Advertisement

ಕೋವಿಡ್ ಹಾವಳಿ: ಮಲ್ಲಿಗೆ ಕೃಷಿಕರು ಕಂಗಾಲು !

01:10 PM Apr 15, 2020 | sudhir |

ಬಂಟ್ವಾಳ: ಮದುವೆ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವ ಮಾರ್ಚ್‌-ಎಪ್ರಿಲ್‌ ಸಮಯದಲ್ಲೇ ಕೋವಿಡ್ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಮಲ್ಲಿಗೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಸೀಸನ್‌ ಸಮಯದಲ್ಲಿ ಹೂವುಗಳ ಮಾರುಕಟ್ಟೆಯೇ ನಿಂತುಹೋಗಿದೆ.

Advertisement

ಇತರ ಬೆಳೆಗಳ ಕೃಷಿಕರಿಗೆ ಧಾರಣೆಯಲ್ಲಿ ವ್ಯತ್ಯಾಸವಿದ್ದರೂ ಇಂದಲ್ಲ ನಾಳೆ ಅದಕ್ಕೆ ಮಾರುಕಟ್ಟೆ ಸಿಗುತ್ತದೆ. ಆದರೆ ಮಲ್ಲಿಗೆಗೆ ಅದನ್ನು ಗಿಡದಿಂದ ತೆಗೆದ ದಿನ ಅಥವಾ ಮರುದಿನ ಮಾತ್ರ ಮಾರುಕಟ್ಟೆ ಇರುವ ಕಾರಣ ಪ್ರಸ್ತುತ ಪರಿಸ್ಥಿತಿಯಿಂದಾಗಿ ಮಲ್ಲಿಗೆ ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲೂ ಸಾಕಷ್ಟು ಮಂದಿ ಕೃಷಿಕರು ಮಲ್ಲಿಗೆ ಕೃಷಿ ಮಾಡುತ್ತಿದ್ದಾರೆ.

ಪ್ರಸ್ತುತ ಮಾರುಕಟ್ಟೆ ಇಲ್ಲದಿರುವುದರಿಂದ ಕೃಷಿಕರು ಗಿಡಗಳಲ್ಲಿ ಹೂವು ಬಾರದಂತೆ ಆರೈಕೆ ಮಾಡಬಹುದು ಎಂದು ತೋಟಗಾರಿಕಾ ಇಲಾಖೆಯವರು ಸಲಹೆ ನೀಡುತ್ತಾರೆ. ಗೊಬ್ಬರ ಹಾಕುವುದನ್ನು ಕಡಿಮೆ ಮಾಡುವುದು ಸಹಿತ ಇತರ ವಿಧಾನಗಳ ಮೂಲಕ ಗಿಡಗಳು ಹೂವು ಬಿಡುವುದನ್ನು ಕಡಿಮೆ ಮಾಡಬಹುದು. ಮುಂದೆ ಮಾರು ಕಟ್ಟೆಗಳು ತೆರೆದುಕೊಂಡಾಗ ಮತ್ತೆ ಹಿಂದಿನ ರೀತಿಯಲ್ಲೇ ಹೂವು ಬಿಡುವಂತೆ ಮಾಡಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.

ಕೃಷಿಕರು ಮಾಹಿತಿ ನೀಡಿ
ಮಲ್ಲಿಗೆ ಕೃಷಿಕರು ತಮ್ಮಲ್ಲಿರುವ ಮಲ್ಲಿಗೆ ಗಿಡಗಳ ಕುರಿತು ಇಲಾಖೆಗೆ ಮಾಹಿತಿಯನ್ನು ನೀಡಿದರೆ ಅದರಿಂದ ಕೃಷಿಕರಿಗೆ ಸಾಕಷ್ಟು ಪ್ರಯೋಜನಗಳು ಸಿಗುವ ಸಾಧ್ಯತೆ ಇರುತ್ತದೆ. ಇಲಾಖೆಯಲ್ಲಿ ಕೃಷಿಕರ ಕುರಿತು ಮಾಹಿತಿ ಇದ್ದಾಗ, ಅವರಿಗೆ ಬೇಕಾದ ಸೌಲಭ್ಯಗಳ ಕುರಿತು ಸರಕಾರಕ್ಕೆ ಪ್ರಸ್ತಾವನೆಯನ್ನು ನೀಡಲು ಸಹಾಯಕವಾಗು ತ್ತದೆ. ಮತ್ತೂಂದೆಡೆ ವಿವಿಧ ತರಬೇತಿ ಗಳಿದ್ದಾಗ ಮಾಹಿತಿ ನೀಡಲೂ ಅನು ಕೂಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next