Advertisement

ಬಿಟಿಪಿಎಸ್‌ನ 60 ಸಿಬ್ಬಂದಿಗೆ ಕೋವಿಡ್‌!

10:38 AM May 22, 2021 | Team Udayavani |

ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಕ್ಕೂ (ಬಿಟಿಪಿಎಸ್‌) ಮಹಾಮಾರಿ ಕೋವಿಡ್‌ ಸೋಂಕು ಆವರಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ.

Advertisement

ಕೇಂದ್ರದಲ್ಲಿನ ಮೂರು ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಶೇ.50ರಷ್ಟುಸಿಬ್ಬಂದಿ ಕೆಲಸ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸುತ್ತೋಲೆಹೊರಡಿಸಿದ್ದರೂ ಮೇಲಧಿಕಾರಿಗಳುಜಾರಿಗೊಳಿಸದಿರುವುದು ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಸಿಬ್ಬಂದಿಗಳಲ್ಲಿ ಕೋವಿಡ್‌ ಸೋಂಕಿನ ಆತಂಕ ದಿನೇದಿನೆ ಹೆಚ್ಚುತ್ತಿದೆ. ಕೇಂದ್ರದ ವಿವಿಧ ಘಟಕಗಳಲ್ಲಿ ಕರ್ತವ್ಯನಿರ್ವಹಿಸುವ 60ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌ ಸೋಂಕು ಆವರಿಸಿದೆ. ಕೆಲವರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಬಳ್ಳಾರಿ, ವಿಜಯನಗರ ಜಿಲ್ಲೆಗಳು ಸೇರಿ ರಾಜ್ಯಾದ್ಯಂತಕೋವಿಡ್‌ ಸೋಂಕಿನ ಎರಡನೇ ಅಲೆಯ ಅಬ್ಬರ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುತ್‌ ಸೇರಿ ಎಲ್ಲ ಇಲಾಖೆಗಳಿಗೂ ಶೇ.50ರಷ್ಟು ಸಿಬ್ಬಂದಿ ಬಳಸಿಕೊಂಡು ರೊಟೇಷನ್‌ ಪದ್ಧತಿಯಲ್ಲಿ ಕೆಲಸ ಪಡೆಯುವಂತೆ ಸುತ್ತೋಲೆ ಹೊರಡಿಸಿದೆ. ಜತೆಗೆ ಲಾಕ್‌ಡೌನ್‌ ಸಹ ಘೋಷಣೆ ಮಾಡಿದೆಯಾದರೂ ಬಿಟಿಪಿಎಸ್‌ನಲ್ಲಿ ಸರ್ಕಾರದ ಈ ಸುತ್ತೋಲೆ ಅನ್ವಯವಾಗುತ್ತಿಲ್ಲ ಎಂಬುದು ಬಿಟಿಪಿಎಸ್‌ ಸಿಬ್ಬಂದಿ ಆರೋಪ.

ಕೇಂದ್ರದಲ್ಲಿ ಈಗಾಗಲೇ ಮೂರ್‍ನಾಲ್ಕು ಸಿಬ್ಬಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. 60ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ಆವರಿಸಿದ್ದು, ಮನೆ ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಸಿಬ್ಬಂದಿಗಳು, ಎಂಪ್ಲಾಯಿಸ್‌ ಯೂನಿಯನ್‌ ವತಿಯಿಂದ ಸಂಬಂಧಪಟ್ಟ ಮೇಲಧಿಕಾರಿಗೆ ಮನವಿ ಸಲ್ಲಿಸಿ ಸರ್ಕಾರ ಸುತ್ತೋಲೆಯಲ್ಲಿ ಹೊರಡಿಸಿರುವಂತೆ ದೃಷ್ಟಿಹೀನ, ಅಂಗವೈಕಲ್ಯ ಅಧಿಕಾರಿ-ಸಿಬ್ಬಂದಿ, ಗರ್ಭಿಣಿ ಮಹಿಳೆಯರಿಗೆ ಹಾಜರಾತಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು.

Advertisement

ಜತೆಗೆ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ಬಯೋಮೆಟ್ರಿಕ್‌ ಹಾಜರಾತಿಯಿಂದ ವಿನಾಯಿತಿ ನೀಡಬೇಕು. ಶೇ.50 ರಷ್ಟು ಸಿಬ್ಬಂದಿಗಳಿಂದ ರೊಟೇಷನ್‌ ಪದ್ಧತಿಯಲ್ಲಿ ಕೆಲಸ ಪಡೆಯಬೇಕು ಎಂದು ಕೋರಲಾಗಿದೆ. ಆದರೆ, ಇವರ ಮನವಿಗೆ ಸ್ಪಂದಿಸಿರುವಮೇಲಧಿಕಾರಿಗಳು, ಅಂಗವೈಕಲ್ಯ, ಗರ್ಭಿಣಿಯರಿಗೆ ಬಯೋಮೆಟ್ರಿಕ್‌ ನಿಂದ ವಿನಾಯಿತಿ ನೀಡಿದ್ದಾರೆ. ಆದರೆ ಶೇ.50ರಷ್ಟು ಸಿಬ್ಬಂದಿ ಬದಲಿಗೆ ಎಲ್ಲ ಸಿಬ್ಬಂದಿಗಳಿಂದಲೂ ಕೆಲಸಪಡೆಯುತ್ತಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ಮೂರು ಘಟಕಗಳು ಸ್ಥಗಿತ: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ 1700 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾಸಾಮರ್ಥ್ಯವನ್ನು ಹೊಂದಿದ್ದು, ಕಳೆದ ಮೂರ್‍ನಾಲ್ಕು ದಿನಗಳಿಂದ ಮೂರುಘಟಕಗಳು ಸ್ಥಗಿತಗೊಂಡಿವೆ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ವಿದ್ಯುತ್‌ ಬೇಡಿಕೆ ಬರುತ್ತಿಲ್ಲ. ಹೀಗಾಗಿ ಸದ್ಯ ಕೇಂದ್ರದಲ್ಲಿನ ಮೂರು ಘಟಕಗಳು ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಿವೆ.ಅಲ್ಲಿಯವರೆಗಾದರೂ ಶೇ.50ರಷ್ಟು ಸಿಬ್ಬಂದಿಬಳಸಿಕೊಂಡು ರೊಟೇಷನ್‌ ಪದ್ಧತಿಯಲ್ಲಿ ಕೆಲಸ ಪಡೆಯುವ ಮೂಲಕ ಇನ್ನುಳಿದ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂಬುದು ಕೇಂದ್ರದ ಸಿಬ್ಬಂದಿಗಳ ವಾದ.

