Advertisement

ಹಲಸನ್ನು ಕಡಿಮೆ ಬೆಲೆಗೆ ಮಾರುವ ಸ್ಥಿತಿ

04:08 PM May 22, 2021 | Team Udayavani |

ದೊಡ್ಡಬಳ್ಳಾಪುರ: ಕೊರೊನಾ ಲಾಕ್‌ಡೌನ್‌ ಪರಿಣಾಮ ಹಲಸು ಮಾರಾಟದ ಮೇಲೂ ಬಿದ್ದಿದ್ದು,ತಾಲೂಕಿನಲ್ಲಿ ಹಲಸು ಕೊಳ್ಳುವವರಿಲ್ಲದೇ ರೈತರುತಂದಿರುವ ಹಲಸನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಂಗಳೂರು ಹಿಂದೂಪುರ ಹೆದ್ದಾರಿಯ ನಗರದಹೊರವಲಯದ ಟಿ.ಬಿ ವೃತ್ತದ ಬಳಿಯ ರಸ್ತೆಯಬದಿಯಲ್ಲಿ ಪ್ರತಿವರ್ಷ ಹಲಸಿನ ಸೀಸನ್‌ನಲ್ಲಿ ಹಲಸಿನ ಹಣ್ಣುಗಳ ರಾಶಿ ಕಾಣುತ್ತಿತ್ತು, ಆದರೆ ಈ ಬಾರಿಫಸಲು ಬಂದಿದ್ದರೂ ಮಾರಾಟದ ಭರಾಟೆ ಕಾಣುತ್ತಿಲ್ಲ. ತಾಲೂಕಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮಾರಾಟಕ್ಕೆ ತೊಡಕಾಗಿದ್ದು, 10 ಗಂಟೆಯ ನಂತರ ಇಲ್ಲಿಮಾರಾಟ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದುಹಲಸು ಮಾರಾಟಗಾರರು ದೂರುತ್ತಾರೆ.

ತೂಬಗೆರೆ ಹೋಬಳಿ ಹಲಸು ಹೆಸರುವಾಸಿ,ಇದರೊಂದಿಗೆ ಕಸಬಾ ದೊಡ್ಡಬೆಳವಂಗಲ ಹೋಬಳಿಗಳಲ್ಲಿಯೂ ಹಲಸು ಬೆಳಯುತ್ತಾರೆ. ಹಲಸಿನಹಣ್ಣುಗಳು ಗಾತ್ರಕನ್ನನುಗುಣವಾಗಿ 50 ರಿಂದ 100ರೂಗಳವರೆಗೆ ಮಾರಾಟವಾಗುತ್ತಿವೆ. ನೆರೆಯ ಆಂಧ್ರಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸನ್ನುಖರೀದಿಸಲು ಆಗಮಿಸುತ್ತಿದ್ದರು.

ಆದರೆ ಕೊರೊನಾಲಾಕ್‌ಡೌನ್‌ ಹಿನ್ನಲೆಯಲ್ಲಿ ಆಂಧ್ರ ಹಾಗೂ ಹೊರಪ್ರದೇಶಗಳಿಂದ ಬರುವವರು ತೀರಾಕಡಿಮೆ ಆಗಿದೆ.

ಸಗಟು ಮಾರಾಟ ಕುಸಿತ: ಹಲಸಿನ ತೋಪುಗಳುಕಡಿಮೆಯಾಗುತ್ತಿದ್ದರೂ ತೋಟಗಳಲ್ಲಿ ಬೆಳಸಿರುವಹಲಸಿನ ಮರಗಳಲ್ಲಿ ಸೀಸನ್‌ನ6ತಂಗಳ ಮುಂಚೆಯೇ ವ್ಯಾಪಾರ ಮಾಡಿ ಅಡ್ವಾನ್ಸ್‌ನೀಡಲಾಗುತ್ತಿತ್ತು.

Advertisement

ಆದರೆ ಈ ಬಾರಿ ಕೊರೊನಾಪರಿಣಾಮ ರೈತರ ತೋಟಗಳಿಗೆ ಅಷ್ಟಾಗಿ ವ್ಯಾಪಾರಮಾಡಿಲ್ಲ. ಪರಿಸ್ಥಿತಿ ನೋಡಿ ಖರೀದಿ ಮಾಡೋಣಎಂದು ಮಾರಾಟಗಾರರು ಮುಂದೂಡಿದ್ದರಿಂದತೋಟಗಳಲ್ಲಿ ಹಣ್ಣುಗಳು ಹಾಗೆಯೇ ಉಳಿಯುತ್ತಿವೆಎನ್ನುತ್ತಾರೆ ಹಲಸು ಬೆಳೆದ ರೈತರು.

ಪ್ರತಿವರ್ಷ ರೈತರ ತೋಟದಲ್ಲಿ ಖರೀದಿಸುತ್ತಿದ್ದೇವೆ.ಒಂದು ಹುಂಡಿಗೆ (ಗುಡ್ಡೆ) ಸುಮಾರು 100ರಿಂದ200 ಕಾಯಿಗಳು ಇರುತ್ತವೆ. ಸಾಮಾನ್ಯವಾಗಿಕಾಯಿಗಳ ಗಾತ್ರದ ಮೇಲೆ ಹುಂಡಿಗೆ2 ಸಾವಿರದಿಂದ5 ಸಾವಿರದವರೆಗೆ ಬೆಲೆ ಇರುತ್ತದೆ. ಆದರೆ ಈ ಬಾರಿ ಕೊರೊನಾ ಪರಿಣಾಮದಿಂದ ಬೆಲೆ ಕಡಿಮೆಯಾಗಿದ್ದು, ನಾವು ಖರೀದಿಸಿ ಅಡ್ವಾನ್ಸ್‌ ನೀಡಿದ್ದ 150 ಮರಗಳಫಸಲನ್ನು ಮಾರಾಟ ಮಾಡುವುದು ಹೇಗೆ ಎಂಬಚಿಂತೆ ಎದುರಾಗಿದೆ ಎನ್ನುತ್ತಾರೆ ಮಾರಾಟಗಾರರು.

ತೋಟಗಳಲ್ಲಿ ಕಾಯಿ ಕೀಳಲು ಕೂಲಿಕಾರರಸಮಸ್ಯೆ ಎದುರಾಗಿದೆ. ಆಂಧ್ರಕ್ಕೆ ನಾವೇ ವಾಹನದಲ್ಲಿ ಹೋಗಿ ಮಾರಾಟ ಮಾಡಲು ಸಿದ್ದರಾದರೂ ಈಗಿನ ಸಂದರ್ಭದಲ್ಲಿ ಅವರು ಕೇಳಿದ ಬೆಲೆಗೆ ನಾವು ಮಾರಾಟ ಮಾಡಿ ಬರಬೇಕಿದೆ ಎನ್ನುತ್ತಾರೆ ಹಲಸು ಮಾರಾಟಗಾರ ನೆಲ್ಲುಕುಂಟೆ ಮಂಜುನಾಥ್‌.

Advertisement

Udayavani is now on Telegram. Click here to join our channel and stay updated with the latest news.

Next