Advertisement
ಶುಂಠಿ ಒಂದು ಅದೃಷ್ಟದಬೆಳೆ, ಆ ಕಾರಣಕ್ಕೆ ಇದನ್ನು ಬಂಪರ್ ಬೆಳೆ ಎಂತಲೂ ಕರೆಯುತ್ತಾರೆ. ಶುಂಠಿ 15ವರ್ಷಗಳ ಹಿಂದೆ ತಾಲೂಕಿಗೆ ಲಗ್ಗೆ ಇಟ್ಟಿತ್ತು. ಅಲ್ಲಿಯ ವರೆಗೂ ಬಹುತೇಕ ರೈತರಿಗೆ ವಾಣಿಜ್ಯ ಬೆಳೆಯಾಗಿಗೋಚರಿಸಿದ್ದು ತಂಬಾಕು ಮತ್ತು ಮುಸುಕಿನ ಜೋಳಮಾತ್ರ. ಯಾವಾಗ ಶುಂಠಿ ತಾಲೂಕಿಗೆ ಲಗ್ಗೆ ಇಟ್ಟಿತ್ತೋ, ಅಂದಿನಿಂದ ಅದೃಷ್ಟ, ಲಾಭದಾಯಕ ಬೆಳೆಯಾಗಿ ರೈತರ ಕೈ ಹಿಡಿದು, ಸಾಲ ಮುಕ್ತರನ್ನಾಗಿ ಮಾಡಿತ್ತು.2020ರವರೆಗೂ ರೈತರಿಗೆ ಲಾಭದಾಯಕವಾಗಿದ್ದಶುಂಠಿ, ಈ ಬಾರಿ ಕೈಸುಡುವಂತೆ ಮಾಡಿದೆ. ಹಳೆ ಮೈಸೂರು ಪ್ರಾಂತ್ಯದ ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರು,ಕೊಡಗಿನ ಭಾಗಕ್ಕೆ ಸೀಮಿತವಾಗಿದ್ದ ಶುಂಠಿಯನ್ನುರಾಜ್ಯದ ಮೂಲೆಮೂಲೆಯಲ್ಲಿಯೂ ಬೆಳೆಯಲು ಪ್ರಾರಂಭಿಸಿದ್ದಾರೆ.
Related Articles
Advertisement
ಕೋವಿಡ್ ಕರಿ ನೆರಳು, ಕುಸಿದ ಬೆಲೆ: ಕಳೆದ 15 ವರ್ಷಗಳಿಂದ ದಾಖಲೆ ಬೆಲೆ ಕಂಡ ರೈತ, 2019ನೇ ಸಾಲಿನಲ್ಲಿ ಅದೃಷ್ಟ ಪರೀಕ್ಷೆಗಿಳಿದು 2020ರಲ್ಲಿ ಪ್ರತಿಕ್ವಿಂಟಲ್ ಶುಂಠಿಗೆ 4 ಸಾವಿರ ರೂ. ವರೆಗೆ ಇದ್ದ ಬೆಲೆ1,200 ರೂ. ಹಾಗೂ 2021ಸಾಲಿನಲ್ಲಿ 700 ರೂ.ಗೆಕುಸಿತ ಕಂಡಿರುವುದರಿಂದ ಕಂಗಲಾಗಿದ್ದಾರೆ.ವ್ಯವಸಾಯಕ್ಕೆ ಮಾಡಿದ್ದ ಖರ್ಚೂ ಸಿಗದಷ್ಟು ನಷ್ಟವಾಗುತ್ತಿದೆ.
ಸೂಕ್ತ ಮಾರುಕಟ್ಟೆ ಒದಗಿಸಿ: ಶುಂಠಿ ಖರೀದಿಗೆ ಕಂಪನಿಗಳು, ವರ್ತಕರು ಹೆಚ್ಚು ಮಧ್ಯವರ್ತಿಗಳನ್ನೇ ಅವಲಂಬಿಸುತ್ತಾರೆ. ಹಲವು ಹಂತಗಳಲ್ಲಿ ಕಮಿಷನ್‌ಗಾಗಿ ಕೆಲಸ ಮಾಡುವ ನೂರಾರು ಮಂದಿ ಹುಟ್ಟಿಕೊಂಡಿದ್ದಾರೆ. ಇದರಿಂದ ರೈತನಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲದಕ್ಕೆ ಶುಂಠಿಗೆ ಬೆಂಬಲ ಬಲೆಯಾಗಲಿ, ಮಾರುಕಟ್ಟೆ ವ್ಯವಸ್ಥೆಯಾಗಲಿ ಇಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಿ ಶುಂಠಿಬೆಳೆಗೆಸೂಕ್ತ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ಒದಗಿಸಲು ಮುಂದಾಗಬೇಕಿದೆ ಎಂಬುದು ರೈತನ ಆಶಯ.
ಮೂರು ಎಕರೆ ಜಮೀನಿನಲ್ಲಿ 7 ಲಕ್ಷ ರೂ. ಖರ್ಚುಮಾಡಿ ಶುಂಠಿ ಬೆಳೆದಿದ್ದೇನೆ, ಏಕಾಏಕಿ ಬೆಲೆ ಕುಸಿತದಿಂದ ಖರ್ಚುಮಾಡಿದಷ್ಟೂ ಹಣ ಸಿಕ್ಕಿಲ್ಲ, ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. -ಬಿ.ಎಸ್.ರಾಮಕೃಷ್ಣ, ರೈತ, ಬೆಕ್ಕರೆ ಗ್ರಾಮ
ಎರಡು ಎಕರೆ ಯಲ್ಲಿ ಶುಂಠಿ ಬಿತ್ತನೆ ಮಾಡಿದ್ದೆ. ರೋಗಬಾಧೆಗೆ ತುತ್ತಾಗಿ ಇಳುವರಿ ಕಡಿಮೆ ಯಾಗಿದೆ. 600 ಕ್ವಿಂಟಲ್ ಬದಲುಕೇವಲ 350 ಕ್ವಿಂಟಲ್ ಇಳುವರಿ ಬಂದಿದೆ. ಇದರ ನಡುವೆ ಕೊರೊನಾದಿಂದ ಅಂತಾರಾಜ್ಯ ಮಾರುಕಟ್ಟೆ ಕುಸಿತ ಕಂಡು, ಇತ್ತ ಕೈಗೆ ಬಂದಿರುವ ಶುಂಠಿ ಕೀಳಲು ಆಗದೇ, ಅತ್ತ ಜಮೀನಿನಲ್ಲಿ ಬಿಡಲೂ ಆಗದೇ ಪರದಾಡುವಂತಾಗಿದೆ. -ಬಾಲಚಂದ್ರ, ಶುಂಠಿ ಬೆಳೆಗಾರ, ಸುಂಡವಾಳು ಗ್ರಾಮ
-ಪಿ.ಎನ್.ದೇವೇಗೌಡ