Advertisement
ಕಳೆದ 2020ರ ಏಪ್ರಿಲ್ ತಿಂಗಳಲ್ಲಿ ದಿನಕ್ಕೆ 25ರಿಂದ30 ಸೋಂಕಿತರ ಪತ್ತೆ ಆಗುತ್ತಿದ್ದರು.ಆದರೆ, ಈ ವರ್ಷ ಕೊರೊನಾ 2ನೇಅಲೆ ತನ್ನ ವೇಗವನ್ನುಹೆಚ್ಚಿಸಿಕೊಂಡು ಒಂದೇ ಬಾರಿನೂರಾರು ಜನರಲ್ಲಿ ಸೋಂಕುಕಾಣಿಸಿಕೊಳ್ಳುತ್ತಿದೆ.ಕೊರೊನಾರ್ಭಟ ಹೆಚ್ಚುತ್ತಿದ್ದರೂ ಜನ ಕೊರೊನಾಮರೆತು ಎಲ್ಲ ಕಡೆ ಓಡಾಡುತ್ತಿದ್ದಾರೆ.
Related Articles
Advertisement
65 ಸೊಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ: ಕೊರೊನಾಸೋಂಕಿನಿಂದ ತೀವ್ರ ತೊಂದರೆಗೆ ಒಳಗಾಗಿರುವ 65ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ ಒಟ್ಟು 2,484 ಸಕ್ರಿಯ ಪ್ರಕರಣ ಇದ್ದುತೀವ್ರ ತೊಂದರೆಯಲ್ಲಿ ಇರುವವರಿಗೆ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಸೌಲಭ್ಯಇರುವವರಿಗೆ ಮನೆಯಲ್ಲಿಯೇ ವೈದ್ಯರ ಸಲಹೆಮೆರೆಗೆ ಚಿಕಿತ್ಸೆ ಪಡೆಯಲು ಸೂಚನೆ ನೀಡಲಾಗಿದೆ.ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ 15, ಖಾಸಗಿಆಸ್ಪತ್ರೆಯ ಐಸಿಯುನಲ್ಲಿ 35, ಡಿಸಿಎಚ್ ಐಸಿಯುನಲ್ಲಿ15 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕುತ್ತಿದೆ. ಜನರುಕೊರೊನಾ ರೋಗ ಲಕ್ಷಣ ಕಂಡು ಬಂದ ತಕ್ಷಣತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.ಈವರೆಗೆ ಸೋಂಕಿನಿಂದ 25,991 ಜನರುಗುಣಮುಖರಾಗಿ ಮನೆಗೆ ಹೋಗಿದ್ದಾರೆ.ಮೃತಪಟ್ಟಿರುವವರು ಕೊರೊನಾ ಜೊತೆಗೆ ಬೇರೆರೋಗಗಳು ಇದ್ದವರು ಹೆಚ್ಚು ಮೃತರಾಗಿದ್ದಾರೆಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.
ಆಕ್ಸಿಜನ್ ಸೌಲಭ್ಯ: ಕೊರೊನಾ ಸೋಂಕಿತರಿಗೆ ಚಿಕಿತ್ಸೆನೀಡಲು ಜಿಲ್ಲೆಯಲ್ಲಿ ಅಗತ್ಯವಾಗಿರುವ ವೆಂಟಿಲೇಟರ್,ಆಕ್ಸಿಜನ್ ಸೌಲಭ್ಯ ಕಲ್ಪಿಸಲಾಗಿದೆ. ತೀವ್ರ ಉಸಿರಾಟತೊಂದರೆ ಉಂಟಾದವರಿಗೆ ಐಸಿಯುನಲ್ಲಿ ಚಿಕಿತ್ಸೆನಿಡಲಾಗುತ್ತಿದೆ. ಈಗ ಹೆಚ್ಚು ಸರ್ಕಾರಿ ಆಸ್ಪತ್ರೆಗಳಲ್ಲಿಯೇಚಿಕಿತ್ಸೆ ನೀಡಲಾಗುತ್ತಿದ್ದು, ಮುಂದೆ ಸೋಂಕಿತರ ಸಂಖ್ಯೆಹೆಚ್ಚಾದರೆ ಎರಡು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿವೆಅಲ್ಲಿಗೆ ಕಳಿಸಲಾಗುವುದು. ನಂತರ ಹಂತ-ಹಂತವಾಗಿಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಮಾಡಲು ವ್ಯವಸ್ಥೆಮಾಡಲಾಗುವುದು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಎಂ.ಬಿ.ನಾಗೇಂದ್ರಪ್ಪ
ಚಿ.ನಿ.ಪುರುಷೋತ್ತಮ್.