ಚಾಮರಾಜನಗರ: ಕೋವಿಡ್ ಮಾರ್ಗಸೂಚಿಉಲ್ಲಂ ಸುವವರ ವಿರುದ್ಧ ಕಾರ್ಯಚಟುವಟಿಕೆನಡೆಸಲು ರೂಪುಗೊಂಡಿರುವ ರಾಜ್ಯದಲ್ಲೇಮೊದಲು ಎನ್ನಬಹುದಾದ ಯುವ ಸುರûಾಕೋವಿಡ್ ರಕ್ಷಣಾ ಪಡೆಯ ಕಾರ್ಯಚಟುವಟಿಕೆಗೆಭಾನುವಾರ ಚಾಲನೆ ನೀಡಲಾಯಿತು.
ಈಗಾಗಲೇ ವಿಪತ್ತಿನ ಸಂದರ್ಭದಲ್ಲಿ ಪರಿಹಾರಕಾರ್ಯಾಚರಣೆಗೆ ನೆರವಾಗುವ ವಿಶೇಷ ತರಬೇತಿಪಡೆದಿರುವ ನೆಹರು ಯುವ ಕೇಂದ್ರದ ಯುವಜನರನ್ನು ಒಳಗೊಂಡ ಯುವ ಸುರಕ್ಷಾ ಕೋವಿಡ್‌ರಕ್ಷಣಾ ಪಡೆ ಕೋವಿಡ್ ನಿಯಂತ್ರಣ ಹಾಗೂಮುಂಜಾಗ್ರತಾ ಕ್ರಮಗಳಿಗೂ ಸಜ್ಜುಗೊಂಡಿದೆ.
ಒಟ್ಟು 13 ಪ್ರತ್ಯೇಕ ತಂಡ ರಚಿಸಲಾಗಿದ್ದು, ಪ್ರತಿಸುರಕ್ಷಾ ಪಡೆಯ ತಂಡದಲ್ಲಿ ವಿಪತ್ತು ಕ್ಷಿಪ್ರಕಾರ್ಯಪಡೆಯ ಮೂವರು ಯುವಜನರು, ಓರ್ವನಗರಸಭೆ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಸೇರಿದಂತೆ 5 ಮಂದಿ ಇರಲಿದ್ದಾರೆ.ತಮ್ಮದೇ ಆದ ಸಮವಸ್ತ್ರ ಧರಿಸಿ, ಸೀಟಿ ಊದುವಮೂಲಕ ಜನಸಂದಣಿ ಸ್ಥಳಗಳು, ಕಲ್ಯಾಣಮಂಟಪ, ಸಾರ್ವಜನಿಕ ಸಮಾರಂಭ ಸ್ಥಳಗಳಿಗೆಭೇಟಿ ನೀಡಿ ಕೋವಿಡ್ ಶಿಷ್ಟಾಚಾರಉಲ್ಲಂ ಸುವವರ ವಿರುದ್ಧ ದಂಡ ವಿಧಿಸುವಕಾರ್ಯಾಚರಣೆಗೆ ಸುರûಾ ತಂಡ ಇಳಿಯಲಿದೆ.
ಅಲ್ಲದೇ ಕೋವಿಡ್ ಹರಡದಂತೆ ವಹಿಸಬೇಕಿರುವಮುನ್ನೆಚ್ಚರಿಕೆ ಕ್ರಮಗಳು, ಮಾಸ್ಕ್ ಧರಿಸುವಿಕೆಯಮಹತ್ವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಬಗ್ಗೆ ಜಾಗೃತಿ ವಹಿಸಲಿದೆ.ಜಿಲ್ಲಾದ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿಕೋವಿಡ್ ಮಾರ್ಗಸೂಚಿ ಉಲ್ಲಂ ಸುವವರವಿರುದ್ಧ ಕಾರ್ಯಚಟುವಟಿಕೆ ನಡೆಸುವ ಸುರಕ್ಷಾತಂಡದ ಕಾರ್ಯಗಳಿಗೆ ನಗರಸಭೆ ಅಧ್ಯಕ್ಷೆ ಆಶಾನಟರಾಜು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ,ಎಸ್ಪಿ ದಿವ್ಯಾ ಸಾರಾ ಥಾಮಸ್ ನಗರದ ಭುವನೇಶ್ವರಿವೃತ್ತದಲ್ಲಿ ಹಸಿರು ನಿಶಾನೆ ತೋರುವ ಮೂಲಕಚಾಲನೆ ನೀಡಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೀಟಿಊದುವುದರೊಂದಿಗೆ ಸುರûಾ ತಂಡಗಳುಕಾರ್ಯಾಚರಣೆಗೆ ಮುಂದಾದವು. ಈ ವೇಳೆ ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಕೆ.ಸುರೇಶ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ,ನಗರಸಭೆ ಆಯುಕ್ತ ಕರಿಬಸವಯ್ಯ, ನೆಹರುಯುವ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್‌ಕಾರಂತ್, ಸಹಾಯಕ ಕಾರ್ಯಪಾಲಕಎಂಜಿನಿಯರ್ ಗಿರಿಜಾ, ಹಿರಿಯ ಆರೋಗ್ಯನಿರೀಕ್ಷಕರಾದ ಶರವಣ, ಮಹದೇವಸ್ವಾಮಿ,ಪೊಲೀಸ್ ಅಧಿಕಾರಿಗಳು ಇತರರಿದ್ದರು.