Advertisement
ಪರೀಕ್ಷೆ ಕಡ್ಡಾಯಕಲ್ಪತರು ನಾಡಿನ 1,242 ಗ್ರಾಮಗಳಲ್ಲಿ ಕೊರೊನಾ ತನ್ನ ಆರ್ಭಟ ತೋರಿಸಿಲ್ಲ. ಹೊರಗಿನಿಂದ ಬಂದವರಿಗೆ ಪರೀಕ್ಷೆ ಕಡ್ಡಾಯ ಮಾಡಿ ಐಸೊಲೇಶನ್‌ನಲ್ಲಿ ಇರಿಸಲಾಗಿತ್ತು. ಹಲವು ಗ್ರಾಮಗಳು ಮುಂಜಾಗ್ರತಾ ಕ್ರಮ ಕೈಗೊಂಡು ಗ್ರಾಮ ಸ್ಯಾನಿಟೈಸೇಶನ್, ಲಕ್ಷಣ ಕಂಡುಬಂದರೆ ತತ್‌ಕ್ಷಣ ವೈದ್ಯರ ಸಲಹೆ ಪಡೆಯುವುದು ಸೋಂಕು ನಿಯಂತ್ರಣಕ್ಕೆ ಸಹಾಯ ಮಾಡಿವೆ.
ಜಿಲ್ಲೆಯಲ್ಲಿ ಕೊರೊನಾ ಮುಕ್ತ 825 ಗ್ರಾಮಗಳಿವೆ. ಕೊರೊನಾ ಹೆಚ್ಚಾಗುತ್ತಿದ್ದಂತೆ ಗ್ರಾಮ ಪಡೆ, ಪಂಚಾಯತ್ ಪಡೆಗಳನ್ನು ರಂಗಕ್ಕಿಳಿಸಲಾಯಿತು. ಸೋಂಕುಪೀಡಿತರು ಹೆಚ್ಚಿರುವ ಗ್ರಾಮಗಳಲ್ಲಿ ಸ್ಥಳೀಯವಾಗಿ ಕೋವಿಡ್ ಕೇರ್ ಕೇಂದ್ರ ಆರಂಭಿಸಲಾಗಿದೆ. ಕಾರ್ಯಪಡೆ ರಚನೆ
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ 157 ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಜಿ.ಪಂ. ಸಿಇಒ ವಿಶೇಷ ಕ್ರಮ ಕೈಗೊಂಡಿದ್ದು, ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ, ಸೋಂಕುಪೀಡಿತರ ಮನೆಗೆ ತೆರಳಿ ಸ್ಥಿತಿಗತಿ ಪರಿಶೀಲಿಸುತ್ತಿದ್ದಾರೆ.
Related Articles
ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊರೊನಾ ಕಾಲಿಟ್ಟಿಲ್ಲ. ಇದಕ್ಕೆ ಇಲ್ಲಿನ ಭೌಗೋಳಿಕ ಲಕ್ಷಣ, ಜಿಲ್ಲಾಡಳಿತ, ಜಿ.ಪಂ ಮತ್ತು ಸ್ಥಳೀಯವಾಗಿ ಅನುಸರಿಸಿದ ಕ್ರಮಗಳು ಕಾರಣ. ಜಿ.ಪಂ. ವತಿಯಿಂದ ಗ್ರಾಮ ಪಡೆಗಳನ್ನು ಸಕ್ರಿಯಗೊಳಿಸಲಾಗಿದೆ.
Advertisement
ಟಾಸ್ಕ್ ಫೋರ್ಸ್ ಪರಿಶ್ರಮಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಸಕ್ರಿಯವಾಗಿವೆ. ಗ್ರಾಮದಿಂದ ಹೊರಗೆ ಯಾರೂ ಹೋಗದಿರುವುದು, ಸೋಂಕು ಕಾಣಿಸಿಕೊಂಡರೆ ತತ್‌ಕ್ಷಣ ಆಸ್ಪತ್ರೆಗೆ ದಾಖಲಾತಿ ಕ್ರಮ ಅನುಸರಿಸಲಾಗಿದೆ. ಪರೀಕ್ಷೆ ಹೆಚ್ಚಳ
ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮ, ಕಠಿನ ಕ್ರಮ ಜಾರಿಯಿಂದಾಗಿ ಜಿಲ್ಲೆಯ 500ಕ್ಕೂ ಹೆಚ್ಚು ಹಳ್ಳಿಗಳು ಕೋವಿಡ್ ಸೋಂಕಿನಿಂದ ಮುಕ್ತವಾಗಿ ಉಳಿದಿವೆ. ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಿಸಿದ್ದರಿಂದ ಸೋಂಕು ಹತೋಟಿಗೆ ತರಲು ಸಾಧ್ಯವಾಗಿದೆ. ಮನೆ ಮನೆ ಸಮೀಕ್ಷೆ
