Advertisement
ಕಲಬುರಗಿ: ಮೂವರ ಬಂಧನ
Related Articles
Advertisement
ವಿಜಯಪುರದಲ್ಲಿ ಐವರ ಬಂಧನ
ವಿಜಯಪುರದಲ್ಲಿ ರೆಮಿಡಿಸಿವಿರ್ ಕಾಳಸಂತೆ ಮಾರಾಟಕ್ಕಾಗಿ ಐವರನ್ನು ಬಂಧಿಸಿದ್ದು, ಡಿಎಚ್‌ಒ ಡಾ| ರಾಜಕುಮಾರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ದಾವಣಗೆರೆಯಲ್ಲಿ ಇಬ್ಬರ ಬಂಧನ
ದಾವಣಗೆರೆಯಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆ ಫಾರ್ಮಸಿಸ್ಟ್ ಜಿ. ಮಂಜುನಾಥ ರಾವ್ ಮತ್ತು ದಿನಗೂಲಿ ನೌಕರ ಗಣೇಶ್ ಎಂಬವರನ್ನು ಬಂಧಿಸಲಾಗಿದೆ. ಜಿಲ್ಲಾಸ್ಪತ್ರೆ ಹಿಂಭಾಗ ಆಟೋದಲ್ಲಿ ರೆಮಿಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ವೇಳೆ ಗಣೇಶ್‌ನನ್ನು ಬಂಧಿಸಕೊಳ್ಳಲಾಗಿತ್ತು. ಆತ ನೀಡಿದ ಸುಳಿವಿನ ಮೇರೆಗೆ ಮಂಜುನಾಥ ರಾವ್‌ನನ್ನು ಬಂಧಿಸಲಾಗಿತ್ತು.
ಹೇಗಿದೆ ದಂಧೆ ?
ರೆಮಿಡಿಸಿವಿರ್ ಔಷಧ ಉತ್ಪಾದಿಸುವ ಕಂಪೆನಿಗಳು ಮತ್ತು ಸಗಟು ವ್ಯಾಪಾರಿಗಳು ಈ ಮಾಫಿಯಾದಲ್ಲಿ ತೊಡಗಿವೆ. ಮೂರನೇ ವ್ಯಕ್ತಿ ಮತ್ತು ಸಂಸ್ಥೆಯ ಮೂಲಕ ಔಷಧ ಮಳಿಗೆಗಳಲ್ಲಿ ರೆಮಿಡಿಸಿವಿರ್ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ಸ್ವಯಂಸೇವಕರ ಹೆಸರಿನಲ್ಲಿ ಕೆಲವರು ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಸಿಲಿಂಡರ್ ಕೊಡಿಸುವುದಾಗಿ ಮೋಸ ಮಾಡುತ್ತಿದ್ದಾರೆ. ಇವರ ಮೋಸಕ್ಕೆ ವಾಟ್ಸ್‌ಆ್ಯಪ್ ಗ್ರೂಪ್‌ಗಳು ವೇದಿಕೆಯಾಗುತ್ತಿವೆ. ಕೆಲವು ಸ್ವಯಂಸೇವಕರು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡು ನೊಂದವರಿಗೆ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ನುಸುಳುವ ವಂಚಕರು ಹಾಸಿಗೆ, ಆಮ್ಲಜನಕ ಕೊಡಿಸುವುದಾಗಿ ಹೇಳಿ ಮುಂಗಡ ಹಣ ವಸೂಲಿ ಮಾಡುತ್ತಿದ್ದಾರೆ.
3,7504,000 ರೆಮಿಡಿಸಿವಿರ್ ದರ ನಿಗದಿ
ಸರಕಾರವು ರೆಮಿಡಿಸಿವಿರ್ ಉತ್ಪಾದಿಸುವ ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, 3,750-4,000 ರೂ. ಬೆಲೆಯಲ್ಲಿ ವಿತರಿಸುವಂತೆ ಸೂಚಿಸಿದೆ. ಅದಕ್ಕಿಂತ ಹೆಚ್ಚಿನ ಬೆಲೆ ನಿಗದಿ ಪಡಿಸುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಬೆಲೆ ಪಡೆದರೆ ಕಾನೂನು ಕ್ರಮದ ಜತೆಗೆ ಒಡಂಬಡಿಕೆ ರದ್ದುಪಡಿಸುವ ಎಚ್ಚರಿಕೆ ನೀಡಿದೆ. ಮೆಡಿಕಲ್ ಸ್ಟೋರ್‌ಗಳಲ್ಲಿ ರೆಮಿಡಿಸಿವಿರ್ ಮಾರಾಟಕ್ಕೆ ಅವಕಾಶವಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಕಾಳಸಂತೆಯಲ್ಲಿ 20,000 ರೂ.ಗಳಿಗೆ ಮಾರಾಟವಾಗುತ್ತಿರುವುದು ವರದಿಯಾಗಿದೆ.
ಯಾಕೆ ಈ ಸಮಸ್ಯೆ?
ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಹಾಸಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಹಾಸಿಗೆಗಳು ಲಭ್ಯವಾಗದಿರುವುದು ಬೆಡ್ ಬ್ಲಾಕಿಂಗ್ ದಂಧೆಗೆ ದಾರಿ ಮಾಡಿಕೊಟ್ಟಿವೆ. ಸೋಂಕು ಹೆಚ್ಚಿರುವ ಬೆಂಗಳೂರಿನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಅನಿವಾರ್ಯವಾಗಿ ಖಾಸಗಿಯ ಮೊರೆಹೋಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ.
ಖಾಸಗಿಯಲ್ಲಿ ಕಾದಿರಿಸುವಿಕೆ
ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳು ಸರಕಾರಕ್ಕೆ ಶೇ. 50ರಷ್ಟು ಹಾಸಿಗೆ ನೀಡಿಲ್ಲ. ನೇರವಾಗಿ ಅಥವಾ ಪರಿಚಯಸ್ಥರು, ಪ್ರಭಾವಿಗಳ ಮೂಲಕ ಕೇಳಿದರೆ ಸರಕಾರಕ್ಕೆ ನೀಡದೆ ಖಾಲಿ ಇರುವ ಹಾಸಿಗೆಗಳನ್ನು ಆಸ್ಪತ್ರೆ ವೈದ್ಯರು, ಸಿಬಂದಿಯೇ ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ.
ಕೊರೊನಾಹೆಸರಿನಲ್ಲಿ ನಡೆಯು ತ್ತಿರುವ ಅಕ್ರಮ ವ್ಯವಹಾರ ಸಂಬಂಧ ಈಗಾಗಲೇ ಬೆಂಗಳೂರು ಸಹಿತ ರಾಜ್ಯದ ಎಲ್ಲೆಡೆ ಕಾರ್ಯಾಚರಣೆಗೆ ಸೂಚಿಸಲಾಗಿದೆ.
-ಪ್ರತಾಪ್ ರೆಡ್ಡಿ, ಎಡಿಜಿಪಿ, ರಾಜ್ಯ ಕಾನೂನು ಸುವ್ಯವಸ್ಥೆ