ರಾಮನಗರ: ಪೊಲೀಸ್ ಆಗಬೇಕು ಎಂಬುದು ಜೀವನದ ಗುರಿ ಇಟ್ಟು ಕೊಂಡಿರುವ ಗ್ರಾಮೀಣಭಾಗದ ಯುವತಿಯೊಬ್ಬರು ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು. ಶಾಲೆಗಳು ಮುಚ್ಚಿರುವಕಾರಣ ಈಗ ಮಹಾತ್ಮ ಗಾಂಧಿ ರಾಷ್ಟ್ರೀಯಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ(ನರೇಗಾ)ಕೂಲಿ ಮಾಡುತ್ತಿದ್ದಾರೆ.
ಈಕೆ ಮಮತಾ, 24 ವರ್ಷ. ರಾಮನಗರಜಿಲ್ಲೆಯ ಕನಕಪುರ ತಾಲೂಕು ಕೊಳಗೊಂಡನಹಳ್ಳಿ ಗ್ರಾಪಂ ಹೊಸದೊಡ್ಡಿ ಗ್ರಾಮದಲ್ಲಿ. ತಂದೆ-ತಾಯಿ ಮತ್ತು ಸಹೋದರಿಯೊಂದಿಗೆ ವಾಸ.ಕಿರಿಯ ಸಹೋದರಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ- ತಾಯಿ ಮತ್ತು ಮಮತಾನರೇಗಾ ಜಾಬ್ ಕಾರ್ಡ್ ಹೊಂದಿದ್ದು, ಕೂಲಿಕೆಲಸಕ್ಕೆ ಹೋಗುತ್ತಿದ್ದಾರೆ.
ಪೊಲೀಸ್ ಆಗಬೇಕಿತ್ತು: ಆದರೆ ಮಮತಾ ಪಿಯುಸಿ ಮುಗಿಸಿದ್ದಾರೆ. ಪೊಲೀಸ್ ಆಗಬೇಕು ಎಂಬುದು ಜೀವನದ ಗುರಿ. ಆದರೆ, ಇದಕ್ಕೆ ಸಾಕಷ್ಟು ಹಣ ಬೇಕು. ಅಷ್ಟು ಹಣ ಹೊಂದಿಸಲು ಸಾಧ್ಯವಾಗದ ಕಾರಣ ಕೈ ಚೆಲ್ಲಬೇಕಾಯಿತು. ಓದು ಮುಂದುವರಿಸಲು ಮನಸ್ಸು ಬರಲಿಲ್ಲ.ಪೊಲೀಸ್ ಉದ್ಯೋಗದ ಆಸೆಯಿದ್ದರು ಶಿಕ್ಷಕಿಯಾಗುವ ಹಂಬಲವೂ ಇತ್ತು.ಮನೆಯ ಬಳಿಯಲ್ಲೇ ಇದ್ದ ಆಶ್ರಮ ಶಾಲೆಗೆಹೋಗುತ್ತಿದ್ದ ಮಕ್ಕಳನ್ನು ನೋಡಿ, ಅವರಿಗೆ ಪಾಠಮಾಡುವ ಆಸೆ ಚಿಗುರಿತು. ಸಂಜೆ ವೇಳೆಟ್ಯೂಷನ್ ಆರಂಭಿಸಿ, ಜೊತೆಗೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. 1ರಿಂದ 5ನೇ ತರಗತಿಗಳಲ್ಲಿ ಎಲ್ಲಾ ವಿಷಯಗಳಲ್ಲೂ ಪಾಠ ಬೋಧನೆಗೆ7ಸಾವಿರ ಸಂಬಳ. ಪೊಲೀಸ್ ಆಗಲಿಲ್ಲ, ಶಿಕ್ಷಕಿಯಾದ ಸಂತೃಪ್ತಿ ಇತ್ತು.
ಸಂತೃಪ್ತಿಗೆ ಕೊಳ್ಳಿ ಇಟ್ಟ ಕೋವಿಡ್!: ಈ ಸಂತೃಪ್ತಿಗೆ ಕೊಳ್ಳಿ ಇಟ್ಟಿದ್ದು ಕೋವಿಡ್! ಕೋವಿಡ್‌ಸೋಂಕು ಕಾರಣ ಕಳೆದ ಶೈಕ್ಷಣಿಕ ವರ್ಷದಿಂದಶಾಲೆ ನಡೆಯುತ್ತಿಲ್ಲ. ಹೀಗಾಗಿ ಈಕೆಗೆ ಸಂಬಳವೂ ಇಲ್ಲ. ಈಕೆಯದ್ದು ಸುಮ್ಮನೆ ಕೂರುವಜಾಯಮಾನವೂ ಅಲ್ಲ. ಹೀಗಾಗಿ ಕಳೆದ ಕೆಲವುತಿಂಗಳಿಂದ ನರೇಗಾ ಯೋಜನೆಯಡಿ ಕೂಲಿಮಾಡುತ್ತಿದ್ದಾರೆ. ಮನೆಯಿಂದ1 ಕಿ.ಮಿ ದೂರದಕೆರೆ ಕಾಮಗಾರಿಯಲ್ಲಿ ಮಣ್ಣು ಸಾಗಿಸುವ ಕೆಲಸ! ಖಾಸಗಿ ಶಾಲೆ ಶಿಕ್ಷಕರ ತೀರದ ಬವಣೆ:ಕೋವಿಡ್ ಕಾರಣ ಪೋಷಕರಿಗೆ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಶುಲ್ಕ ವಸೂಲಾಗದೆಆಡಳಿತ ಮಂಡಳಿಗಳು ತಮ್ಮ ಸಿಬ್ಬಂದಿಗೆ ವೇತನನೀಡಲು ಆಗುತ್ತಿಲ್ಲ. ಜೀವನೋಪಾಯಕ್ಕಾಗಿಖಾಸಗಿ ಶಾಲೆಗಳ ಕೆಲವು ಶಿಕ್ಷಕರು ರಸ್ತೆ ಬದಿಯಲ್ಲಿ ಆಹಾರ ಮಾರಾಟ, ಹೂ, ತರಕಾರಿ ಮಾರಿಜೀವನ ಸಾಗಿಸುತ್ತಿದ್ದಾರೆ. ಇದೇ ಸಾಲಿಗೆಮಮತಾ ಸೇರ್ಪಡೆಯಾಗಿದ್ದಾರೆ