ಹುಬ್ಬಳ್ಳಿ: ಕೋವಿಡ್-19 ಸೋಂಕು ದೃಢವಾದರೂ, ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿಲ್ಲ ಎಂದು ಸೋಂಕಿತನೊಬ್ಬನ ರಸ್ತೆಯಲ್ಲಿ ಓಡಾಡಿ ಅವಾಂತರ ಸೃಷ್ಠಿಸಿದ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಈ ಸೋಂಕಿತ ವ್ಯಕ್ತಿಯು ರೈಲ್ವೆ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರ ನಾಗಿದ್ದು, ಉತ್ತರ ಪ್ರದೇಶ ಮೂಲದವನು ಎನ್ನಲಾಗಿದೆ. ಈತ ಚನ್ನಮ್ಮ ವೃತ್ತದ ಬಳಿ ಇರುವ ಲಾಡ್ಜ್ ನಲ್ಲಿ ವಾಸ್ತವ್ಯವಿದ್ದ.
ಶನಿವಾರ ರಾತ್ರಿ ಈತನಿಗೆ ಕೋವಿಡ್-19 ಪಾಸಿಟಿವ್ ಎಂದು ಮೇಸೆಜ್ ಬಂದಿದೆ. ಆದರೆ ಆತನನ್ನು ಕರೆದೊಯ್ಯಲು ಆಂಬೆಲೆನ್ಸ್ ಬಂದಿರಲಿಲ್ಲ. ರಾತ್ರಿ 11 ಗಂಟೆಯಿಂದ ಪೋನ್ ಮಾಡಿದರೂ ಯಾರು ಕಾಳಜಿ ಮಾಡುತ್ತಿಲ್ಲ ಎಂದು ಗೋಳಾಡಿಕೊಂಡಿದ್ದಾನೆ.
ಆಂಬ್ಯುಲೆನ್ಸ್ ಗಾಗಿ ಕಾಯುತ್ತಿದ್ದ ಸೋಂಕಿತ ಚೆನ್ನಮ್ಮ ವೃತ್ತದ ಲಾಡ್ಜ್ ನಲ್ಲಿ ಓಡಾಡುತ್ತಿದ್ದಾನೆ. ತನಗೆ ಪಾಸಿಟಿವ್ ಇದೆ, ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಾಗ ಪೊಲೀಸ್ ಸಿಬ್ಬಂದಿ ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ.
ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಕುರಿತು ಮಾಧ್ಯಮಗಳು ಸುದ್ದಿ ಬಿತ್ತರಿಸಿದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸೋಂಕಿತನನ್ನು ಆಂಬ್ಯುಲೇನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.