Advertisement

ಗರ್ಭಿಣಿ ಸೇರಿ 11 ಜನರಿಗೆ ಕೋವಿಡ್

11:33 AM Jul 20, 2020 | Suhan S |

ಆಳಂದ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಹಾರಾಷ್ಟ್ರ ಸೇರಿ ಇನ್ನಿತರ ಸಂಪರ್ಕ ಮೂಲದಿಂದ ಬಂದ 11 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Advertisement

ತಾಲೂಕಿನ ಮಾದನಹಿಪ್ಪರಗಾದ 24 ವರ್ಷದ ಪುರುಷ, 65 ವರ್ಷದ ಪುರುಷ, ದರ್ಗಾದಶಿರೂರ ಗ್ರಾಮದಲ್ಲಿ 60 ವರ್ಷದ ಪುರುಷ, ಯಳಸಂಗಿ ಗ್ರಾಮದಲ್ಲಿ 35 ವರ್ಷದ ಪುರುಷ, ವಾಗ್ಮೆರಿಯ 25 ವರ್ಷದ ಮಹಿಳೆ (ಮಹಾರಾಷ್ಟ್ರದಿಂದ ಬಂದವರು), ಕರಹರಿ ಗ್ರಾಮದಲ್ಲಿ ಒಂದೇ ಕುಟುಂಬದ 17 ವರ್ಷದ ಬಾಲಕಿ, 24 ವರ್ಷದ ಮಹಿಳೆ, 44 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರು ಜೂ. 28 ರಂದು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ ಎನ್ನಲಾಗಿದೆ.

ನಿಂಬರಗಾದ 25 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ತಡೋಳಾದಲ್ಲಿ 34 ವರ್ಷದ ಪುರುಷ, 25 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಭಾನುವಾರ ಅಂಕಿ ಅಂಶ ನೀಡಿದೆ.

ಪಟ್ಟಣ ಸೇರಿ ಗ್ರಾಮೀಣ ಭಾಗದ 233 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 179 ಗುಣಮುಖರಾಗಿದ್ದು, ಇನ್ನೂಳಿದ 46 ಮಂದಿ ಕೋವಿಡ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಎಂಟು ಜನರು ಮೃತಪಟ್ಟಿದ್ದಾರೆ. ಶಂಕಿತ ಮತ್ತು ಸೋಂಕಿತ ರೋಗಿಗಳಿಗೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಕಾರ್ಯ ಮುಂದುವರಿದಿದೆ. ಪಟ್ಟಣದಲ್ಲಿ ಜಿಲ್ಲಾಡಳಿತ ವಿ ಧಿಸಿದ ಲಾಕ್‌ಡೌನ್‌ಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next