Advertisement

ಕೋವಿಡ್‌ ಅಕ್ರಮ: ಆಯೋಗದ ವ್ಯಾಪ್ತಿ ನಿಗದಿಪಡಿಸಿ ಸರಕಾರ ಆದೇಶ

11:29 PM Oct 09, 2023 | Team Udayavani |

ಬೆಂಗಳೂರು: ಕೋವಿಡ್‌ ಅಕ್ರಮಗಳ ಕುರಿತಂತೆ ನ್ಯಾ| ಮೈಕಲ್‌ ಡಿ. ಕುನ್ಹಾ ನೇತೃತ್ವದಲ್ಲಿ ರಚನೆಯಾಗಿರುವ ವಿಚಾರಣ ಆಯೋಗಕ್ಕೆ ತನಿಖೆಯ ವ್ಯಾಪ್ತಿಯನ್ನು ನಿಗದಿಪಡಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ.

Advertisement

ಪ್ರಮುಖವಾಗಿ ಮೊದಲ ಲಾಕ್‌ಡೌನ್‌ ಆರಂಭವಾದ ದಿನದಿಂದ ಹಿಡಿದು 2022ರ ಡಿ.31ರ ವರೆಗಿನ ಆರೋಪಗಳು, ನಿಯಮ ಉಲ್ಲಂಘನೆ, ಲೋಪಗಳು ಹಾಗೂ ಇನ್ನಿತರ ಅಂಶಗಳನ್ನು ಒಳಗೊಂಡು ವಿಚಾರಣೆ ನಡೆಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಕೋವಿಡ್‌ ನಿರ್ವಹಣೆ ವೇಳೆ ಅಕ್ರಮಗಳು ನಡೆದಿರುವ ಬಗ್ಗೆ ಹಾಗೂ ಸಾವುಗಳು ಸಂಭವಿಸಿರುವುದಕ್ಕೆ ಸಂಬಂಧಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿತ್ತು. ಇದನ್ನು ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳಲ್ಲೂ ಔಷಧ, ಉಪಕರಣ ಖರೀದಿ, ಆಮ್ಲಜನಕ ಕೊರತೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವು ಹಾಗೂ ಇತ್ಯಾದಿ ವಿಷಯಗಳ ಕುರಿತು ಸಮಗ್ರ ತನಿಖೆ ನಡೆಸಲು ನ್ಯಾ| ಮೈಕಲ್‌ ಡಿ. ಕುನ್ಹಾ ನೇತೃತ್ವದ ವಿಚಾರಣ ಆಯೋಗ ರಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next