ಮೈಸೂರು: ವರ್ಷಾಂತ್ಯಕ್ಕೆ ಎಲ್ಲರಿಗೂಮೊದಲ ಹಂತದ ಲಸಿಕೆ ನೀಡಲಾಗುವುದುಮತ್ತು ರಾಜ್ಯದಲ್ಲಿ 100 ಸಂಖ್ಯೆಯಲ್ಲಿ ಬ್ಲ್ಯಾಕ್‌ಫಂಗಸ್ ಇದೆ ಎಂದು ಉಪಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನ್‌ಅಂತಿಮ ಅಸ್ತ್ರ. ಬರುವ ತಿಂಗಳಲ್ಲಿ ಸಾಕಷ್ಟುವ್ಯಾಕ್ಸಿನ್ ತಯಾರಾಗಲಿದೆ. ಈ ವರ್ಷಾಂತ್ಯಕ್ಕೆರಾಜ್ಯದ ಎಲ್ಲರಿಗೂ ಮೊದಲ ಲಸಿಕೆ ಕೊಡುವಗುರಿ ಹೊಂದಿದ್ದೇವೆ ಎಂದರು.
ಬ್ಲ್ಯಾಕ್ ಫಂಗಸ್‌ನಿಂದ ರಾಜ್ಯದಲ್ಲಿಯಾವುದೇ ಸಾವು ಸಂಭವಿಸಿರುವ ಮಾಹಿತಿಇಲ್ಲ. ಸದ್ಯ ಚಿಕಿತ್ಸೆಗೆ ಕೊರತೆ ಇದೆ ಎಂದುಕೇಂದ್ರ ಸರ್ಕಾರಕ್ಕೆ ನಾವು ಮನವಿಮಾಡಿದ್ದೇವೆ. ಕೆಲವೇ ವಾರಗಳಲ್ಲಿ ಅಗತ್ಯಔಷಧ ಪೂರೈಕೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಂಡ್ಯದಲ್ಲಿ 3 ಪ್ರಕರಣಕಂಡುಬಂದಿತ್ತು ಎಂದು ಹೇಳಲಾಗಿತ್ತು,
ಆದರೆ ಈ 3ರ ಪೈಕಿ 2 ಬ್ಲ್ಯಾಕ್ ಫಂಗಸ್ ಅಲ್ಲ.ಮೈಸೂರಿನ ಸಾವು ಪ್ರಕರಣದ ಬಗ್ಗೆಯೂ ಮಾಹಿತಿ ಇಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಸುವಬಗ್ಗೆ ಮುಖ್ಯಮಂತ್ರಿಗಳು ಮೇ23ರನಂತರ ನಿರ್ಧರಿಸುತ್ತಾರೆ. ರಾಜ್ಯದ ಪರಿಸ್ಥಿತಿಅವಲೋಕಿಸಿ, ಅಂಕಿ ಸಂಖ್ಯೆಗಳನ್ನುಪರಿಶೀಲಿಸಿ, ಪ್ರತಿ ಪಕ್ಷದ ನಾಯಕರ ಅಭಿಪ್ರಾಯ ಪಡೆದು ಮತ್ತಷ್ಟು ಬಿಗಿ ಕ್ರಮವಹಿಸಬೇಕಾದ ಅಥವಾ ಸಡಿಲ ಮಾಡಬೇಕುಎಂಬುದನ್ನು ತೀರ್ಮಾನಿಸುವರು ಎಂದರು.ಉತ್ಪಾದನೆಯಾದ ಶೇ.50 ಸ್ಪುಟ್ನಿಕ್-ವಿಲಸಿಕೆಯನ್ನು ಸರ್ಕಾರಕ್ಕೆ ನೀಡಬೇಕು.
ಬಾಕಿಶೇ.50 ಔಷಧವನ್ನು ಮುಕ್ತ ಮಾರುಕಟ್ಟೆಯಲ್ಲಿಮಾರಲು ಅವಕಾಶ ನೀಡಲಾಗುವುದು.ಭಾರತ್ ಬಯೋಟೆಕ್ ಸಂಸ್ಥೆ ಸೇರಿದಂತೆ ಬೇರೆಕಂಪನಿಗಳಿಗೆ ವಿಧಿಸಿದ್ದ ನಿಮಯಗಳೇ ಸ್ಪುಟ್ನಿಕ್‌ಗೂ ಅನ್ವಯ ಆಗಲಿದೆ ಎಂದು ಹೇಳಿದರು.