ವಿದ್ಯುತ್‌ ಅಗತ್ಯ ಸೇವೆ: ವಿದ್ಯುತ್‌ ಉತ್ಪಾದನೆ ಅಗತ್ಯ ಸೇವೆಯಾಗಿದೆ. ಇದನ್ನು ಕೋವಿಡ್‌ ಸೋಂಕು, ಲಾಕ್‌ ಡೌನ್‌ ಎಂದು ನಿಲ್ಲಿಸಲಾಗದು. ಸರ್ಕಾರದ ಸುತ್ತೋಲೆಯಂತೆ ಶೇ.50ರಷ್ಟು ಸಿಬ್ಬಂದಿಗಳಿಂದ ಕೆಲಸ ಪಡೆಯಬೇಕಾಬೇಡವೆ ಎಂಬುದನ್ನು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ವಿದ್ಯುತ್‌ ಉತ್ಪಾದನೆ ಅಗತ್ಯ ಸೇವೆಯಾಗಿದ್ದರಿಂದ ಎಲ್ಲರೂ ಕೆಲಸ ಮಾಡಬೇಕು ಎಂದುಸೂಚಿಸಿದ್ದಾರೆ. ಅಗತ್ಯ ಸೇವೆಗಳಾದ ವೈದ್ಯರು, ಪೊಲೀಸರಂತೆ ವಿದ್ಯುತ್‌ ಉತ್ಪಾದನೆ ಸಹ ಅಗತ್ಯ ಸೇವೆಯಾಗಿದ್ದರಿಂದ ಬಿಟಿಪಿಎಸ್‌ಗೆ ವಿನಾಯಿತಿ ಇದೆ ಎಂದುಕಾರ್ಯನಿರ್ವಾಹಕ ನಿರ್ದೇಶಕ ಪ್ರೇಮನಾಥ್‌ ತಿಳಿಸಿದ್ದಾರೆ.

ನೂರಾರು ಸಿಬ್ಬಂದಿ ಕೆಲಸ; ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿನೂರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬಸ್‌ಗಳಲ್ಲಿ ಕರ್ತವ್ಯಕ್ಕೆ ಬರುವಾಗ ಸಾಮಾಜಿಕಅಂತರ ಪಾಲಿಸಲು ಬದ್ಧರಾಗಿದ್ದರೂ,ಪಾಲಿಸಲು ಸಾಧ್ಯವಾಗುತ್ತಿಲ್ಲ. ಕಾರಣಕೇಂದ್ರದಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿಗೆಕೋವಿಡ್‌ ಸೋಂಕು ದೃಢಪಟ್ಟಿದೆ. ಹಾಗಾಗಿಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಇನ್ನುಳಿದ ಸಿಬ್ಬಂದಿಗಳೂ ಆತಂಕಕ್ಕೆ ಒಳಗಾಗಿದ್ದಾರೆ.

ಪೊಲೀಸ್‌, ವೈದ್ಯಕೀಯ ಇಲಾಖೆಯಂತೆ ವಿದ್ಯುತ್‌ ಉತ್ಪಾದನೆಯೂ ಅಗತ್ಯಸೇವೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸುತ್ತೋಲೆಯಿಂದಬಿಟಿಪಿಎಸ್‌ಗೆ ವಿನಾಯಿತಿ ಲಭಿಸಿದ್ದು, ಎಲ್ಲರೂ ಸೇರಿ ಕೆಲಸ ಮಾಡುವಂತೆ ಮೇಲಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರದಲ್ಲಿ ಹಲವು ಸಿಬ್ಬಂದಿಗೆ ಕೋವಿಡ್‌ ಸೋಂಕು ಆವರಿಸಿದೆಯಾದರೂ ಗುಣಮುಖರಾಗುತ್ತಿದ್ದಾರೆ. ಪ್ರೇಮನಾಥ್‌,ಕಾರ್ಯನಿರ್ವಾಹಕ ನಿರ್ದೇಶಕರು, ಬಿಟಿಪಿಎಸ್‌ ಬಳ್ಳಾರಿ

 

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next