Advertisement

ಯುವಕರಿಂದ ಮೃತ ಸೋಂಕಿತನ ಅಂತ್ಯ ಸಂಸ್ಕಾರ

12:57 PM Aug 21, 2020 | Suhan S |

‌ಕನಕಪುರ: ತಾಲೂಕಿನ ಕೊಟ್ಟಗಾಳು ಗ್ರಾಮದ ಬಸವ ರಾಜು (34) ಕೋವಿಡ್ ದಿಂದ ಗುರುವಾರ ಮೃತ ಪಟ್ಟಿದ್ದು, ಗ್ರಾಪಂ ಅಧಿಕಾರಿಗಳೊಂದಿಗೆ ಗ್ರಾಮದ ಯುವಕರು ಪಿಪಿಇ ಕಿಟ್‌ ಧರಿಸಿ ಕೋವಿಡ್‌-19 ನಿಯಮಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.

Advertisement

ತಾಲೂಕಿನ ಮರಳವಾಡಿ ಹೋಬಳಿಯ ಕೊಟ್ಟಗಾಳು ಗ್ರಾಮದ ಬಸವರಾಜು ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಕೊಟ್ಟಗಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕೋವಿಡ್‌-19 ಪರಿಕ್ಷೆಯಲ್ಲಿ ನೆಗೆಟಿವ್‌ ಫ‌ಲಿತಾಂಶ ಬಂದಿತ್ತು. ಆದರೆ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ಬಸವರಾಜು ಅವರನ್ನು ಪೋಷಕರು ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿ ಕೋವಿಡ್‌-19 ಪರಿಕ್ಷೆಗೆ ಒಳಪಡಿಸಿದಾಗ ಕೋವಿಡ್ ಆರಂಭಿಕ ಹಂತದ ರೋಗ ಲಕ್ಷಣಗಳು ಕಂಡುಬಂದಿತ್ತು.

ಗುರುವಾರ ಚಿಕಿತ್ಸೆ ಫ‌ಲಿಸದೇ ಮೃತಪಟ್ಟಿದ್ದಾನೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ಶವದ ಬಳಿ ಬರಲು ಹೆದರುವ ಜನರ ನಡುವೆ ಕೊಟ್ಟಗಾಳು ಗ್ರಾಮದ ಕಾಂತರಾಜು, ಕೆಂಪೇಗೌಡ, ಸಂತೋಷ್‌, ರುದ್ರೇಶ್‌, ಗಿರೀಶ್‌, ಸೇರಿದಂತೆ ಯುವಕರ ತಂಡ ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ನೇರವಾಗಿ ಕೊರೊನಾದಿಂದ ಮೃತಪಟ್ಟಿದ ಬಸವರಾಜು ಅವರ ಅಂತ್ಯಸಂಸ್ಕಾರದಲ್ಲಿ ಪಿಪಿಇ ಕಿಟ್‌ ಧರಿಸಿ ಭಾಗಿಯಾಗುವ ಮೂಲಕ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಮೃತ ವ್ಯಕ್ತಿಯ ನಿವಾಸದ ಬಳಿ ಗ್ರಾಪಂ ಅಧಿಕಾರಿಗಳು ಸ್ಯಾನಿಟೈಸ್‌ ಮಾಡಿದ್ದಾರೆ. ಪಿಡಿಒ ಲೋಕೇಶ್‌, ಕಾರ್ಯ ದರ್ಶಿ ರಾಮಾಜನೇಯ, ಸಿಬ್ಬಂದಿಗಾಳದ ಕರಿಯಪ್ಪ, ನಾರಾಯಣ, ರಾಜೇಶ್‌, ಆಶಾ ಕಾರ್ಯಕರ್ತೆ ರತ್ನಮ್ಮ, ಅಂಗನವಾಡಿ ಕಾರ್ಯಕರ್ತೆ ಗೀತಾ, ಪೊಲೀಸ್‌ ಸಿಬ್ಬಂದಿ ರೇವಣ್ಣ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next