ಮಂಡ್ಯ: ಜಿಲ್ಲೆಯಲ್ಲಿ ಗುರುವಾರ 1,120 ಮಂದಿಗೆಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, 10 ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟ 10 ಮಂದಿಯ ಪೈಕಿ ಮಂಡ್ಯ ಹಾಗೂ ಹೊರ ಜಿಲ್ಲೆಯ ತಲಾ ಒಬ್ಬರು, ಮಳವಳ್ಳಿ, ಕೆ.ಆರ್.ಪೇಟೆ ತಲಾ 3 ಹಾಗೂ ನಾಗಮಂಗಲದಲ್ಲಿ ಇಬ್ಬರುಸಾವನ್ನಪ್ಪಿದ್ದಾರೆ. ಎಲ್ಲರೂ ಕೊರೊನಾ ಸೋಂಕಿನಜತೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಫಲಿಸದೆ ಮೃತಪಟ್ಟಿದ್ದಾರೆ.
ಇದರಿಂದ ಸಾವಿನಸಂಖ್ಯೆ382ಕ್ಕೇರಿದೆ.ಜಿಲ್ಲೆಯಾದ್ಯಂತ 734 ಮಂದಿಗೆ ಸೋಂಕು ಆವರಿಸಿದೆ. ಮಂಡ್ಯ212, ಮದ್ದೂರು119, ಮಳವಳ್ಳಿ 89,ಪಾಂಡವಪುರ87, ಶ್ರಿರಂಗಪಟ್ಟಣ 70,ಕೆ.ಆರ್.ಪೇಟೆ91, ನಾಗಮಂಗಲ 61 ಹಾಗೂ ಹೊರ ಜಿಲ್ಲೆಯ 5ಮಂದಿಗೆ ಸೋಂಕು ಆವರಿಸಿದೆ. ಇದುವರೆಗೂಜಿಲ್ಲೆಯಲ್ಲಿ ಒಟ್ಟು 53,749 ಪ್ರಕರಣಗಳು ದಾಖಲಾಗಿವೆ.
ಅದರಂತೆ 1,120 ಮಂದಿ ಸೋಂಕಿನಿಂದಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 46,407 ಮಂದಿ ಚೇತರಿಸಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು6,958 ಸಕ್ರಿಯ ಪ್ರಕರಣಗಳಿದ್ದು,ಇದರಲ್ಲಿ 680 ಸರ್ಕಾರಿ ಆಸ್ಪತ್ರೆ, 155 ಖಾಸಗಿಆಸ್ಪತ್ರೆ, 1055 ಮಂದಿ ಕೋವಿಡ್ ಕೇರ್‌ಸೆಂಟರ್ ಹಾಗೂ 5068 ಮಂದಿ ಮನೆಗಳಲ್ಲೇ ಚಿಕಿತ್ಸೆಪಡೆಯುತ್ತಿದ್ದಾರೆ.3,618 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು.
ಅದರಲ್ಲಿ 3,102 ಆರ್‌ಟಿಪಿಸಿಆರ್ ಹಾಗೂ 516ಮಂದಿಗೆ ರ್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು.ಇದುವರೆಗೂ ಒಟ್ಟು 7,29,934 ಮಂದಿಪರೀಕ್ಷೆಗೊಳಗಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