Advertisement

ಮಾರ್ಗಸೂಚಿ ಪಾಲಿಸಲು ಚುನಾವಣಾ ಆಯೋಗ ಕಟ್ಟಪ್ಪಣೆ

01:08 PM Apr 11, 2021 | Team Udayavani |

ಬೆಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂ ಸಿದ್ದಲ್ಲಿ ರಾಜಕೀಯ ನಾಯಕರು, ಸ್ಟಾರ್‌ ಪ್ರಚಾರಕರು ಹಾಗೂಅಭ್ಯರ್ಥಿಗಳ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಗಳು, ರ್ಯಾಲಿಗಳನ್ನು ನಿಷೇಧಿಸಲು ಹಿಂದೇಟು ಹಾಕುವುದಿಲ್ಲ ಎಂದು ಚುನಾವಣಾ ಆಯೋಗ ಖಡಕ್‌ ಎಚ್ಚರಿಕೆ ನೀಡಿದೆ.

Advertisement

ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳಿಗೆಏ.9ರಂದು ಸೂಚನೆ ಹೊರಡಿಸಿರುವ ಚುನಾವಣಾಆಯೋಗ, ಕೋವಿಡ್‌-19 ನಿಯಂತ್ರಣ ಅಭಿ ಯಾನದಲ್ಲಿ ರಾಜಕೀಯ ನಾಯಕರು”ಮಾದರಿಗಳಾಗಿರಬೇಕು’ ಆದ್ದರಿಂದ ರ್ಯಾಲಿ,ಸಭೆ-ಸಮಾರಂಭಗಳ ವೇಳೆ ಕೋವಿಡ್‌ ಸುರಕ್ಷತಾಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಸ್ವತಃಪಾಲಿಸಬೇಕು ಮತ್ತು ಬೆಂಬಲಿಗರು, ಕಾರ್ಯಕರ್ತರಿಗೂ ಪ್ರೇರೇಪಿಸಬೇಕು. ಸ್ಟಾರ್‌ಪ್ರಚಾರಕರು ಸೇರಿ ರಾಜಕೀಯ ನೇತಾರರು, ಅಭ್ಯರ್ಥಿಗಳಚುನಾವಣಾ ಪ್ರಚಾರ ರ್ಯಾಲಿಗಳ ವಿಚಾರದಲ್ಲಿ 2020ರ ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಪಾಲಿಸಬೇಕು. ಉಲ್ಲಂ ಸಿದರೆ ಕಾನೂನು ರೀತಿಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.

ರಾಜ್ಯದಲ್ಲಿ ಒಂದು ಲೋಕಸಭೆ ಮತ್ತು ಎರಡುವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರಚಾರದ ಭರಾಟೆ ಇದೆ. ಈ ನಡುವೆ ಮಾ.23ರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿಜನ ಸೇರುತ್ತಿದ್ದು, ರಾಜಕೀಯ ನೇತಾರರು ಸೇರಿಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಿರುವಬಹುತೇಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕೋವಿಡ್‌ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂ ಸುತ್ತಿರುವುದು ಕಂಡುಬರುತ್ತಿದೆ.

ಹೈಕೋರ್ಟ್‌ ಸಹ ಈ ಬಗ್ಗೆ ಆತಂತ ವ್ಯಕ್ತಪಡಿಸಿ, ರಾಜಕೀಯ ಪಕ್ಷಗಳ ಚುನಾವಣಾರ್ಯಾಲಿ, ಸಭೆ-ಸಮಾರಂಭಗಳಲ್ಲಿ ಕೋವಿಡ್‌ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ತಾಕೀತು ಮಾಡಿದೆ.

ಚುನಾವಣಾ ಪ್ರಚಾರ ರ್ಯಾಲಿ, ಸಭೆ-ಸಮಾರಂಭಗಳಲ್ಲಿ ಎಷ್ಟು ಜನ ಇರಬೇಕು, ಕೋವಿಡ್‌ ಸುರಕ್ಷತಾ ಮಾರ್ಗಸೂಚಿಗಳನ್ನುಯಾವ ರೀತಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಬಗ್ಗೆಚುನಾವಣಾ ಆಯೋಗಹೊರಡಿಸಿರುವ ನಿರ್ದೇಶನಗಳನ್ನುಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಗೆ ರವಾನಿಸಲಾಗಿದೆ. ಅಷ್ಟೇ ಅಲ್ಲ, ಆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಸೂಚಿಸಲಾಗಿದೆ. – ಡಾ. ಸಂಜೀವಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next