ಚೇಳೂರು: ಪ್ರಸ್ತುತ ವರ್ಷ ಮಾವಿನ ಇಳುವರಿ ಕಡಿಮೆ ಇದ್ದರೂ,ಬಂದತಹ ಇಳುವರಿಗೆ ಸರಿಯಾದ ಬೆಲೆಯೂ ಇಲ್ಲ. ಜತೆಗೆಕೊರೊನಾದ ಸೋಂಕಿನಿಂದ ಮಾವು ಬೆಳೆಗಾರರು ಹಾಗೂವರ್ತಕರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರು ವಾಸಿಯಾದ ಮಾರುಕಟ್ಟೆ ಗುಬ್ಬಿ ತಾಲೂಕಿನ ಚೇಳೂರು. ಈ ವರ್ಷ ಮಾವಿನ ಇಳುವರಿ ಕಡಿಮೆಯಾಗಿದ್ದು, ಇದಕ್ಕೆ ಸೂಕ್ತವಾದ ಬೆಲೆ ಸಿಗದೆ ರೈತರುಆತಂಕಕ್ಕಿಡಾಗಿದ್ದಾರೆ. ಗಿಡದಿಂದ ಕಟಾವು ಮಾಡಿ ಕೊರೊನಾ ಮಾರ್ಗಸೂಚಿ ಅನ್ವಯ ಮಾರುಕಟ್ಟೆಗೆ ತಂದರೆ ಕೊರೊನಾಪರಿಣಾಮ ಕೇಳುವವರು ಇಲ್ಲವಾಗಿದೆ.
ಇಳಿದ ಮಾವಿನ ದರ: ಚೇಳೂರಿನ ಎಪಿಎಂಸಿ ಉಪಮಾರುಕಟ್ಟೆಯಲ್ಲಿ 21 ಮಾವಿನ ಮಂಡಿಗಳು ಜತೆಗೆ ಗ್ರಾಮದ ಸುತ್ತಹಲವು ಮಾವಿನ ಮಂಡಿಗಳಿವೆ. ಬಾದಮಿಗೆ 20 ರಿಂದ 23 ರೂ.,ರಸಪುರಿಗೆ 8 ರಿಂದ 10 ರೂ. ಮಲಗೋವಾಗೆ 15 ರಿಂದ 20 ರೂ.,ತೊತ್ತಪುರಿಗೆ 6 ರಿಂದ 8 ರೂ., ಸೆಂದೊರೂ 6 ರಿಂದ 8 ರೂ.,ಬಾನೀಷ್ 10 ರಿಂದ 12 ರೂ. ಹಾಗೂ ನಾಟಿಮಾವುಗೆ 8 ರೂ.ಕೆ.ಜಿ.ಗೆ ಮಾತ್ರ ಸಿಗುತ್ತಿದೆ. ರೈತರು ಇದರ ಜತೆಗೆ ಮಂಡಿ ವರ್ತಕರಿಗೆಕಮಿಷನ್ ಸಹ ನೀಡಬೇಕಾಗಿದೆ.ಮೊದಲು ವರ್ತಕರು ರೈತರಿಂದ ಮಾವುಖರೀದಿ ಮಾಡಿ ಬಿಜಾಪುರ, ದೆಹಲಿ, ಪೂನಾಹಾಗೂ ಇತರೆ ಹಲವು ಕಡೆ ಲೋಡ್‌ಗಟ್ಟಲೇಪ್ರತಿದಿನ ಮಾವು ಕಳಿಸುತ್ತಿದ್ದರು. ಲಾಕ್‌ಡೌನ್‌ಹಿನ್ನೆಲೆ ಈಗ ಈ ಮಾರುಕಟ್ಟೆಗೆ ಮಾವು ಖರೀದಿಮಾಡುವ ವರ್ತಕರು ಬರುತ್ತಿಲ್ಲ.
ಜ್ಯೂಸ್ ಅಂಗಡಿಗಳಿಗೆ ಸರಬರಾಜು: ಈಗಜ್ಯೂಸ್‌ಮಾಡುವಪ್ಯಾಕ್ಟರಿಗಳಾದಬೆಂಗಳೂರು,ಕೃಷ್ಣಗಿರಿ, ಧಾರವಾಡ, ಬೆಳಗಾವಿ, ಪೂನಾದಂತಹಪಟ್ಟಣಗಳಿಗೆ ಅವರ ಬೇಡಿಕೆಯಂತೆ ಮಾವುಕಳಿಸುತ್ತಿದ್ದೇವೆ. ಇಲ್ಲಿ ಬಂದು ವಹಿವಾಟು ಮಾಡುವುದರಿಂದ ಸೋಂಕುಹರಡಬಾರದೆಂದುಮಾರುಕಟ್ಟೆಯಸುತ್ತ ಸ್ಯಾನಿಟೈಸ್ ಮಾಡಿ ವ್ಯವಹಾರವನ್ನು ಮಾಡುತ್ತಿದ್ದೇವೆಎಂದು ವರ್ತಕರು ತಿಳಿಸಿದ್ದಾರೆ.
ಸಿ.ಟಿ.ಮೋಹನ್‌ರಾವ್