Advertisement

ದೇಶದ 146 ಜಿಲ್ಲೆಗಳು ಈಗ ಕೋವಿಡ್ ಮುಕ್ತ : ಆರೋಗ್ಯ ಸಚಿವ ಡಾ|ಹರ್ಷವರ್ಧನ್

02:25 AM Jan 29, 2021 | Team Udayavani |

ಹೊಸದಿಲ್ಲಿ: “ದೇಶದ 146 ಜಿಲ್ಲೆಗಳಲ್ಲಿ ಏಳು ದಿನಗಳಿಂದ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಸೋಂಕಿನ ಪ್ರಭಾವ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ’ – ಹೀಗೆಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಗುರುವಾರ ತಿಳಿಸಿದ್ದಾರೆ.

Advertisement

ಸತತ ಪರೀಕ್ಷೆ, ಮುನ್ನೆಚ್ಚರಿಕ ಕ್ರಮಗಳಿಂದ ಈ ಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದುವರೆಗೆ 19.5 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. 14 ದಿನಗಳ ಅವಧಿಯಲ್ಲಿ 18 ಜಿಲ್ಲೆ, 21 ದಿನಗಳ ಅವಧಿಯಲ್ಲಿ 6, 28 ದಿನಗಳ ಅವಧಿಯಲ್ಲಿ 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿಲ್ಲ. ಪ್ರತೀ ದಿನ 12 ಲಕ್ಷ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ದೇಶದಲ್ಲಿ ಇದೆ. ಬುಧವಾರದಿಂದ ಗುರು­ವಾರದ ಅವಧಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕಿಂತ ಕಡಿಮೆಯೇ ಇದೆ ಎಂದಿದ್ದಾರೆ.

“ಸಂಪೂರ್ಣ ಸರಕಾರ ಮತ್ತು ಸಮಾಜ ಎಂಬ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶ ಸೋಂಕು ನಿಯಂತ್ರಿ­ಸುವಲ್ಲಿ ಯಶಸ್ವಿಯಾಗಿದೆ ಎಂದೂ ಹೇಳಿದ್ದಾರೆ.

165 ಯು.ಕೆ. ಮಾದರಿ ರೂಪಾಂತರ ಪ್ರಕರಣಗಳ ಸಂಖ್ಯೆ ದೃಢಪಟ್ಟಿದೆ. ಒಟ್ಟಾರೆಯಾಗಿ ಹೇಳುವುದಿದ್ದರೆ ದೇಶದಲ್ಲಿ ಕೊರೊನಾ ಸೋಂಕಿನ ಸರಣಿ ಛೇದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಜಗತ್ತಿನ ಮಿತ್ರ: ದೇಶದಲ್ಲಿ ಉತ್ಪಾದಿಸ­ಲಾಗಿರುವ ಎರಡು ಲಸಿಕೆಗಳನ್ನು ಇತರ ದೇಶಗಳಿಗೆ ಪೂರೈಕೆ ಮಾಡಲಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಸಚಿವ ಹರ್ಷವರ್ಧನ್‌. “ಇತರ ರಾಷ್ಟ್ರಗಳಿಗೆ ಲಸಿಕೆ ಪೂರೈಸುವುದರ ಮೂಲಕ ಭಾರತವು ಜಗತ್ತಿನ ಮಿತ್ರನಾಗಿದೆ. 1 ವಿಶ್ವದ ನಂಬಿಕೆ ಗಳಿಸಿಕೊಂಡಿದೆ. ದೇಶೀಯವಾಗಿಯೇ 2 ಲಸಿಕೆಗಳನ್ನು ಕ್ಷಿಪ್ರವಾಗಿ ಸಿದ್ಧಪಡಿಸಿದ್ದು ಸಾಧನೆಯೇ ಸರಿ’ ಎಂದು ಹೇಳಿದ್ದಾರೆ.

Advertisement

ದೇಶದಲ್ಲಿ ಇದು ವರೆಗೆ 24 ಲಕ್ಷ ಮಂದಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.

ನಿಯಮ ರವಾನೆ
ಲಸಿಕೆಗಳನ್ನು ಹಾಳು ಮಾಡದಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಳಿಗೆ ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದೆ. ಲಸಿಕೆ ವೇಸ್ಟ್‌ ಆಗದಂತೆ ತಡೆ ಯಲು ಸೂಕ್ತ ಮಾರ್ಗದರ್ಶಿಗಳನ್ನು ನೀಡಲಾಗಿದೆ. ಲಸಿಕೆ ವಿತರಣೆಯ ಹೊಣೆ ಹೊತ್ತವರು ನಿಗದಿತ 100 ಫ‌ಲಾನುಭವಿಗಳ ಜತೆಗೆ, ಹೆಚ್ಚುವರಿ ಜನರಿಗೂ ಲಸಿಕೆ ನೀಡಬಹುದು ಎಂದು ಸೂಚಿಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next