ಬೆಂಗಳೂರು: ಅಗತ್ಯವಸ್ತು ಮತ್ತು ತುರ್ತು ಸೇವೆನೆಪದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆಡಿಜಿಟಲ್ ಎಫ್ಟಿವಿಆರ್(ಡಿಜಿಟಲ್ ಕ್ಯಾಮೆರಾ)ಹಾಗೂ ಏನ್ಫೊರ್ಸ್‌ಮೆಂಟ್ (ಸಿಸಿ ಕ್ಯಾಮೆರಾ)ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡವಿಧಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಕೊರೊನಾ ಹಿನ್ನೆಲೆ ಲಾಕ್‌ಡೌನ್‌ಜಾರಿಗೊಳಿಸಲಾಗಿದೆ. ಮತ್ತೂಂದೆಡೆ ಸಂಚಾರಪೊಲೀಸ್ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಆರೋಗ್ಯದ ಹಿತದೃಷ್ಟಿಯಿಂದ ಸಂಚಾರ ನಿಯಮಉಲ್ಲಂ ಸುವ ಸವಾರ/ವಾಹನಗಳನ್ನುಭೌತಿಕವಾಗಿತಡೆದು ನಿಲ್ಲಿಸುವ ಪ್ರಕ್ರಿಯೆ ತಾತ್ಕಾಲಿಕವಾಗಿನಿರ್ಬಂಧಿಸಲಾಗಿದೆ.
ಈ ಮಧ್ಯೆ ಅಗತ್ಯ ಸೇವೆಗಳಹೆಸರಿನಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು,ಸಂಚಾರ ನಿಯಮಗಳ ಉಲ್ಲಂಘನೆ ಕಂಡುಬಂದಹಿನ್ನೆಲೆಯಲ್ಲಿ ಡಿಜಿಟಲ್ ಮೂಲಕ ದಂಡ ವಿಧಿಸಲುಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಡಿಜಿಟಲ್ ಎಫ್ಟಿವಿಆರ್‌ಹಾಗೂ ನಗರದ ರಸ್ತೆಗಳು, ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಹಾಗೂ ಸಂಚಾರಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿತೆಗೆಯುವ ಮೊಬೈಲ್ ಫೋಟೋಗಳನ್ನು ಆಧರಿಸಿಸಂಚಾರ ನಿಯಮ ಉಲ್ಲಂ ಸುವ ವಾಹನಗಳನೋಂದಣಿ ಸಂಖ್ಯೆ ಆಧರಿಸಿ ಮಾಲೀಕರ ವಿರುದ್ಧಪ್ರಕರಣ ದಾಖಲಿಸಲಾಗುತ್ತದೆ ಎಂದು ಸಂಚಾರಪೊಲೀಸರು ತಿಳಿಸಿದರು.
ವರ್ಚುವಲ್ ಸಭೆ: ಅನಗತ್ಯ ವಾಹನ ಸಂಚಾರನಿಯಂತ್ರಣ ಹಾಗೂ ಕೊರೊನಾ ಮಾರ್ಗಸೂಚಿಪಾಲನೆ ಕುರಿತು ನಗರ ಸಂಚಾರ ವಿಭಾಗದ ಜಂಟಿಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡಗುರುವಾರ ನಗರದ ಎಲ್ಲ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ಗಳ ಜತೆ ವಚುìವ ಲ್ ಸಭೆ ನಡೆಸಿದರು. ಈವೇಳೆ ಕರ್ತವ್ಯದ ಲೋಪ, ಅಧಿಕಾರಿ-ಸಿಬ್ಬಂದಿಯೋಗಕ್ಷೇಮ, ಕೊರೊನಾ ಹಿನ್ನೆಲೆ ಕೈಗೊಳ್ಳಬೇಕಾದಮುಂಜಾಗ್ರತ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿನಿಯಮ ಪಾಲಿಸುವಂತೆ ಸೂಚಿಸಿದ್ದಾರೆ.
ಅಮಾನತು: ಇತ್ತೀಚೆಗೆ ನಗರ ಪೂರ್ವ ವಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದರೂಗೌರವ ನೀಡದ ಬಗ್ಗೆ ದೂರುಗಳು ಬಂದಿದ್ದು, ಈಕಾರಣಕ್ಕೆಕೆಲ ಸಿಬ್ಬಂದಿ ಅಮಾನತು ಮಾಡಲಾಗಿದೆ.ಹೀಗಾಗಿ ಇನ್ನು ಮುಂದೆ ಸ್ಥಳ ತಪಾಸಣೆಗೆ ಬರುವಹಿರಿಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಗೌರವನೀಡಬೇಕು. ಕಡ್ಡಾಯವಾಗಿ ಫೇಸ್‌ಶೀಲ್ಡ್ , ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಸ್ಯಾನಿಟೈಸರ್ ಬಳಸಬೇಕು. ಅನಗತ್ಯವಾಗಿ ಚೆಕ್‌ಪೋÓr…ಗಳನ್ನುಬಿಟ್ಟು ಹೋಗಬಾರದು,ಊಟ, ತಿಂಡಿವ್ಯವಸ್ಥೆ ಸ್ಥಳದಲ್ಲೇ ಮಾಡಿಕೊಳ್ಳಬೇಕು. ಜತೆಗೆಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಕುಟುಂಬ ಸದಸ್ಯರಿಗೂ ಲಸಿಕೆ ಹಾಕಿಕೊಳ್ಳಲು ಸೂಚಿಸಬೇಕೆಂದರು.
ಐದು ವರ್ಷಗಳ ಅಂತರದಲ್ಲಿ ಸೇವೆಗೆ ಸೇರಿದಅಧಿಕಾರಿ-ಸಿಬ್ಬಂದಿ ಸಾರ್ವಜನಿಕರ ಜತೆ ಅವಾಚ್ಯಶಬ್ದಗಳಿಂದ ಏರುದನಿಯಲ್ಲಿ ನಿಂದಿಸುತ್ತಿರುವುದುಕಂಡುಬಂದಿದೆ. ದೂರುಗಳು ಬಂದರೆ ಸೂಕ್ತ ಶಿಸ್ತುಕ್ರಮ ಜರುಗಿಸುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸ್‌ತಿಳಿಸಿವೆ.