿತ್ತು. ಆದರೆ, ಈಗಅದಕ್ಕೆಲ್ಲ ದೊಡ್ಡ ಬ್ರೇಕ್ ಬಿದ್ದಿದ್ದು, ವಿಧಿ ಇಲ್ಲದೇಈಗ ಕಂಕಣ ಭಾಗ್ಯಕ್ಕೆ ಮುಂದಾಗಿದ್ದಾರೆ.
ಅಡುಗೆ ಭಟ್ಟರಿಗೆ ತರ ತರಹದ ಸಿಹಿ ತಿನಿಸುಗಳಿಗೆ ತಿಳಿಸಿದ್ದ ಕುಟುಂಬ ಈಗ ಇಬ್ಬರೂ ಬಂದು ತಿಂಡಿ ಮಾಡಿಕೊಟ್ಟರೆ ಸಾಕು ಎಂದು ಕರೆ ಮಾಡಿ ತಿಳಿಸುತ್ತಿದ್ದಾರೆ. ಫೋಟೊಗ್ರಾಪರ್ಸ್‌ಗಳಿಗೆ ದೊಡ್ಡಟೀವಿ ಪರದೆಗಳು ಬೇಕು ಅಂದವರು ಅವೆಲ್ಲ ಕ್ಯಾನ್ಸಲ್ ಮಾಡಿದ್ದಾರೆ. ಡೋಲು, ನಾದಸ್ವರ ಅವಶ್ಯವಿಲ್ಲ ಎನ್ನುತ್ತಾರೆ.
ಇನ್ನೂ ಲಗ್ನಪತ್ರಿಕೆಗಳು ಮಾತ್ರ ಈಗಾಗಲೇ ಹಂಚಿರು ವುದರಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತ ಮದುವೆಗೆ ಬನ್ನಿ ಎನ್ನುವ ಹಾಗಿಲ್ಲ, ಬರಬೇಡಿ ಎನ್ನವುದಕ್ಕೂ ಮನಸ್ಸಿಲ್ಲದೇ ಮದುವೆಗಳು ಸರಳವಾಗಿ ನಡೆಯುತ್ತಿವೆ. ಇದರ ನಡುವೆ ಮಂಟಪಗಳಿಗೆ ಯಾವ ಅಧಿಕಾರಿ ಬರುತ್ತಾರೋ ಎನ್ನುವ ಭಯದಲ್ಲಿ ವಿವಾಹಗಳು ನಡೆಯುತ್ತಿವೆ.ಮದುವೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿದಾಗ ಸ್ನೇಹಿತರು, ಸಂಬಂಧಿಗಳುಶುಭಾಶಯ ಕೋರುತ್ತಿದ್ದಾರೆ. ಅದನ್ನು ನೋಡಿ ಸಂತೋಷ ಪಡುವ ಸ್ಥಿತಿ ನವ ವಧು ವರದ್ದಾಗಿದೆ.
ಸಿದ್ದರಾಜು. ಕೆ