ಬೆಂಗಳೂರು: ಲಾಕ್‌ಡೌನ್‌ನಿಂದ ಜೀವನನಿರ್ವಹಣೆಯೇ ಕಷ್ಟಕರವಾಗಿದೆ. ಹಬ್ಬ, ಸಭೆ,ಸಮಾರಂಭಗಳು ನಡೆಯುತ್ತಿಲ್ಲ. ನಿತ್ಯ ಬಳಕೆಗೆಹೂವು ಕೊಳ್ಳುವವರು ಇಲ್ಲದಾಗಿದೆ. ಮಾರುಕಟ್ಟೆಬಂದ್ ಹಿನ್ನೆಲೆ ತಳ್ಳುಗಾಡಿ ಮೂಲಕ ಬೆಳಗಿನಿಂದಸಂಜೆಯವರೆಗೆ ನಗರದ ವಿವಿಧ ಬಡಾವಣೆ,ಗಲ್ಲಿಗಳನ್ನು ಸುತ್ತಿದರೂ ತಳ್ಳುಗಾಡಿಯಲ್ಲಿರುವಅರ್ಧದಷ್ಟೂ ವಸ್ತುಗಳು ಖಾಲಿ ಆಗುತ್ತಿಲ್ಲ.
ಇದು, ರಾಜಧಾನಿಯಲ್ಲಿ ತಳ್ಳುಗಾಡಿ ಮೂಲಕಹಣ್ಣು, ತರಕಾರಿ ಹಾಗೂ ಹೂವಿನ ವ್ಯಾಪಾರಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವಸಣ್ಣಪುಟ್ಟ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಷ್ಟ.ಕೊರೊನಾ ಕಡಿವಾಣಕ್ಕೆ ಜಾರಿಗೊಳಿಸಿರುವಲಾಕ್‌ಡೌನ್‌ನಿಂದ ಹಲವು ಕ್ಷೇತ್ರದ ಜನರ ಜೀವನನಿರ್ವಹಣೆ ಕಷ್ಟಕರವಾಗಿದೆ.
ಅದರಲ್ಲೂ,ತಳ್ಳುಗಾಡಿಗಳ ಮೂಲಕವೇ ಹೂವು, ಹಣ್ಣು,ತರಕಾರಿ ವ್ಯಾಪಾರ ಮಾಡಿಕೊಂಡಿಕೊಂಡು ಜೀವನನಡೆಸುತ್ತಿರುವವರ ಸಂಕಷ್ಟ ಹೇಳತೀರದಾಗಿದೆ.ಅಗತ್ಯ ವಸ್ತುಗಳಲ್ಲಿ ಹಣ್ಣು, ಹೂವು ಮತ್ತುತರಕಾರಿ ಬರುವ ಹಿನ್ನೆಲೆ, ಈ ವ್ಯಾಪಾರಿಗಳಿಗೆಅಷ್ಟೇನೂ ಸಮಸ್ಯೆ ಎದುರಾಗಿಲ್ಲ. ಆದರೆ,ಅಲಂಕಾರ, ಪೂಜೆಗೆ ಮತ್ತು ವಿಶೇಷಸಮಾರಂಭಗಳಿಗೆ ಬಳಕೆಯಾಗುತ್ತಿದ್ದ ಹೂವುಗಳನ್ನುಖರೀರಿಸುವವರೇ ಇಲ್ಲದಂತಾಗಿದೆ.ಕೆ.ಆರ್ ಮಾರುಕಟ್ಟೆ ಸಮೀಪದಿಂದ ಹೂವನ್ನುಕೊಂಡು ತಂದು ವ್ಯಾಪಾರ ಮಾಡುತ್ತಿದ್ದೇನೆ.
ನಾಳೆಪೊಲೀಸರು ಅಲ್ಲಿಂದ ಎಲ್ಲಿಗೆ ಕಳುಹಿಸುತ್ತಾರೋಗೊತ್ತಿಲ್ಲ. ಮತ್ತೆ ನಾಳೆ ಹೂವು ಖರೀದಿಗೆಅಲೆದಾಡಬೇಕು. ಲಾಕ್‌ಡೌನ್ ನಮ್ಮಂಥ ಸಣ್ಣಪುಟ್ಟವ್ಯಾಪಾರಿಗಳ ಬದುಕನ್ನು ಸಾಕಷ್ಟು ಸಮಸ್ಯೆಗೆದೂಡಿದೆ ಎಂದು ಪೀಣ್ಯದ ತಳ್ಳುಗಾಡಿ ಹೂವಿನವ್ಯಾಪಾರಿಯೊಬ್ಬರು ತಮ್ಮ ಸಮಸ್ಯೆ ಬಿಚ್ಚಿಟ್ಟಿದ್ದಾರೆ.ಹೂವು ಖರೀದಿಯೇ ಸವಾಲು: ಮಾರುಕಟ್ಟೆ ಬಂದ್‌ಹಿನ್ನೆಲೆ ತರಕಾರಿ, ಹಣ್ಣು ಹಾಗೂ ಹೂವಿನ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದೆ.
ನಿತ್ಯ ಅಗತ್ಯಕ್ಕೆ ತಕ್ಕಂತೆಕೊಳ್ಳುವ ತರಕಾರಿ, ಹಣ್ಣು, ಹೂವು ಎಲ್ಲಿ ಸಿಗುತ್ತದೆಎಂದು ಅಲೆದಾಡುತ್ತಿದ್ದೇವೆ. ಕೆ.ಆರ್.ಮಾರುಕಟ್ಟೆ,ಬಂಬು ಬಜಾರ್, ಸುಮನಹಳ್ಳಿ ಸೇರಿದಂತೆ ವಿವಿಧಮಾರುಕಟ್ಟೆಗಳನ್ನು ತಿರುಗುತ್ತೇವೆ. ಎಲ್ಲಿ ನಮಗೆಲಭ್ಯವಾಗುತ್ತದೆಯೋ ಅಲ್ಲಿ ಹೆಚ್ಚು ಬೆಲೆಯಾದರೂಖರೀದಿಸಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ತಳ್ಳುಗಾಡಿ ಹಣ್ಣಿನ ವ್ಯಾಪಾರಿ ರಾಮಾಂಜಿನಪ್ಪ ತಿಳಿಸಿದ್ದಾರೆ.