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯಲ್ಲಿ ಸೋಂಕು ಕ್ರಮೇಣ ಕಡಿಮೆಯಾಗುತ್ತಿದೆ. ಈಗ ಜಿಲ್ಲೆಯಲ್ಲಿ 465 ಹಳ್ಳಿಗಳು ಸಂಪೂರ್ಣ ಸೋಂಕು ಮುಕ್ತವಾಗಿವೆ. ಜಿಲ್ಲೆಯಲ್ಲಿ ಒಟ್ಟು 1,080 ಹಳ್ಳಿಗಳಿದ್ದು, ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡುವುದರ ಜತೆಗೆ ಮನೆ ಮನೆ ಸಮೀಕ್ಷೆಯಿಂದ ಸೋಂಕುಪೀಡಿತರನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಜತೆಗೆ ಕಠಿನ ಲಾಕ್ ಡೌನ್ ನಿಂದಾಗಿ ಸೋಂಕು ನಿಯಂತ್ರ ಣಕ್ಕೆ ಬಂದಿದೆ ಆರಂಭದಲ್ಲೇ ಪತ್ತೆ
ಜಿಲ್ಲೆಯ 380 ಗ್ರಾಮಗಳಲ್ಲಿ ಶೂನ್ಯ ಪ್ರಕರಣಗಳಿವೆ. ಗ್ರಾಮಸ್ಥರೇ ಮುಂಜಾಗ್ರತೆ ವಹಿಸಿದ್ದರಿಂದ ಕೊರೊನಾ ಮುಕ್ತಿ ಸಾಧ್ಯವಾಗಿದೆ. ಗ್ರಾಮಸ್ಥರೇ ಜಿ.ಪಂ. ಮಾರ್ಗಸೂಚಿಯಂತೆ ಕುಟುಂಬ ಆರೋಗ್ಯ ಸಂರಕ್ಷಣ ತಂಡ ರಚಿಸಿಕೊಂಡು ಪ್ರತೀ 3 ದಿನಗಳಿಗೊಮ್ಮೆ ಮನೆ ಮನೆಗೆ ಭೇಟಿ ನೀಡಿದ್ದಾರೆ. ಲಕ್ಷಣ ಕಾಣಿಸಿಕೊಂಡವರಿಗೆ ಆರಂಭದಲ್ಲೇ ಔಷಧಗಳ ಕಿಟ್ ನೀಡಲಾಗುತ್ತಿದೆ. ಬಿಗಿ ಲಾಕ್‌ಡೌನ್
ಜಿಲ್ಲೆಯ 635 ಹಳ್ಳಿಗಳ ಪೈಕಿ 357 ಹಳ್ಳಿಗಳು ಕೊರೊನಾ ಮುಕ್ತವಾಗಿವೆ. ವಾರಕ್ಕೆ ಎರಡು ದಿನ ಸ್ಯಾನಿಟೈಸೇಶನ್, ಮಾಸ್ಕ್ ಧಾರಣೆ ಮತ್ತು ಬಿಗಿ ಲಾಕ್‌ಡೌನ್ ಜಾರಿಯಾಗಿದ್ದರಿಂದ ಪರಿಣಾಮ ಸಾಧಿಸಲಾಗಿದೆ. ರ‍್ಯಾಪಿಡ್ ಪರೀ ಕ್ಷೆ
ಜಿಲ್ಲೆಯ ಪ್ರತೀ ಹಳ್ಳಿಯಲ್ಲಿ ಸೋಂಕು ಕಾಲಿಟ್ಟಿದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಆ್ಯಂಟಿಜನ್ ರ‍್ಯಾಪಿಡ್ ತಪಾಸಣೆ ನಡೆಸಲಾಗಿದೆ. ಸದ್ಯ ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ತಪಾಸಣೆ ಮುಗಿದಿದೆ. ಹೊಲದಲ್ಲೇ ಕ್ವಾರಂಟೈನ್
ಜಿಲ್ಲೆಯಲ್ಲಿ 200 ಹಳ್ಳಿಗಳು ಕೊರೊನಾ ಮುಕ್ತವಾಗಿದ್ದರೆ, 500ಕ್ಕೂ ಹೆಚ್ಚು ಗ್ರಾಮಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣಗಳು ಕಂಡು ಬಂದಿವೆ. ಹೊರಗಿನಿಂದ ಬಂದವರನ್ನು ಊರ ಹೊರಗಿನ ಹೊಲ, ಶೆಡ್‌ಗಳಲ್ಲಿ 8-10 ದಿನ ಪ್ರತ್ಯೇಕವಾಗಿ ಉಳಿಯಲು ವ್ಯವಸ್ಥೆ ಮಾಡಿ ಬಳಿಕ ಊರಿಗೆ ಪ್ರವೇಶ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಅನುಸರಿಸಿದ ಮಾರ್ಗಗಳು
– ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ
– ಆಶಾ, ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ
– ಮನೆ ಮನೆಗೆ ತೆರಳಿ ಸಮೀಕ್ಷೆ, ಕಡ್ಡಾಯ ಪರೀಕ್ಷೆ
– ಪರವೂರಿನವರಿಗೆ ಪ್ರವೇಶ ನಿರಾಕರಣೆ
– ಊರ ಹೊರಗೇ ಕ್ವಾರಂಟೈ ನ್
– ಸೋಂಕು ಕಾಣಿಸಿಕೊಂಡ ಆರಂಭದಲ್ಲೇ ಚಿಕಿತ್ಸೆ
– ವಲಸೆ ಹೋಗಿ ವಾಪಸ್ ಬಂದವರ ಮೇಲೆ ನಿಗಾ