Advertisement
ಈಗಾಗಲೇ ಸೋಂಕುತಗುಲಿದ್ದವರಿಗೆ ಚಿಕಿತ್ಸೆ ಸಂದರ್ಭದಲ್ಲಿ ರೋಗದವಿರುದ್ಧ ಹೋರಾಟ ನಡೆಸುವ ಪ್ರತಿಕಾಯಗಳು(ಆ್ಯಂಟಿಬಾಡಿ ) ಉತ್ಪತ್ತಿಯಾಗಿರುತ್ತವೆ. ಅವುಗಳ ಶಕ್ತಿಮುಂದುವರಿದ ಕಾರಣದಿಂದ ಸದ್ಯ ಸೋಂಕು ಹೆಚ್ಚುಹೊಸಬರಿಗೆ ತಗುಲುತ್ತಿದೆ ಎನ್ನುತ್ತಾರೆ ತಜ್ಞರು.
Related Articles
Advertisement
ಲಕ್ಷಣ ಇಲ್ಲದವರಿಗೆ ಸಾಧ್ಯತೆ ಹೆಚ್ಚು: ಕಳೆದ ಬಾರಿಸೋಂಕು ತಗುಲಿದ್ದವರ ಪೈಕಿ ಅನೇಕರು ಯಾವುದೇ ಲಕ್ಷಣಗಳಿಲ್ಲದೇ ಗುಣಮುಖರಾಗಿದ್ದಾರೆ.ಇಂತಹವರಿಗೆ ದೇಹದಲ್ಲಿ ರೋಗ ಪ್ರತಿಕಾಯಗಳುಹೆಚ್ಚು ಉತ್ಪತ್ತಿಯಾಗಿರುವುದಿಲ್ಲ. ಹೀಗಾಗಿ, ಲಕ್ಷಣಹೆಚ್ಚಿದ್ದವರಿಗೆ ಹೋಲಿಸಿದರೆ ಇಂತಹವರಿಗೆ ಮತ್ತೆಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.
ಸೋಂಕುಕಳೆದ ಬಾರಿ ಸಾಕಷ್ಟು ಹಾನಿ ಮಾಡಿದ್ದರೆ ಈ ಬಾರಿಅಂತಹವರಿಗೆ ಹೆಚ್ಚು ಲಕ್ಷಣಗಳಿರುವುದಿಲ್ಲ. ಅಲ್ಲದೆ,ಸೋಂಕು ಕೂಡಾ ಹೆಚ್ಚು ಬಾಧಿಸುವುದಿಲ್ಲ ಎನ್ನುತ್ತಾರೆರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕಡಾ.ನಾಗರಾಜ್.
ಶೇ.5 ಪುನರಾವರ್ತನೆ ಸಾಧ್ಯತೆ: ಈಗಾಗಲೇ ನಮಗೆಸೋಂಕು ಬಂದು ಹೋಗಿದೆ ಮತ್ತೆ ಬರುವುದಿಲ್ಲಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ,ಆಧ್ಯಯನಗಳ ಪ್ರಕಾರ ಸೂಕ್ತ ಪ್ರಮಾಣದಲ್ಲಿ ರೋಗಪ್ರತಿಕಾಯಗಳು ದೇಹದಲ್ಲಿ ಅಭಿವೃದ್ಧಿಯಾಗಿರದಿದ್ದರೆಮತ್ತೆ ಸೋಂಕು ಬರುತ್ತದೆ. ಶೇ.5 ಮಂದಿಗೆ ಸೋಂಕುಪುನರಾವರ್ತನೆಯಾಗುವ ಸಾಧ್ಯತೆಗಳಿರುತ್ತವೆ.ಹೀಗಾಗಿ, ಎಚ್ಚರಿಕೆ ವಹಿಸಲೇಬೇಕು ಎಂದುಡಾ.ನಾಗರಾಜ್ ತಿಳಿಸಿದ್ದಾರೆ.
ಜಯಪ್ರಕಾಶ್ ಬಿರಾದಾರ್