Advertisement

ಕೋವಿಡ್ ಹಿನ್ನೆಲೆ : ಟೋಕಿಯೊ ಒಲಿಂಪಿಕ್ಸ್‌ಗೆ ಉತ್ತರ ಕೊರಿಯ ಗೈರು!

10:29 PM Apr 06, 2021 | Team Udayavani |

ಸಿಯೋಲ್ : ಟೋಕಿಯೊ ಒಲಿಂಪಿಕ್ಸ್‌ ಆರಂಭಕ್ಕೆ ಇನ್ನೆರಡು ತಿಂಗಳು ಬಾಕಿಯಿದೆ. ಅಷ್ಟರಲ್ಲಿ ಸರ್ವಾಧಿಕಾರಿಯ ಆಡಳಿತಕ್ಕೆ ಒಳಪಟ್ಟಿರುವ ಉತ್ತರ ಕೊರಿಯ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅಲ್ಲಿನ ಕ್ರೀಡಾಸಚಿವಾಲಯಕ್ಕೆ ಸೇರಿದ್ದ ವೆಬ್‌ಸೈಟ್‌ನಲ್ಲಿ ಸುದ್ದಿಯೊಂದು ಪ್ರಕಟವಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಒಲಿಂಪಿಕ್ಸ್‌ ನಲ್ಲಿ ಉತ್ತರ ಕೊರಿಯ ತಂಡ ಪಾಲ್ಗೊಳ್ಳುವುದಿಲ್ಲವೆಂದು ಘೋಷಿಸಲಾಗಿದೆ.

Advertisement

ಮಾ.25ರಂದು ನಡೆದ ಸಭೆಯಲ್ಲಿ ಆಟಗಾರರ ಆರೋಗ್ಯವೇ ಮುಖ್ಯ. ಜಾಗತಿಕ ಕೊರೊನಾ ಸಮಸ್ಯೆಯಿಂದ ಅಥ್ಲೀಟ್‌ಗಳನ್ನು ಪಾರು ಮಾಡಬೇಕೆಂಬ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಬೆಳವಣಿಗೆಯ ಬಗ್ಗೆ ದ.ಕೊರಿಯ ಐಕ್ಯತಾ ಸಚಿವಾಲಯ ಬೇಸರ ವ್ಯಕ್ತಪಡಿಸಿದೆ. ಎರಡೂ ದೇಶಗಳು ಮತ್ತೆ ಒಂದಾಗಲು ಇದ್ದ ಅವಕಾಶವನ್ನು ಈ ಬೆಳವಣಿಗೆ ಹಾಳು ಮಾಡಿದೆ ಎಂದು ಹೇಳಿದೆ. ಇನ್ನೊಂದು ಕಡೆ ಜಪಾನ್‌ ಒಲಿಂಪಿಕ್ಸ್‌ ಸಚಿವ ತಮಾಯೊ ಮರುಕವ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಾನಿನ್ನೂ ವಿವರಗಳನ್ನು ಸಂಗ್ರಹಿಸುತ್ತಿದ್ದೇನೆ ಆದ್ದರಿಂದ ಪ್ರತಿಕ್ರಿಯೆ ಕೊಡಲಾರೆ ಎಂದು ಮರುಕವ ಹೇಳಿದ್ದಾರೆ.

ಇದನ್ನೂ ಓದಿ :ಸಾರಿಗೆ ನೌಕರರ ಮುಷ್ಕರ : ಮಂಗಳೂರು ವಿವಿ ಪರೀಕ್ಷೆಗಳ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next