Advertisement

ಕೋವಿಡ್ ಅಬ್ಬರ: ಹೂವು, ಹಣ್ಣು ,ತರಕಾರಿ ವ್ಯಾಪಾರಿಗಳು ಕಂಗಾಲು

08:20 PM May 01, 2021 | Team Udayavani |

ಪಣಜಿ: ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ತರಕಾರಿ, ಹೂವು, ಹಣ್ಣು ಅಂಗಡಿಯಲ್ಲಿಯೇ ಕೊಳೆತುಹೋಗುವಂತಾಗಿತ್ತು. ಇದರಿಂದಾಗಿ ವ್ಯಾಪಾರಸ್ಥರು ಹೆಚ್ಚಿನ ನಷ್ಠ ಅನುಭವಿಸುವಂತಾಗಿತ್ತು. ಇದರಿಂದಾಗಿ ಪ್ರಸಕ್ತ ವರ್ಷವೂ ಕೂಡ ಇಂತಹ ವ್ಯಾಪಾರಿಗಳು ಅದೇ ಭೀತಿ ಎದುರಿಸುವಂತಾಗಿದೆ.

Advertisement

ಕರ್ನಾಟಕ ಮತ್ತು ಗೋವಾದಲ್ಲಿ ಸದ್ಯ ಲಾಕ್‍ಡೌನ್ ಜಾರಿಯಲ್ಲಿದ್ದರೂ ಕೂಡ ಕರ್ನಾಟಕದಿಂದ ಗೋವಾಕ್ಕೆ ಬರುವ ತರಕಾರಿ, ಹೂವು, ಹಣ್ಣು, ಹಾಲು, ಕಿರಾಣಿ ಸಾಮಾನು ಇವುಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ.

ಆದರೆ ಗೋವಾದಲ್ಲಿ ಎಲ್ಲಾ ಮಾರುಕಟ್ಟೆ ಪ್ರದೇಶಗಳಲ್ಲಿ ಪೋಲಿಸರು ಹೆಚ್ಚಿನ ಕಟ್ಟೆಚ್ಚರ ವಹಿಸಿರುವುದರಿಂದ ಕರ್ನಾಟಕದಿಂದ ಅಗತ್ಯ ವಸ್ತುಗಳ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಿದ್ದರೂ ಕೂಡ ರಾಜ್ಯದ ವ್ಯಾಪಾರಸ್ಥರು ಗ್ರಾಹಕರ ಕೊರತೆ ಎದುರಿಸುವಂತಾಗಿದೆ.

ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಲಾಕ್‍ಡೌನ್ ಜಾರಿಯಾಗಿದ್ದರಿಂದ ಹೆಚ್ಚಿನ ನಷ್ಟ ಎದುರಿಸುವಂತಾಗಿತ್ತು. ಪ್ರಸಕ್ತವರ್ಷವೂ ಹಾಗೆಯೇ ಆಗುವುದಿಲ್ಲ ಎಂದು ಏನು ಗ್ಯಾರಂಟಿ…? ಇದರಿಂದಾಗಿ ಅಂಗಡಿಯಲ್ಲಿ ಹೆಚ್ಚಿನ ಸಾಮಾನುಗಳನ್ನು ತರಿಸಿಕೊಳ್ಳಲು ಕೂಡ ಭಯವಾಗುತ್ತದೆ ಎಂದು ಪಣಜಿ ಮಾರುಕಟ್ಟೆಯ ಹಲವು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next