Advertisement

ಮುಂಬೈನಿಂದ ಬಂದಿದ್ದ ಇಬ್ಬರಿಗೆ ಕೋವಿಡ್

04:24 PM Jun 22, 2020 | Suhan S |

ಬಾಳೆಹೊನ್ನೂರು: ಮುಂಬಯಿನಿಂದ ಜೂನ್‌ 14 ರಂದು ಪಟ್ಟಣಕ್ಕೆ ಬಂದಿದ್ದ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು 5 ಜನರ ತಂಡ ಬಂದಿದ್ದು, ಅವರಲ್ಲಿ 18 ಮತ್ತು 50 ವರ್ಷದ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಉಳಿದ ಮೂವರನ್ನು ಪಟ್ಟಣದ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ.

Advertisement

ದ್ವೀತಿಯ ಹಂತದ ಸಂಪರ್ಕದಲ್ಲಿದ್ದ ಕೋವಿಡ್ ವಾರಿಯರ್ಸ್ ಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸೋಂಕಿತರು ಉಳಿದಿದ್ದ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗುವುದೆಂದು ತಿಳಿದು ಬಂದಿದೆ.

ಸೋಂಕಿತ ವ್ಯಕ್ತಿಗಳ ಕಾಲ್‌ ಹಿಸ್ಟರಿ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದು, ಆ ದಿನ ಬಸ್ಸಿನಲ್ಲಿದ್ದ ಪ್ರಯಾಣಿಕರ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ಆ ವ್ಯಕ್ತಿಯನ್ನು ಮನೆಯಿಂದ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದೊಯ್ದ ಸಂಬಂದಿಯೊಬ್ಬರಿಗೆ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next