Advertisement

ಅಂಗಡಿಗಳಲ್ಲಿ ಜನಸಂದಣಿಯಾಗದಂತೆ ನಿಗಾವಹಿಸಿ

08:55 PM May 21, 2021 | Team Udayavani |

ಚಾಮರಾಜನಗರ: ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳಗಿನ ವೇಳೆ ದಿನಸಿ, ಹಣ್ಣು,ತರಕಾರಿ, ಖರೀದಿಗಾಗಿ ಅಂಗಡಿಗಳ ಮುಂದೆ ಜನ ಜಂಗುಳಿಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ಅಧಿಕಾರಿಗಳ ಸಭೆ ನಡೆಸಿಮಾತನಾಡಿದ ಅವರು, ಸೋಂಕು ತಡೆಗಾಗಿ ಕೋವಿಡ್‌ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ರದಲ್ಲಿ 4 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ.

Advertisement

ಸೋಮವಾರದಿಂದ ಬುಧವಾರದವರೆಗೆ ಬೆಳಗಿನ ಸಮಯದಲ್ಲಿಮಾತ್ರ ದಿನಸಿ ಇತರೆ ಅಂಗಡಿ ತೆರೆಯಲುಅನುಮತಿ ನೀಡಲಾಗಿದೆ. ಈ ಅವಧಿಯಲ್ಲಿ ಹೆಚ್ಚು ಜನಸಂದಣಿಯಾಗುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಅವಶ್ಯಕಕ್ರಮಗಳಿಗೆ ಮುಂದಾಗಬೇಕೆಂದು ತಿಳಿಸಿದರು.

ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಸೋಂಕು ಹರಡಲು ಕಾರಣವಾಗಲಿದೆ. ದಿನಸಿ ಅಂಗಡಿಗಳೇ ಇರಲಿ ತರಕಾರಿ, ಹಣ್ಣು ಮಾರಾಟಸ್ಥಳಗಳೇ ಇರಲಿ ಎಲ್ಲಿಯೂ ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆಈ ಬಗ್ಗೆ ಜಾಗೃತಿ ಮೂಡಿಸಬೇಕು. ವರ್ತಕರು, ವ್ಯಾಪಾರಿಗಳಿಗೂ ಅಂತರದ ಮಹತ್ವದ ಬಗ್ಗೆ ತಿಳಿಸಿಕೊಡಬೇಕೆಂಕು ಎಂದು ಹೇಳಿದರು.

ಕೋವಿಡ್‌ ಕಾರಣದಿಂದ ತಾತ್ಕಾಲಿಕವಾಗಿ ಹೆಚ್ಚು ಜನರು ಸೇರುವಂತಹ ಸ್ಥಳವಾದಮಾರುಕಟ್ಟೆ ಅಂಗಡಿಗಳನ್ನು ವಿಶಾಲವಾದ ಸ್ಥಳಕ್ಕೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಜಾಗಗುರುತಿಸಿ ವರದಿ ನೀಡುವಂತೆ ನಗರಸಭೆಆಯುಕ್ತರಿಗೆ ಸೂಚನೆ ನೀಡಿದರು.ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಗ್ರಾಮಾಂತರ ಭಾಗಗಳಲ್ಲಿ ರ್ಯಾಟ್‌ ಮೂಲಕ ಸ್ಥಳದಲ್ಲಿಯೇ ಕೋವಿಡ್‌ ಪರೀಕ್ಷೆ ನಡೆಸಿ,ಸೋಂಕು ಹರಡದಂತೆ ನೋಡಿಕೊಳ್ಳಬೇಕು.ಕೋವಿಡ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಕೇಂದ್ರಗಳಕಾರ್ಯ ನಿರ್ವಹಣೆ, ಲಸಿಕಾಕರಣ ಮುಂದಿನ ಹಂತಗಳಲ್ಲಿ ಸಿದ್ಧಪಡಿಸಬೇಕಿರುವ ಕೋವಿಡ್‌ಕೇರ್‌ ಕೇಂದ್ರಗಳು ಹಾಗೂ ಇತರೆಮುಂಜಾಗ್ರತಾ ಕ್ರಮಗಳ ಕುರಿತು ಸಭೆಯಲ್ಲಿಚರ್ಚಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ,ಡಿವೈಎಸ್‌ಪಿ ಅನ್ಸರ್‌ ಅಲಿ, ಜಿಲ್ಲಾ ಸರ್ವಲೆನ್ಸ್‌ಅಧಿಕಾರಿ ಡಾ. ನಾಗರಾಜು, ಆರ್‌ಸಿಎಚ್‌ಅಧಿಕಾರಿ ಡಾ. ವಿಶ್ವೇಶ್ವರಯ್ಯ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next