Advertisement

ಪಾದರಕ್ಷೆ ತಯಾರಿಕೆಗೂ ಕೋವಿಡ್ ಹೊಡೆತ

04:34 PM Apr 02, 2021 | Team Udayavani |

ಸಂಬರಗಿ: ಕೋವಿಡ್ ಮಹಾಮಾರಿಯಿಂದಾಗಿ ಮದಬಾವಿ ಹಾಗೂಸುತ್ತಮುತ್ತಲಿನ ಪಾದರಕ್ಷೆ ಉದ್ಯಮ ಕುಸಿದಿದ್ದು, ಸರ್ಕಾರದ ಸಹಾಯ,ಪ್ರೋತ್ಸಾಹಕ್ಕೆ ಕಾಯುತ್ತಿದ್ದಾರೆ.

Advertisement

ಮದಬಾವಿ ಸುತ್ತಮುತ್ತ ಸುಮಾರು5 ಸಾವಿರ ಕುಟುಂಬ ಚರ್ಮೋದ್ಯಮವನ್ನೇ ಅವಲಂಬಿಸಿದ್ದು, ಕುರುಂದವಾಡ ಚಪ್ಪಲಿ, ಬಂಟು, ಬ್ಯಾನರ್ಜಿ, ಮಹಾರಾಜ, ಸೇನಾಪತಿ,ಕೊಲ್ಹಾಪೂರಿ- ಮದಭಾವಿ ಸೇರಿದಂತೆ ಅನೇಕ ರೀತಿಯ ಚಪ್ಪಲಿಗಳನ್ನು ತಯಾರಿಸಲಾಗುತ್ತದೆ. ಪುಣೆ-ಮುಂಬೈ, ಬೆಳಗಾವಿ ಸೇರಿದಂತೆ ಈ ಚಪ್ಪಲಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ಇದೆ. ಕಳೆದ 1 ವರ್ಷದಿಂದ ಮಾರುಕಟ್ಟೆಯಿಲ್ಲದೇ ಪ್ರತಿ ಉದ್ಯಮಿ ಹತ್ತಿರ ಸಾವಿರಾರು ಜೋಡಿ ಚಪ್ಪಲಿಗಳು ಹಾಗೆಯೇ ಬಿದ್ದು ಕೊಳೆಯುತ್ತಿವೆ.

ಪಾದರಕ್ಷೆ ಮಾರಾಟವಿಲ್ಲದೇ ಒಂದುಹೊತ್ತಿನ ಊಟಕ್ಕೂ ಉದ್ಯಮಿಗಳುಪರದಾಡುವಂತಾಗಿದೆ. ಕಳೆದ ವರ್ಷ ಪಡೆದ ಸಾಲವನ್ನುಹೇಗೆ ಮರುಪಾವತಿಸಬೇಕೆಂಬ ಚಿಂತೆಯಲ್ಲಿದ್ದಾರೆ. ಕೋವಿಡ್ಹಿನ್ನೆಲೆಯಲ್ಲಿ ಹೈದ್ರಾಬಾದ್‌, ಸಾಂಗ್ಲಿ,ಪುಣೆ, ಮುಂಬೈ, ನಾಶಿಕ್‌ನಿಂದಕಚ್ಚಾವಸ್ತುಗಳ ಪೂರೈಕೆಯೂಸಮರ್ಪಕವಾಗಿ ಆಗುತ್ತಿಲ್ಲ.ಕಳೆದ ವರ್ಷ ಲಾಕ್‌ಡೌನ್‌ ಇದ್ದಾಗ ತಾವು ಯಾವುದೇನೆರವು ಕೇಳಿಲ್ಲ. ಈಗ ಸಮಸ್ಯೆ ಇದ್ದು,ಸರಕಾರ ಪ್ರತಿ ಕುಟುಂಬಕ್ಕೆ 50 ಸಾವಿರರೂ. ಸಹಾಯಧನ ನೀಡಿ, ಬ್ಯಾಂಕ್‌ಸಾಲ ಮನ್ನಾ ಮಾಡಬೇಕೆಂದು ಉದ್ಯಮಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಚರ್ಮ ಉದ್ಯಮಿ ಬಾಪುದಾದಾ ಅಭ್ಯಂಕರ ಮಾತನಾಡಿ, ಮದಭಾವಿ ಗ್ರಾಮಪಾದರಕ್ಷೆ ತಯಾರಿಸುವುದರಲ್ಲಿಹೆಸರುವಾಸಿಯಾಗಿದೆ. ಈ ಗ್ರಾಮಕ್ಕೆದೇಶ-ವಿದೇಶಗಳಿಂದ ಜನರು ಭೇಟಿನೀಡಿದ್ದಾರೆ. ಆದರೆ ಕಳೆದ ಒಂದುವರ್ಷದಿಂದ ಚರ್ಮ ಉದ್ಯೋಗಿಗಳುಬೀದಿಪಾಲಾಗಿದ್ದಾರೆ. ಸರಕಾರಯಾವುದೇ ವಿಚಾರ ಮಾಡಿಲ್ಲ, ಸಹಾಯ ಧನ ನೀಡಿಲ್ಲ. ಸರ್ಕಾರ ಸಹಾಯಕ್ಕೆ ಬಾರದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next